ಜೈಪುರ
ರಾಜಸ್ಥಾನದ ರಾಜಧಾನಿ / From Wikipedia, the free encyclopedia
ಜೈಪುರ ಅಥವಾ ಜಯಪುರ ರಾಜಸ್ಥಾನ ರಾಜ್ಯದ ರಾಜಧಾನಿ.ಜೈಪುರವು ಭಾರತದ ಪಿಂಕ್ ಸಿಟಿ ಎಂದೇ ಪ್ರಸಿದ್ಧವಾಗಿದೆ[2]. ರಾಜಸ್ಥಾನದ ರಾಜಧಾನಿಯಾಗಿರುವ ಜೈಪುರವು ಒಂದು ಪುಟ್ಟ ಮರುಭೂಮಿಯಾಗಿದೆ. ಈ ಸುಂದರವಾದ ನಗರವನ್ನು ಕಟ್ಟಿದ್ದು ಅಂಬಾರದ ಮಹಾರಾಜ ಎರಡನೇ ಸವಾಯಿ ಜೈ ಸಿಂಗ್. ಬಂಗಾಳದ ವಾಸ್ತುಶಿಲ್ಪ ತಜ್ಞ ವಿದ್ಯಾಧರ ಭಟ್ಟಾಚಾರ್ಯ ಎಂಬುವವರ ಸಹಾಯದಿಂದ ರಾಜ ಇದನ್ನು ನಿರ್ಮಿಸಿದನಂತೆ. ವಾಸ್ತು ಶಾಸ್ತ್ರದ ಪ್ರಕಾರ ನಿರ್ಮಿಸಿದ ಭಾರತದ ಮೊದಲ ನಗರ ಇದು.ಈ ಪ್ರದೇಶವು ಹಿಂದೂ ವಾಸ್ತುಶಿಲ್ಪಕ್ಕೆ ಉತ್ತಮವಾದ ಉದಾಹರಣೆ. ಇದನ್ನು ಪೀಠಪಾದ ಅಥವಾ ಎಂಟು ಮಂಡಲದ ರೂಪದಲ್ಲಿ ನಿರ್ಮಿಸಲಾಗಿದೆ. ರಾಜ ಎರಡನೇ ಸವಾಯಿ ಜೈ ಸಿಂಗ್ಗೆ ಜ್ಯೋತಿಷ್ಯಶಾಸ್ತ್ರದ ಬಗ್ಗೆ ಉತ್ತಮ ತಿಳುವಳಿಕೆಯಿತ್ತು ಮತ್ತು ಈತ 9ನೇ ಸಂಖ್ಯೆ ಮತ್ತು ಅದರ ಗುಣಾಕಾರವನ್ನು ಹೆಚ್ಚು ಬಳಸಿದ್ದ. ಇದು ನಗರ ರಚನೆಯಲ್ಲೂ ಕಂಡುಬರುತ್ತದೆ. 9ನೇ ಸಂಖ್ಯೆಯು 9 ಗ್ರಹಗಳನ್ನು ಸೂಚಿಸುತ್ತದೆ.ಜೈಪುರವು ಕೋಟೆಗಳು, ಅರಮನೆಗಳು ಮತ್ತು ಹವೇಲಿಗಳಿಂದ ಆಕರ್ಷಣೆಯನ್ನು ಕಂಡುಕೊಂಡಿದೆ. ಜಗತ್ತಿನ ಎಲ್ಲಾ ಮೂಲೆಯಿಂದಲೂ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ದೂರದ ಪ್ರದೇಶಗಳಿಂದ ಜನರು ಇಲ್ಲಿನ ಸಂಸ್ಕೃತಿ ಮತ್ತು ಸಾಂಸ್ಕೃತಿಕ ವೈಭವವನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಾರೆ. ಅಂಬರ್ ಕೋಟೆ, ನಹಾರಗಢ ಕೋಟೆ ಹವಾ ಮಹಲ್, ಶೀಶ ಮಹಲ್, ಗಣೇಶ್ ಪೋಲ್ ಮತ್ತು ಜಲ ಮಹಲ್ ಇಲ್ಲಿನ ಕೆಲವು ಪ್ರಮುಖ ಆಕರ್ಷಕ ಪ್ರವಾಸಿ ತಾಣಗಳು.
ಜೈಪುರ | |
---|---|
Nickname(s): ಗುಲಾಬಿ ನಗರ | |
Lua error in ಮಾಡ್ಯೂಲ್:Location_map at line 525: Unable to find the specified location map definition: "ಮಾಡ್ಯೂಲ್:Location map/data/India Rajasthan" does not exist. | |
Coordinates: 26.9°N 75.8°E / 26.9; 75.8 | |
ದೇಶ | ಭಾರತ |
ರಾಜ್ಯ | ರಾಜಸ್ತಾನ |
ಜಿಲ್ಲೆ | ಜೈಪುರ |
Settled | 18 ನವಂಬರ್ 1727 |
ಸ್ಥಾಪಿಸಿದವರು | ಜೈ ಸಿಂಗ್ II |
ಹೆಸರಿಡಲು ಕಾರಣ | Jai Singh II |
ಸರ್ಕಾರ | |
• ಮಾದರಿ | Mayor-council |
• ಮೇಯರ್ | ಅಶೋಕ್ ಲಾಹೋಟಿ |
• Police commissioner | Sanjay Agarwal |
Area | |
• Total | ೪೮೪.೬೪ km೨ (೧೮೭.೧೨ sq mi) |
Elevation | ೪೩೧ m (೧,೪೧೪ ft) |
Population (2011)[1] | |
• Total | ೩೦,೪೬,೧೮೯ |
• ಶ್ರೇಣಿ | 10th India |
• ಸಾಂದ್ರತೆ | ೬,೩೦೦/km೨ (೧೬,೦೦೦/sq mi) |
Languages | |
• Official | Hindi |
• Regional | Hindi, Rajasthani, Punjabi |
ಸಮಯ ವಲಯ | ಯುಟಿಸಿ+5:30 (IST) |
Pincode(s) | 3020xx |
Area code(s) | +91-141 |
ವಾಹನ ನೋಂದಣಿ | RJ-14 (Jaipur South) RJ-45 (Jaipur North) RJ-52 (Shahpura) RJ-41 (Chomu) RJ-47 (Dudu) RJ-32 (Kotputli) |
ಜಾಲತಾಣ | www |