ಟೆಸ್ಟ್ ಕ್ರಿಕೆಟ್
From Wikipedia, the free encyclopedia
ಟೆಸ್ಟ್ ಕ್ರಿಕೆಟ್ ಕ್ರಿಕೆಟ್ ಕ್ರೀಡೆಯ ಅತಿ ದೀರ್ಘ ಪ್ರಕಾರ. ಸಾಮಾನ್ಯವಾಗಿ ಈ ಕ್ರೀಡೆಯಲ್ಲಿ ಇದನ್ನು ಆಟವಾಡುವ ಸಾಮರ್ಥ್ಯದ ಕಟ್ಟಕಡೆಯ ಪರೀಕ್ಷೆಯೆಂದು ಪರಿಗಣಿಸಲಾಗುತ್ತದೆ. "ಟೆಸ್ಟ್" ಎಂಬ ಹೆಸರು ಈ ಪಂದ್ಯಗಳು ಒಳಗೊಂಡಿರುವ ತಂಡಗಳ ನಡುವಣ "ಶಕ್ತಿ ಮತ್ತು ಸಾಮರ್ಥ್ಯದ ಪರೀಕ್ಷೆ (ಟೆಸ್ಟ್)" ಆಗಿರುವ ಕಲ್ಪನೆಯಿಂದ ಉದ್ಭವಿಸಿರಬಹುದು. ಟೆಸ್ಟ್ ಪಂದ್ಯಗಳು ಗರಿಷ್ಟ ೫ ದಿನಗಳವರೆಗೆ ಒಟ್ಟು ನಾಲ್ಕು ಇನ್ನಿಂಗ್ಸ್ ಗಳಂತೆ "ಟೆಸ್ಟ್ ಸ್ಥಾನಮಾನ"ವಿರುವ ಎರಡು ರಾಷ್ಟೀಯ ಪ್ರತಿನಿಧಿ ತಂಡಗಳ ನಡುವೆ ಆಡಲಾಗುತ್ತದೆ. ಇದನ್ನು ನಿರ್ಧರಿಸುವುದು ಮಾತ್ರ "ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ". ಒಂದು ತಂಡಗಳಲ್ಲಿ ಗರಿಷ್ಟ ೧೧ ಆಟಗಾರರು ಆಡಬಹುದು.
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (July 2009) |
|
ಮೊದಲ ಅಧಿಕೃತವಾಗಿ ಮಾನ್ಯತೆ ಪಡೆದ ಟೆಸ್ಟ್ ಪಂದ್ಯ ಮಾರ್ಚ್ ೧೮೭೭ ೧೫ ರಂದು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (MCG)ನಲ್ಲಿ ನಡೆಯಿತು. ಅದರಲ್ಲಿ ಆಸ್ಟ್ರೇಲಿಯಾ ೪೫ ರನ್ ಗಳ ಜಯ ಸಾಧಿಸಿತು.[1] ಅದೇ ಸರಣಿಯ ಎರಡನೇ ಪಂದ್ಯ (ಸಹ MCG ನಲ್ಲಿ)ದಲ್ಲಿ ಇಂಗ್ಲೆಂಡ್ ತಂಡ ನಾಲ್ಕು ವಿಕೆಟ್ಗಳ ಜಯ ಸಾಧಿಸಿ ಸರಣಿಯನ್ನು ೧-೧ ರಂತೆ ಸಮಬಲಗೊಳಿಸಿದರು.[2] ಆದಾಗ್ಯೂ ಇದು ಮೊದಲ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯ ಅಲ್ಲ. ಮೊದಲ ಪಂದ್ಯ ಸೆಪ್ಟೆಂಬರ್ ೧೮೪೪ , ೨೪ ಮತ್ತು ೨೫ ರಂದು ಕೆನಡಾ, ಯುನೈಟೆಡ್ ಸ್ಟೇಟ್ಸ್ ನಡುವೆ ಆಡಲಾಯಿತು.[3]
೧೦೦ ನೆ ವರ್ಷಾಚರಣೆಯ ಟೆಸ್ಟ್ ಪಂದ್ಯ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ಮಾರ್ಚ್ ೧೯೭೭ ,೧೨ ರಿಂದ ೧೭ ರವರಗೆ ಮೆಲ್ಬೋರ್ನ್ ನಲ್ಲಿ ನಡೆಯಿತು. ಈ ಪಂದ್ಯದಲ್ಲಿ, ಆಸ್ಟ್ರೇಲಿಯಾ ಇಂಗ್ಲೆಂಡ್ ತಂಡವನ್ನು ೧೮೭೭ ರಲ್ಲಿ ನಡೆದ ಪಂದ್ಯದಂತೆ ಇಲ್ಲೂ ಕೂಡ ೪೫ ರನ್ ಗಳ ಅಂತರದಲ್ಲಿ ಸೋಲಿಸಿದರು.[4]