ಡಿಜಿಟಲ್ ಕ್ಯಾಮೆರಾ
From Wikipedia, the free encyclopedia
ಡಿಜಿಟಲ್ ಕ್ಯಾಮೆರಾ ಅಥವಾ ಡಿಜಿ ಕ್ಯಾಮ್ ಎಂದರೆ ವಿಡಿಯೋ ಅಥವಾ ಸ್ಥಿರಚಿತ್ರಅಥವಾ ಎರಡನ್ನೂ ವಿದ್ಯುನ್ಮಾನ ಚಿತ್ರಗ್ರಾಹಕದಿಂದ ತೆಗೆಯುವಂತಹ ಒಂದು ಕ್ಯಾಮರಾ.
ಬಹಳಷ್ಟು ಸ್ಥಿರ ಡಿಜಿಟಲ್ ಕ್ಯಾಮರಾಗಳು ಶಬ್ದ ಮತ್ತು ವಿಡಿಯೋ ಜೊತೆಗೆ ಸ್ಥಿರ ಚಿತ್ರಗಳನ್ನು ಕೂಡ ಸೆರೆ ಹಿಡಿಯಬಲ್ಲವು. ಪಾಶ್ಚಾತ್ಯ ಮಾರುಕಟ್ಟೆಯಲ್ಲಿ 35 ಎಂಎಂ ರೀಲುಗಳಿಗಿಂತ ಹೆಚ್ಚು ಈ ಡಿಜಿಟಲ್ ಕ್ಯಾಮೆರಾಗಳೇ ಹೆಚ್ಚು ಬಿಕರಿಯಾಗುತ್ತವೆ.[1]
ಡಿಜಿಟಲ್ ಕ್ಯಾಮರಾಗಳು ರೀಲ್ ಕ್ಯಾಮರಾಗಳು ಮಾಡಲಾಗದ ಕೆಲಸಗಳನ್ನು ಮಾಡಬಲ್ಲವು. ಚಿತ್ರಗಳನ್ನು ತೆಗೆದ ತಕ್ಷಣ ಪರದೆಯ ಮೇಲೆ ಪ್ರದರ್ಶಿಸುವುದು, ಸಾವಿರಾರು ಚಿತ್ರಗಳನ್ನು ಒಂದು ಸಣ್ಣ ಮೆಮೊರಿ ಸಾಧನದಲ್ಲಿ ಸ್ಟೋರ್ ಮಾಡುವುದು. ಶಬ್ದಸಹಿತವಿಡಿಯೋವನ್ನು ತೆಗೆಯುವುದು ಮತ್ತು ಅನಗತ್ಯ ಚಿತ್ರಗಳನ್ನು ಅಳಿಸುವ ಮೂಲಕ ಸಂಗ್ರಹ ಜಾಗವನ್ನು ಖಾಲಿ ಮಾಡುವುದು. ಇವುಗಳಲ್ಲಿ ಕೆಲವು ಕ್ಯಾಮರಾಗಳು, ಚಿತ್ರಗಳನ್ನು ಕತ್ತರಿಸುವುದು ಮತ್ತು ಇತರೆ ಪ್ರಾಥಮಿಕ ಸಂಕಲನಗಳನ್ನು ಮಾಡಬಲ್ಲವು. ಮೂಲಭೂತವಾಗಿ ಇವು ರೀಲ್ ಕ್ಯಾಮರಾಗಳಂತೆಯೇ ಕೆಲಸ ಮಾಡುತ್ತವೆ. ಇದಕ್ಕಾಗಿ ಚಿತ್ರವನ್ನು ಸೆರೆಹಿಡಿಯುವ ಸಾಧನದ ಮೇಲೆ ಬೆಳಕು ಚೆಲ್ಲಲು ಒಂದು ಅಸ್ಥಿರ ವಪೆ(ವೇರಿಯೆಬಲ್ ಡಯಾಫ್ರಾಮ್)ಯನ್ನು ಬಳಸುತ್ತವೆ. ಸರಿಯಾದ ಪ್ರಮಾಣದ ಬೆಳಕನ್ನು ಸಾಧನದ ಒಳಗೆ ಬಿಡಲು ರೀಲಿನಂತೆ ಇಲ್ಲಿಯೂ ವಪೆ(ಡಯಾಫ್ರಾಮ್) ಮತ್ತು ಷಟರ್ಗಳ ಜೋಡಿಯನ್ನೇ ಬಳಸಲಾಗುತ್ತದೆ. ಚಿತ್ರವನ್ನು ಸೆರೆಹಿಡಿಯುವ ಸಾಧನವು ಇಲ್ಲಿ ರಾಸಾಯನಿಕವಾಗಿರದೆ ವಿದ್ಯುನ್ಮಾನದ್ದಾಗಿದೆ ಎಂಬುದೊಂದೇ ವ್ಯತ್ಯಾಸ. ಡಿಜಿಟಲ್ ಕ್ಯಾಮೆರಾಗಳನ್ನು ಪಿಡಿಎ ಮತ್ತು ಮೊಬೈಲ್ ಫೋನ್ (ಕ್ಯಾಮರಾ ಫೋನ್ ಎಂದು ಕರೆಯುತ್ತಾರೆ) ಮೊದಲ್ಗೊಂಡು ವಾಹನಗಳವರೆಗೆ ಹಲವಾರು ಸಾಧನಗಳಿಗೆ ಅಳವಡಿಸಲಾಗಿದೆ. ದಿ ಹಬಲ್ ಸ್ಪೇಸ್ ದೂರದರ್ಶಕ ಮತ್ತು ಇನ್ನಿತರೆ ಖಗೋಳ ಸಾಧನಗಳು ಮೂಲತಃ ವಿಶೇಷ ಡಿಜಿಟಲ್ ಕ್ಯಾಮರಾಗಳೇ ಆಗಿವೆ.