ಡೊಂಬ ಎಂಬುದು ಅಥವಾ ಡೊಮ್ ( ಸಂಸ್ಕೃತ ಡೊಮ್, ಆಡುಭಾಷೆಯಲ್ಲಿ ಡೊಂಬೊ, ಡೊಮ್ರಾ, ಡೊಮಾಕ, ಡೊಂಬರಿ ಮತ್ತು ರೂಪಾಂತರಗಳು) ಭಾರತದಾದ್ಯಂತ ಹರಡಿರುವ ಜನಾಂಗೀಯ ಗುಂಪು ಅಥವಾ ಗುಂಪುಗಳಾಗಿವೆ.
ಡೊಂಬರು ಉತ್ತರ ಪ್ರದೇಶದ ಅಲೆಮಾರಿಗಳಾಗಿದ್ದು, ಬಂಗಾಳ, ಭಂಟು, ಬಾಝಿಗರ್, ಹಬುರ, ಕಂಜರ್ ಮತ್ತು ಸಂಸಿ ಸ್ಥಳಗಳ ಡೊಮ್ ಮೂಲದವರೆಂದು ಹೇಳಲಾಗುತ್ತದೆ. ಯಾವುದೇ ಅಲೆಮಾರಿಗಳನ್ನು ವಿವರಿಸಲು ಡೊಮ್ ಎಂಬ ಪದವನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ, ಏಕೆಂದರೆ ಈ ಎಲ್ಲಾ ಗುಂಪುಗಳು ವಿಭಿನ್ನವಾಗಿವೆ ಮತ್ತು ಕಟ್ಟುನಿಟ್ಟಾಗಿ ತಮ್ಮ ತಮ್ಮ ಪಂಗಡಗಳ ಒಳಗೇ ವಿವಾಹ ಮಾಡಿಕೊಳ್ಳುವವರಾಗಿರುತ್ತಾರೆ. ಕೆಲವರು ತಮ್ಮದೇ ಆದ ಉಪಭಾಷೆ ಅಥವಾ ಆಡುಭಾಷೆಯನ್ನು ಮಾತನಾಡುತ್ತಾರೆ, ಆದರೆ ಇತರರು ಚಾಲ್ತಿಯಲ್ಲಿರುವ ಪ್ರಮುಖ ಭಾಷೆ ಮಾತನಾಡುತ್ತಾರೆ. [1] 2011 ರ ಭಾರತದ ಜನಗಣತಿಯು ಉತ್ತರ ಪ್ರದೇಶದಲ್ಲಿ 110,353 ಜನಸಂಖ್ಯೆ ಇರುವ ಡೊಮ್ ಜನಾಂಗವನ್ನು ಪರಿಶಿಷ್ಟ ಜಾತಿ ಎಂದು ಪರಿಸಿದೆ. [2] ಯುರೋಪ್ನ ರೋಮಾ ಜೊತೆಗೆ ಮಧ್ಯಪ್ರಾಚ್ಯದ ಡೊಮ್ ಅಥವಾ ಡೊಮಿ ಜನರು [3] ಡೊಂಬ ಜನಾಂಗದ ವಂಶಸ್ಥರು ಎಂದು ನಂಬಲಾಗಿದೆ.
ಡಮರು ಎಂಬ ಮೂಲದಿಂದ ಡೊಂಬ ಪದ ಬಂದಿದೆ ಎಂದು ನಂಬಲಾಗಿದೆ. [4]
ಈ ಜನರನ್ನು ಬೆರಿಚೋ, ಡೊಮ್ ಅಥವಾ ಡೊಮಾ ಎಂದು ಕರೆಯಲಾಗುತ್ತದೆ. ಸಂಗೀತಗಾರಾಗಿರುವುದರಿಂದ ಅವರನ್ನು ಡೊಮ್ ಎಂದು ಗುರುತಿಸಲಾಯಿತು. ಡೋಮ್ ವಂಶಸ್ಥರು ವಿವಿಧ ಸ್ಥಳೀಯ ಆಡಳಿತಗಾರರಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದರು. ಹುಂಝ ಕಣಿವೆಯ ನಿಝಾರಿ ಇಸ್ಮಾಯಿಲಿ ಪಂಗಡಕ್ಕೆ ಡೋಮ್ ಸೇರಿದೆ. [5]
ಒಡಿಶಾದಲ್ಲಿ ಸುಮಾರು 706,000 ಡೊಮ್ಗಳಿದ್ದಾರೆ. [6]
ಹಿಂದೂಗಳ ಪವಿತ್ರ ನಗರವಾದ ಉತ್ತರ ಪ್ರದೇಶದ ವಾರಣಾಸಿಯಲ್ಲಿ, ಡೊಮ್ ಜನರು ಮೃತ ದೇಹಗಳ ದಹನದ ಪ್ರಮುಖ ಕಾರ್ಯವನ್ನು ನಿರ್ವಹಿಸುತ್ತಾರೆ.
Wikiwand in your browser!
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.