ದೇವಪ್ರಯಾಗ
From Wikipedia, the free encyclopedia
ದೇವಪ್ರಯಾಗ ಭಾರತದ ಉತ್ತರಾಖಂಡ ರಾಜ್ಯದ ಟಿಹ್ರಿ ಗಢ್‌ವಾಲ್ ಜಿಲ್ಲೆಯಲ್ಲಿನ ಒಂದು ಪಟ್ಟಣ. ರಿಷಿಕೇಶದಿಂದ ಸುಮಾರು ೭೦ ಕಿ.ಮೀ. ದೂರದಲ್ಲಿರುವ ದೇವಪ್ರಯಾಗವು ಭಾಗೀರಥಿ ಮತ್ತು ಅಲಕನಂದಾ ನದಿಗಳ ಸಂಗಮಸ್ಥಾನವಾಗಿದೆ. ಈ ಸ್ಥಳದಿಂದ ಮುಂದೆ ನದಿಯು ಗಂಗಾನದಿ ಎಂಬ ಹೆಸರು ಪಡೆದಿದೆ. ದೇವಪ್ರಯಾಗವು ಹಿಮಾಲಯದ ಐದು ಪವಿತ್ರ ಸಂಗಮಕ್ಷೇತ್ರಗಳಲ್ಲಿ ಒಂದಾಗಿದ್ದು ಹಿಂದೂ ಧರ್ಮೀಯರು ಇದನ್ನು ಪಾವನಕ್ಷೇತ್ರವೆಂದು ಪರಿಗಣಿಸುತ್ತಾರೆ. ಇತರ ನಾಲ್ಕು ಪ್ರಯಾಗಗಳೆಂದರೆ ರುದ್ರಪ್ರಯಾಗ, ಕರ್ಣಪ್ರಯಾಗ, ನಂದಪ್ರಯಾಗ ಮತ್ತು ವಿಷ್ಣುಪ್ರಯಾಗ.
Quick Facts ದೇವಪ್ರಯಾಗ, ಭೂಗೋಳ ...
ದೇವಪ್ರಯಾಗ | |
---|---|
ಭೂಗೋಳ | |
ಕಕ್ಷೆಗಳು | 30.146315°N 78.598251°E / 30.146315; 78.598251 |
ದೇಶ | ಭಾರತ |
ರಾಜ್ಯ | ಉತ್ತರಾಖಂಡ |
ಜಿಲ್ಲೆ | ತೇಹ್ರಿ ಗರ್ವಾಲ್ |
ಸ್ಥಳ | ಉತ್ತರಾಖಂಡ, ಭಾರತ |
ವಾಸ್ತುಶಿಲ್ಪ | |
ವಾಸ್ತುಶಿಲ್ಪ ಶೈಲಿ | ನಗರ ವಾಸ್ತುಶಿಲ್ಪಿ |
Close