From Wikipedia, the free encyclopedia
ನಿರುಪಮ ಮತ್ತು ರಾಜೇಂದ್ರ ಭಾರತೀಯ ಸಾಂಸ್ಕೃತಿಕ ನರ್ತಕರು. ಇವರು ಭರತನಾಟ್ಯ ಹಾಗು ಕಥಕ್ ನೃತ್ಯ ರೂಪಗಳ ರಾಯಭಾರಿಗಳು. ಇವರು ೧೯೯೪ರಲ್ಲಿ ಅಭಿನವ ಡ್ಯಾನ್ಸ್ ಕಂಪನಿಯನ್ನು ಸ್ಥಾಪಿಸಿ ನಿರ್ದೇಶಿಸುತ್ತಿದ್ದಾರೆ.[1]
ನಿರುಪಮ ಮತ್ತು ರಾಜೇಂದ್ರ | |
---|---|
ಜನನ | |
ವೃತ್ತಿ | ಅಭಿನವ ಡ್ಯಾಂಸ್ ಕಂಪನಿಯಲ್ಲಿ ನಿರ್ದೇಶಕರು |
ಜಾಲತಾಣ | www |
ಕಥಕ್ ಶೈಲಿಯಲ್ಲಿ ನಿರುಪಮ ಮತ್ತು ರಾಜೆಂದ್ರ ಇವರಿಗೆ ಗುರು ಡಾ|ಮಾಯಾ ರಾವ್, ಪದ್ಮಭೂಷಣ ಕುಮುದಿನಿ ಲಖಿಯ, ಗುರು ಅರ್ಜುನ್ ಮಿಸ್ರ ಇವರಿಂದ ವಿದ್ಯಾಭ್ಯಾಸವಾಗಿದ್ದು, ಇದರ ಜೊತೆ ಭರತನಾಟ್ಯದಲ್ಲಿ ನಿರುಪಮಾರಿಗೆ ಗುರು ನರ್ಮದಾ, ಸುಂದರಿ ಸಂತಾನಮ್, ಪದ್ಮಭೂಷಣ್ ಕಲಾನಿಧಿ ನಾರಯಣ್, ಪದ್ಮಭೂಷಣ್ ಪದ್ಮ ಸುಬ್ರಹ್ಮಣ್ಯಮ್ ರವರ ಮಾರ್ಗದರ್ಶನ ದೊರಕಿದೆ.[2] ಇವರಿಬ್ಬರು ೧೯೯೪ರಲ್ಲಿ ಅಭಿನವ ಡ್ಯಾಂಸ್ ಕಂಪನಿ ಹಾಗು ಅಭಿನವ ಸ್ಕೂಲ್ ಆಫ್ ಡ್ಯಾಂಸ್ ಇವುಗಳನ್ನು ಸ್ಥಾಪಿಸಿ ನಿರ್ದೇಶಿಸುತ್ತ ನಡೆಸಿಕೊಂದು ಬರುತ್ತಿದ್ದಾರೆ. ತಮ್ಮ ಶಾಲೆಯಲ್ಲಿ ನೂರಕ್ಕು ಹೆಚ್ಚು ವಿದ್ಯಾರ್ಥಿಗಳಿಗೆ ಭರತನಾಟ್ಯ ಹಾಗು ಕಥಕ್ ನೃತ್ಯರೂಪಗಳ ವಿದ್ಯಾದಾನ ಮಾದುತ್ತಾ, ಕಂಪನಿಯ ಮೂಲಕ ಹಲವಾರು ನೃತ್ಯ-ಸಂಚಿಕೆಗಳನ್ನು ನಿರ್ಮಿಸಿದ್ದಾರೆ.[3]ಇದಲ್ಲದೆ ಇವರು ಭಾರತದ ಜತೆ ಸುಮಾರು ೫೫ ದೇಶಗಳಲ್ಲಿ ನೃತ್ಯಕಾರ್ಯಕ್ರಮಗಳನ್ನು ನೀಡಿ, ಕಾರ್ಯಶಾಲೆಗಳನ್ನು ನಡೆಸಿ ಭಾರತೀಯ ಸಂಸ್ಕೃತಿಯನ್ನು ಮುನ್ನಡೆಸುತ್ತಿದ್ದಾರೆ. [4][5]
ಅಭಿನವ ಡ್ಯಾಂಸ್ ಕಂಪನಿಯ ಮೂಲಕ ಹಲವಾರು ನೃತ್ಯ-ಸಂಚಿಕೆಗಳನ್ನು ನಿರ್ಮಿಸಿದ್ದಾರೆ.[6] ಇದರಲ್ಲಿ ಕಥಕಶೈಲಿಯಲ್ಲಿ ರಾಸಲೀಲ, ವರ್ಷ, ಯುಗಲ್, ಮೀರಾ ಮಾಧುರಿ ಹಾಗು ಭರತನಾಟ್ಯದಲ್ಲಿ ಲಾಸ್ಯರಂಜನಿ, ಕಾಳಿಂಗರತ್ನ, ಕಾಲ್ ಆಫ್ ದ ಫ್ಲೂಟ್ ಇತ್ಯಾದಿ.[7] ಇವರ ಎಲ್ಲ ಸಂಚಿಕೆಗಳಿಗೆ ಶತಾವಧಾನಿ, ಡಾ. ಆರ್ ಗಣೇಶ್, ಪ್ರವೀನ್ ಡಿ ರಾವ್, ಪ್ರವೀಣ್ ಗೋಡ್ಖಿಂಡಿ, ಅನೂರು ಅನಂತಕೃಷ್ಣ ಶರ್ಮ, ತಿರುಮಲೆ ಶ್ರೀನಿವಾಸ್ ಹಾಗು ವಿನೋದ್ ಕುಮರ್ ಇವರ ಸಹಕಾರವಿದೆ.[8]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.