ನಿರ್ಮಲೀಕರಣ
From Wikipedia, the free encyclopedia
ನಿರ್ಮಲೀಕರಣ ಎಂಬುದು ತ್ಯಾಜ್ಯವಸ್ತುಗಳ ಅಪಾಯಗಳೊಂದಿಗಿನ ಮಾನವ ಸಂಪರ್ಕವನ್ನು ತಡೆಗಟ್ಟುವುದರ ಮೂಲಕ ಆರೋಗ್ಯವನ್ನು ಪ್ರವರ್ತಿಸುವ ನೈರ್ಮಲ್ಯದ ವಿಧಾನವಾಗಿದೆ. ಅಪಾಯಗಳು ದೈಹಿಕವಾದುದಾಗಿರಬಹುದು, ಸೂಕ್ಷ್ಮಜೀವಿಗಳಿಗೆ ಸಂಬಂಧಿಸಿದ್ದಾಗಿರಬಹುದು, ಜೈವಿಕವಾದುದಾಗಿರಬಹುದು ಅಥವಾ ಕಾಯಿಲೆಯ ರಾಸಾಯನಿಕ ಮಧ್ಯವರ್ತಿಗಳಿಂದ ಉಂಟಾದುದಾಗಿರಬಹುದು. ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಲ್ಲ ತ್ಯಾಜ್ಯವಸ್ತುಗಳೆಂದರೆ, ಮಾನವರ ಮತ್ತು ಪ್ರಾಣಿಗಳ ಮಲ, ಘನ ತ್ಯಾಜ್ಯವಸ್ತುಗಳು, ಮನೆಬಳಕೆಯ ತ್ಯಾಜ್ಯನೀರು (ಚರಂಡಿ ನೀರು, ಗ್ರಾಮಸಾರ, ಬೂದುನೀರು), ಕೈಗಾರಿಕಾ ತ್ಯಾಜ್ಯವಸ್ತುಗಳು, ಮತ್ತು ಕೃಷಿಯ ತ್ಯಾಜ್ಯವಸ್ತುಗಳು. ಎಂಜಿನಿಯರಿಂಗ್ ಪರಿಹಾರೋಪಾಯಗಳು (ಉದಾಹರಣೆಗೆ: ಚರಂಡಿ ವ್ಯವಸ್ಥೆ ಮತ್ತು ತ್ಯಾಜ್ಯನೀರು ಸಂಸ್ಕರಣೆ), ಸರಳ ತಂತ್ರಜ್ಞಾನಗಳು (ಉದಾಹರಣೆಗೆ: ಶೌಚಾಲಯಗಳು, ರೊಚ್ಚು ತೊಟ್ಟಿಗಳು), ಅಥವಾ ಅಷ್ಟೇ ಏಕೆ ನೈರ್ಮಲ್ಯಶಾಸ್ತ್ರದ ವೈಯಕ್ತಿಕ ಪರಿಪಾಠಗಳನ್ನು (ಉದಾಹರಣೆಗೆ: ಸಾಬೂನಿನಿಂದ ಸರಳವಾಗಿ ಕೈತೊಳೆಯುವಿಕೆ) ಬಳಸುವುದು ಇವೆಲ್ಲವೂ ತಡೆಗಟ್ಟುವಿಕೆಯ ನೈರ್ಮಲ್ಯದ ವಿಧಾನಗಳಲ್ಲಿ ಸೇರಿಕೊಂಡಿವೆ. WHOನಿಂದ (ವಿಶ್ವ ಆರೋಗ್ಯ ಸಂಸ್ಥೆಯಿಂದ) ವ್ಯಾಖ್ಯಾನಿಸಲ್ಪಟ್ಟಿರುವಂತೆ, ಮಾನವರ ಮಲ-ಮೂತ್ರಗಳ ಸುರಕ್ಷಿತ ವಿಲೇವಾರಿಗೆ ಸಂಬಂಧಿಸಿರುವ ಸೌಕರ್ಯಗಳು ಮತ್ತು ಸೇವೆಗಳ ವ್ಯವಸ್ಥೆಗೆ ನಿರ್ಮಲೀಕರಣವು ಸಾಮಾನ್ಯವಾಗಿ ಉಲ್ಲೇಖಿಸಲ್ಪಡುತ್ತದೆ. ಸಾಕಷ್ಟಿಲ್ಲದ ಅಥವಾ ಅಸಮರ್ಪಕವಾದ ನಿರ್ಮಲೀಕರಣವು ವಿಶ್ವಾದ್ಯಂತದ ಕಾಯಿಲೆಯ ಒಂದು ಪ್ರಮುಖ ಕಾರಣವಾಹಿದೆ ಮತ್ತು ನಿರ್ಮಲೀಕರಣದ ಸುಧಾರಿಸುವಿಕೆಯು ಕುಟುಂಬಗಳು ಮತ್ತು ಸಮುದಾಯಗಳಲ್ಲಿರುವವರ ಆರೋಗ್ಯದ ಮೇಲೆ ಒಂದು ಗಮನಾರ್ಹವಾದ ಪ್ರಯೋಜಕಾರಿ ಪ್ರಭಾವವನ್ನು ಹೊಂದಿದೆ ಎಂಬುದು ಸುಪರಿಚಿತ ಸಂಗತಿಯಾಗಿದೆ. ಕಸದ ಸಂಗ್ರಹಣೆ ಮತ್ತು ತ್ಯಾಜ್ಯನೀರಿನ ವಿಲೇವಾರಿಯಂಥ ಸೇವೆಗಳ ಮೂಲಕ, ನೈರ್ಮಲ್ಯದ ಸ್ಥಿತಿಗತಿಗಳ ನಿರ್ವಹಣೆ ಮಾಡುವುದಕ್ಕೂ 'ನಿರ್ಮಲೀಕರಣ' ಎಂಬ ಪದವು ಉಲ್ಲೇಖಿಸಲ್ಪಡುತ್ತದೆ.[1]
This article has multiple issues. Please help improve it or discuss these issues on the talk page. (Learn how and when to remove these template messages)
No issues specified. Please specify issues, or remove this template. |
"ನಿರ್ಮಲೀಕರಣ " ಎಂಬ ಶಬ್ದವನ್ನು ಒಂದು ನಿರ್ದಿಷ್ಟ ಮಗ್ಗುಲು, ಪರಿಕಲ್ಪನೆ, ತಾಣ, ಅಥವಾ ಕಾರ್ಯತಂತ್ರಕ್ಕೆ ಅನ್ವಯಿಸಲು ಸಾಧ್ಯವಿದೆ. ಅದು ಹೇಗೆಂದರೆ:
- ಮೂಲಭೂತ ನಿರ್ಮಲೀಕರಣ - ಇದು ಕುಟುಂಬದ ಮಟ್ಟದಲ್ಲಿ ಮಾನವರ ಮಲದ ನಿರ್ವಹಣೆಗೆ ಉಲ್ಲೇಖಿಸಲ್ಪಡುತ್ತದೆ. ಈ ಪರಿಭಾಷೆಯು ನಿರ್ಮಲೀಕರಣದ ಕುರಿತಾದ ಸಹಸ್ರಮಾನದ ಅಭಿವೃದ್ಧಿಯ ಉದ್ದೇಶದ ಗುರಿಯನ್ನು ವಿವರಿಸಲು ಬಳಸಲಾಗುವ ಸೂಚಕವಾಗಿದೆ.
- ಸ್ಥಳದಲ್ಲೇ ಮಾಡುವ ನಿರ್ಮಲೀಕರಣ - ತ್ಯಾಜ್ಯವಸ್ತುವಿನ ಸಂಗ್ರಹಣೆ ಮತ್ತು ಸಂಸ್ಕರಣೆಯನ್ನು ಅದು ಸಂಚಯಿಸಲ್ಪಟ್ಟಿರುವ ಸ್ಥಳದಲ್ಲಿಯೇ ಮಾಡಲಾಗುತ್ತದೆ. ಗುಂಡಿ ಶೌಚಾಲಯಗಳು, ರೊಚ್ಚು ತೊಟ್ಟಿಗಳು, ಮತ್ತು ಇಮಾಫ್ ತೊಟ್ಟಿಗಳ ಬಳಕೆಯು ಇದರ ಉದಾಹರಣೆಗಳಲ್ಲಿ ಸೇರಿವೆ.
- ಆಹಾರ ನಿರ್ಮಲೀಕರಣ - ಇದು ಆಹಾರದ ಸುರಕ್ಷತೆಯನ್ನು ಖಾತ್ರಿಪಡಿಸುವುದಕ್ಕೆ ಸಂಬಂಧಿಸಿದ ನೈರ್ಮಲ್ಯದ ಕ್ರಮಗಳಿಗೆ ಉಲ್ಲೇಖಿಸಲ್ಪಡುತ್ತದೆ.
- ಪರಿಸರೀಯ ನಿರ್ಮಲೀಕರಣ - ಇದು ಕಾಯಿಲೆಯ ಹಬ್ಬುವಿಕೆಯಲ್ಲಿ ಕೊಂಡಿಗಳನ್ನು ರೂಪಿಸುವ ಪರಿಸರೀಯ ಅಂಶಗಳ ನಿಯಂತ್ರಣವಾಗಿದೆ. ಘನ ತ್ಯಾಜ್ಯವಸ್ತು ನಿರ್ವಹಣೆ, ನೀರು ಮತ್ತು ತ್ಯಾಜ್ಯನೀರು ಸಂಸ್ಕರಣೆ, ಕೈಗಾರಿಕಾ ತ್ಯಾಜ್ಯವಸ್ತು ಸಂಸ್ಕರಣೆ ಹಾಗೂ ಶಬ್ದ ಮತ್ತು ಮಾಲಿನ್ಯ ನಿಯಂತ್ರಣ ಇವೇ ಮೊದಲಾದವು ಈ ವರ್ಗದ ಉಪವರ್ಗಗಳೆನಿಸಿಕೊಂಡಿವೆ.
- ಪರಿಸರ ವಿಜ್ಞಾನದ ನಿರ್ಮಲೀಕರಣ - ಇದು ಮಾನವರು ಮತ್ತು ಪ್ರಾಣಿಗಳ ತ್ಯಾಜ್ಯವಸ್ತುಗಳಿಂದ ಪಡೆದ ಪೋಷಕಾಂಶಗಳನ್ನು ಪುನರ್ಬಳಕೆ ಮಾಡಿ ಪ್ರಕೃತಿಗೆ ನೀಡುವ ಒಂದು ಪರಿಕಲ್ಪನೆ ಮತ್ತು ಒಂದು ವಿಧಾನವಾಗಿದೆ.