ನಿಸ್ತಂತು ಸಂಪರ್ಕ
From Wikipedia, the free encyclopedia
ನಿಸ್ತಂತು ಸಂಪರ್ಕ ಎನ್ನುವ ಪದವು ೧೯ನೇ ಶತಮಾನದಲ್ಲಿ ಪರಿಚಯಿಸಲಾಗಿದ್ದು ನಂತರದ ವರ್ಷಗಳಿಂದ ನಿಸ್ತಂತು ಸಂವಹನ ತಂತ್ರಜ್ಞಾನದಲ್ಲಿ ಬಹಳಷ್ಟು ಅಭಿವೃದ್ಧಿಯನ್ನು ಕಂಡುಬಂದಿದೆ.ನಿಸ್ತಂತು ಜಾಲ ಎಂದರೆ ಯಾವುದೇ ರೀತಿಯ ಕೇಬೆಲ್ ಸಂಪರ್ಕವಿಲ್ಲದೆ ಕಂಪ್ಯೂಟರ್ ನೆಟ್ವರ್ಕ್ ಅಥವ ಮೊಬೈಲ್ ಫೋನ್ ಸೊನಾರ್ಟ್ ಡೆನ್ಸ್ರ್ ಸಂಪರ್ಕ ಹೊಂದಿ ಅದನ್ನು ಉಪಯೋಗಿಸುವುದು.ಈ ನಿಸ್ತಂತು ಜಾಲ ಬಂಧಗಳಲ್ಲಿ ಅಳವಡಿಸಿದ ಉಪಕರಣಗಲು ಅಥವ ಕಂಪ್ಯೂಟರ್ಗಳು ಸಾಮಾನ್ಯವಾಗಿ ರೇಡಿಯೋ ಅಲೆಗಳ ಪ್ರಸರಣ ವ್ಯವಸ್ತೆ ಬಳಸಿಕೊಂಡು ದೂರ ಸಂಪಕ ಹೊಂದುತ್ತವೆ.ಚರ ದೂರವಾಣಿ(ಮೊಬೈಲ್ ಫೋನ್),ಟೀವಿ ದೂರ ನಿಯಂತ್ರಣ ಹಾಗು ರೇಡಿಯೋ ನಿಸ್ತಂತು ಸಂಪರ್ಕದ ಉದಾಹರಣೆಗಳು. ವಿಶ್ವದ ಮೊದಲ ನಿಸ್ತಂತು ದೂರವಾಣಿ ಸಂಭಾಷಣೆಯು ೧೮೮೦, ಅಲೆಕ್ಸಾಂಡರ್ ಗ್ರಹಾಂ ಬೆಲ್ ಮತ್ತು ಚಾರ್ಲ್ಸ್ ಸಮ್ನರ್ ಟೀಂತೆರ್ ಆವಿಷ್ಕರಿಸಿದರು ಹಾಗು ದ್ಯುತಿವಾಣಿಯನ್ನು ಪೇಟೆಂಟ್ ಮಾಡಲು ಅನುವಾದವು ದೋರಕಿತು. ದ್ಯುತಿವಾಣಿ ಎಂದರೆ ಸಮನ್ವಯಗೊಳಿಸಲ್ಪಟ್ಟಿರುವ ಬೆಳಕಿನ ಕಿರಣಗಳಿಂದ(ಇದು ವಿದ್ಯುತ್ಕಾಂತೀಯ ತರಂಗಗಳ ಕಿರಿದಾದ ಪ್ರಕ್ಷೇಪಗಳು) ನಿಸ್ತಂತುವಾಗಿ ಆಡಿಯೋ ಸಂಭಾಷಣೆಗಳನ್ನು ನಡೆಸಿದ ದೂರವಾಣಿ.ದ್ಯುತಿವಾಣಿಗಳಿಗೆ ಟ್ರಾನ್ಸ್ಮಿಟರ್ ಮತ್ತು ರಿಸೀವರ ಮಧ್ಯೆ ದೃಷ್ಟಿ ಸ್ಪಷ್ಟ ಗೆರೆಳ ಅಗತ್ಯವಿದೆ.