ಪಂಜಾಬ್
ಭಾರತದ ರಾಜ್ಯ / From Wikipedia, the free encyclopedia
ಭಾರತದ ವಾಯುವ್ಯ ಭಾಗದಲ್ಲಿರುವ ಪಂಜಾಬ್ (ਪੰਜਾਬ),ಅನ್ನು ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಹರ್ಯಾಣ, ರಾಜಸ್ಥಾನ ಮತ್ತು ಪಶ್ಚಿಮದಲ್ಲಿ ಪಾಕಿಸ್ತಾನ ಸುತ್ತುವರಿದಿದೆ. ರಾಷ್ಟ್ರದ ಚಿಕ್ಕ ರಾಜ್ಯಗಳಲ್ಲಿ ಒಂದಾಗಿರುವ ಪಂಜಾಬ್ ನ ಸಮೃದ್ಧಿ ಭವ್ಯವಾಗಿದೆ.1947 ರಲ್ಲಿ ಪಂಜಾಬ್ ಪ್ರದೇಶವನ್ನು ಬ್ರಿಟಿಷರು ಭಾರತ ಮತ್ತು ಪಾಕಿಸ್ತಾನವೆಂದು ವಿಂಗಡಿಸಿದ ಬಳಿಕ 1947 ರಲ್ಲಿ ಪಂಜಾಬ್ ಮತ್ತೊಮ್ಮೆ ವಿಂಗಡನೆಯಾಗಿ ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಹರ್ಯಾಣ ಎಂದಾಯಿತು.
ರಾಜ್ಯ | |
---|---|
Nickname(s): ಐದು ನದಿಗಳ ನಾಡು | |
Country | India |
Formation | 1 ನವೆಂಬರ್ 1966 (1966-11-01) |
Capital | Chandigarh† |
Largest city | Ludhiana |
Districts | 22 |
ಸರ್ಕಾರ | |
• Governor | ಕಪ್ತಾನ್ ಸಿಂಗ್ ಸೋಲಂಕಿ |
• Chief Minister | ಪ್ರಕಾಶ್ ಸಿಂಗ್ ಬಾದಲ್ (SAD) |
• Legislature | Unicameral (117 seats) |
• Parliamentary constituency | 13 |
• High Court | Punjab and Haryana High Court |
Area | |
• Total | ೫೦,೩೬೨ km೨ (೧೯,೪೪೫ sq mi) |
• ಶ್ರೇಣಿ | 20th |
Highest elevation | ೫೫೦ m (೧,೮೦೦ ft) |
ಕಡಿಮೆ ಎತ್ತರ | ೧೫೦ m (೪೯೦ ft) |
Population (2011)[1] | |
• Total | ೨,೭೭,೦೪,೨೩೬ |
• ಶ್ರೇಣಿ | 16th |
• ಸಾಂದ್ರತೆ | ೫೫೦/km೨ (೧,೪೦೦/sq mi) |
Languages | |
• Official | Punjabi |
• Others | Hindi, English |
• Regional | Majhi, Malwai, Dogri, Bagri |
ಸಮಯ ವಲಯ | ಯುಟಿಸಿ+05:30 (IST) |
ISO 3166 code | IN-PB |
HDI | 0.679 (medium) |
HDI rank | 9th (2005) |
Literacy | 76.68% |
ಜಾಲತಾಣ | Punjab Govt |
^† Joint Capital with Haryana | |
Symbols of Punjab | |
Emblem | Lion Capital of Ashoka with Wheat stem (above) and Crossed Swords (below) |
Language | Punjabi |
ನೃತ್ಯ | Bhangra, Giddha |
Animal | Blackbuck |
ಪಕ್ಷಿ | Baaz[2] |
Tree | Tahli |
River | Indus |
Sport | Kabaddi (Circle Style) |
ಇದು ಗ್ರೀಕರಿಗೆ, ಅಫ್ಘಾನಿಯರಿಗೆ, ಇರಾನಿಗಳಿಗೆ ಮತ್ತು ಮಧ್ಯ ಏಶ್ಯಾದ ಜನರಿಗೆ ರಹದಾರಿಯಾಗಿ ಉಳಿಯಿತು.ಪಂಜಾಬ್ ಗೆ ಐತಿಹಾಸಿಕ ಮಹತ್ವವಿದ್ದು, ಇದರ ಕುರಿತಾಗಿ ಗ್ರೀಕರು ಮತ್ತು ಝೋರೊಸ್ಟ್ರಿಯನ್ ಗಳಲ್ಲಿ ಕೂಡ ಜನಪ್ರಿಯತೆ ಇದೆ. ಅವರ ಪ್ರಕಾರ ಪಂಜಾಬ್ ಐದು ನದಿಗುಳು ಸಂಧಿಸುವ ಭೂಮಿ. ಪಂಜಾಬ್ ನಲ್ಲಿ ಕೃಷಿ ಜನರ ಪ್ರಮುಖ ಉದ್ಯೋಗವಾಗಿದೆ. ಪಂಜಾಬ್ ನಲ್ಲಿ ಸಿಖ್ ಧರ್ಮದ ಅನುಯಾಯಿಗಳು ಬೃಹತ್ ಸಂಖ್ಯೆಯಲ್ಲಿದ್ದಾರೆ.ಯಂತ್ರಗಳ ಬಿಡಿಭಾಗಗಳು, ಜವಳಿ, ಹೊಲಿಯುವ ಯಂತ್ರ, ಕ್ರೀಡಾ ಸಾಮಗ್ರಿಗಳು, ಪಿಷ್ಟ, ಪ್ರವಾಸೋದ್ಯಮ, ರಸಗೊಬ್ಬರಗಳು, ಸೈಕಲ್, ಸಕ್ಕರೆ ಮತ್ತು ಉಡುಪುಗಳ ಉತ್ಪಾದನೆ ಮಾಡುವ ಕಾರ್ಖಾನೆಗಳು ಇಲ್ಲಿವೆ. ಪಂಜಾಬ್ ನಲ್ಲಿ ಕೃಷಿ ಉತ್ಪನ್ನಗಳು, ವೈಜ್ಞಾನಿಕ ಉಪಕರಣ ಮತ್ತು ವಿದ್ಯುತ್ ವಸ್ತುಗಳು ಉತ್ಪಾದನೆಯಾಗುತ್ತದೆ.[3]