ಪಟಿಯಾಲ
From Wikipedia, the free encyclopedia
ಭಾರತ ದೇಶದ, ಪಂಜಾಬ್ ರಾಜ್ಯದಲ್ಲಿನ, ಒಂದು ನಗರ ಪಟಿಯಾಲ pronunciation (ಸಹಾಯ·ಮಾಹಿತಿ)(ಪಂಜಾಬಿ: ਪਟਿਆਲਾ). ಪಟಿಯಾಲ ಜಿಲ್ಲೆಯು ಪಂಜಾಬಿ ನಗರದಲ್ಲಿ ಪೂರ್ವದಲ್ಲಿ ರಾಜನಗರಿಯಾಗಿತ್ತು. ಈ ನಗರವು ರಾಜ್ಯದ ದಕ್ಷಿಣ -ಪೂರ್ವ ಭಾಗದಲ್ಲಿನೆಲೆಗೊಂಡಿದೆ. 29°49’ ಮತ್ತು 30°47’ ಉತ್ತರ ಅಕ್ಷಾಂಶ , 75°58’ ಹಾಗು 76°54' ಪೂರ್ವ ರೇಖಾಂಶದ ಮಧ್ಯೆ ನೆಲೆಸಿದೆ.
Patiala | |
ರಾಜ್ಯ - ಜಿಲ್ಲೆ |
Punjab - Patiala |
ನಿರ್ದೇಶಾಂಕಗಳು | 30.33° N 76.4° E |
ವಿಸ್ತಾರ - ಎತ್ತರ |
km² - 250 ಮೀ. |
ಸಮಯ ವಲಯ | IST (UTC+5:30) |
ಜನಸಂಖ್ಯೆ (2001) - ಸಾಂದ್ರತೆ |
302870 - {{{population_density}}}/ಚದರ ಕಿ.ಮಿ. |
Deputy Commissioner | Dipinder Singh, IAS |
ಕೋಡ್ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 147 00x - +175 - |
ಪಟಿಯಾಲ/ಪಾಟಿಯಾಲ ಅಂದರೆ ಪಾಟಿ (ಭೂಮಿ )ಯ ಬಾಬಾ ಅಲ ಸಿಂಗ್^^ನು ಪಟಿಯಾಲ ರಾಜ್ಯವನ್ನು ಗುರುತಿಸಿದವನು.
ಈ ನಗರವು ಪಟಿಯಾಲ ಜಿಲ್ಲೆ ಯ ಆಡಳಿತದ ಮುಖ್ಯ ಕೇಂದ್ರವಾಗಿದೆ.ಬ್ರಿಟಿಷ್ ಭಾರತ ದ ಪಂಜಾಬ್ ಪ್ರಾಂತ್ಯದಲ್ಲಿ ,ಪೂರ್ವದಲ್ಲಿ ರಾಜರುಗಳ ರಾಜ್ಯ ದ ನಗರವಾಗಿ ಇದು ಮೆರೆದಿತ್ತು. ಇದರ ಉಸ್ತುವಾರಿಯನ್ನು ಸಿದ್ಹು ಸಾಮ್ರಾಜ್ಯವು ನೋಡಿಕೊಳ್ಳುತ್ತಿತ್ತು.(ಆಳುತ್ತಿತ್ತು) ಪಟಿಯಾಲವು ತನ್ನ ತಲೆಯ ರುಮಾಲಿಗೆ (ಸಂಪ್ರದಾಯ ಪೇಟ ) ಹೆಸರುವಾಸಿಯಾಗಿದೆ. ಪರಂದ (ಕೂದಲನ್ನು ಕಟ್ಟಿ ಹಾಕುವ ಗೊಂಡೆ/ಕುಚ್ಚು ), ಪೆಗ್ (ಪಟಿಯಾಲ ಪೆಗ್ - ಎರಡು ಅಥವಾ ದೊಡ್ಡ ಪೆಗ್ ವ್ಹಿಸ್ಕಿ ), ಮತ್ತು ಜುಟ್ಟಿ/ಜುತ್ತಿ ( ಪಂಜಾಬಿನ ಸಂಪ್ರದಾಯಬದ್ಧ ಚಪ್ಪಲಿ ) ಹಾಗು "ಪಟಿಯಾಲಶಾಹಿ " ಸಲ್ವಾರ್^^ಗೆ ಹೆಸುವಾಸಿಯಾಗಿದೆ. ಹೆಸರಾಂತ ಪಂಜಾಬಿ ಗಾಯಕ ಪಮ್ಮಿ ಬಾಯಿ ,ಹೆಸರುವಾಸಿಯಾದ ಪಟಿಯಾಲಶಾಹಿ ಪೇಟದ ಬಗ್ಗೆ ಹಾಡನ್ನೂ ಹಾಡಿದ್ದಾರೆ.
ಕ್ಯಾಪ್ಟನ್ . ಗೌರವಾನ್ವಿತ ಮಹಾರಾಜಾಧಿರಾಜ ಅಮರಿಂದೆರ್ ಸಿಂಗ್ , ಇಂದಿನ ಪಟಿಯಾಲದ ಮಹಾರಾಜ ರಾಗಿದ್ದಾರೆ.
ಸಹಜವಾಗಿ ನೀಡುವ ಮದ್ಯ ಸರಬರಾಜಿನ ಎರಡರಷ್ಟು ಮದ್ಯದ ಸರಬರಾಜಿಗೆ , ಪಟಿಯಾಲ ಪೆಗ್ ಎಂದು ಕರೆಯಲಾಗುತ್ತದೆ. ಭಾರತದ ಹಲವಾರು ಕಡೆ ಇದನ್ನು ಅರ್ಥಮಾಡಿಕೊಂಡಿದ್ದಾರೆ. ಇದರ ಹಿನ್ನಲೆಯಾಗಿ ಹಲವಾರು ಕಥೆಗಳೇ ಇವೆ. ಇದಕ್ಕೆ ಸಂಬಂಧಿಸಿದಂತೆ ತುಂಬಾ ಧನಿಕನಾದ ಮತ್ತು ವಿಲಾಸಪ್ರಿಯ ಜೀವನಶೈಲಿ ಹೊಂದಿದ ಪಟಿಯಾಲ ಮಹಾರಾಜ - ಮಹಾರಾಜ ಭುಪಿಂದೆರ್ ಸಿಂಗ್, ಒಬ್ಬ ಮಹಾನ್ ಕುಡುಕ.
ಪಟಿಯಾಲ ನಗರವು ಹಲವಾರು ಹೆಸರಾಂತ ವ್ಯಕ್ತಿಗಳಿಗೆ ತವರುಮನೆಯಾಗಿದ್ದು, ಕ್ರಿಕೆಟಿಗರಾದ ನವಜೋತ್ ಸಿದ್ಹು , ಮೊಹಿಂದೆರ್ ಅಮರ್ನಾಥ್ , ರೀತಿಂದೆರ್ ಸೋಧಿ , ಬಾಲಿವುಡ್ ತಾರೆಯರಾದ ಜಿಮ್ಮಿ ಶ್ರೆಗಿಲ್ , ಓಂ ಪುರಿ , ಪಂಜಾಬಿ ಗಾಯಕ ಹರಭಜನ್ ಮನ್ನ , ಜೆಟ್ ಏರ್ ವೇಯ್ಸ್ ಛೇರ್ಮನ್ ನರೇಶ್ ಗೋಯಲ್ ಮತ್ತು ಅಂತರಿಕ್ಷಕ್ಕೆ ಹಾರಿದ ಮೊದಲ ಭಾರತೀಯ , ಸ್ಕ್ವಾಡ್ ಲೀಡರ್ ರಾಕೇಶ್ ಶರ್ಮ-ಇವರೆಲ್ಲರೂ ಪಟಿಯಾಲದವರೇ .