ಪೀಚ್ (peach)
From Wikipedia, the free encyclopedia
Lua error in package.lua at line 80: module 'Module:Pagetype/setindex' not found.
ಪೀಚ್ ಮರ (ಪ್ರುನುಸ್ ಪರ್ಸಿಕ ) ಚೀನಾದ ಪ್ರುನುಸ್ ಸ್ಥಳೀಯ ಪ್ರಭೇದವಾಗಿದ್ದು, ಪೀಚ್ ಎಂದು ಕರೆಯುವ ತಿನ್ನಬಹುದಾದ ರಸಭರಿತ ಹಣ್ಣನ್ನು ಹೊಂದಿರುತ್ತದೆ. ಇದು ಶುಷ್ಕಪರ್ಣಿ ಮರವಾಗಿದ್ದು, 4–10 m ಎತ್ತರವಾಗಿ ಬೆಳೆಯುತ್ತವೆ.ಈ ಮರಗಳು ರೊಸಸೆಯೆ ವಂಶದ ಪ್ರುನಾಯ್ಡೆಉಪಕುಟುಂಬಕ್ಕೆ ಸೇರಿವೆ. ಇದನ್ನು ಪ್ರುನಸ್ ಕುಲದ ಒಳಗೆ ಅಮಿಗ್ಡಲುಸ್ ಎಂಬ ಉಪಕುಲದಲ್ಲಿ ಬಾದಾಮಿ ಯೊಂದಿಗೆ ವರ್ಗೀಕರಿಸಲಾಗುತ್ತದೆ. ಅಲ್ಲದೇ ಉಬ್ಬುತಗ್ಗಿರುವ ಬೀಜದ ಕೋಶ ಇತರ ಉಪಕುಲಗಳಿಂದ ಇವುಗಳನ್ನು ಬೇರ್ಪಡಿಸುತ್ತವೆ.'
ಎಲೆಗಳು ಶೂಲಶಿರದ ಆಕಾರವನ್ನು ಹೊಂದಿದ್ದು , 7–16 ಸೆಮೀ ಉದ್ದವನ್ನು (3–6 in), 2–3 ಸೆಮೀ ಅಗಲವನ್ನು, ಗರಿರೂಪದಎಳೆಗಳನ್ನು ಹೊಂದಿರುತ್ತವೆ. ಎಲೆಗಳು ಬರುವ ಮೊದಲೇ ವಸಂತಕಾಲದ ಪೂರ್ವದಲ್ಲೇ ಹೂಗಳು ಬಿಡುತ್ತವೆ; ಹೂವುಗಳು ಐದು ದಳಗಳೊಂದಿಗೆ ನಸುಕೆಂಪು ಬಣ್ಣವನ್ನು ಹೊಂದಿದ್ದು 2.5–3 ಸೆಮೀ ವ್ಯಾಸವನ್ನು ಹೊಂದಿರುತ್ತವೆ ಹಾಗೂ ಒಂಟಿಯಾಗಿ ಅಥವಾ ಜೋಡಿಯಾಗಿರುತ್ತವೆ. ಇದರ ಹಣ್ಣು ಹಳದಿ ಅಥವಾ ನಸುಬಿಳಿ ಬಣ್ಣದ ತಿರುಳನ್ನು ಮತ್ತು ಸೂಕ್ಷ್ಮವಾದ ಕಂಪನ್ನು ಹಾಗೂ ವಿಭಿನ್ನ ಪ್ರಭೇದಗಳಲ್ಲಿ ನುಣುಪಾದ (ಪೀಚ್ ಗಳು ) ಅಥವಾ ಮೃದುವಾದ (ನೆಕ್ಟರೀನ್ಗಳು ) ಸಿಪ್ಪೆಯನ್ನು ಹೊಂದಿರುತ್ತವೆ. ತಿರುಳು ತುಂಬ ಸೂಕ್ಷ್ಮವಾಗಿರುತ್ತದೆ ಮತ್ತು ಕೆಲವೊಂದು ಪ್ರಭೇದಗಳಲ್ಲಿ ಸುಲಭವಾಗಿ ಪೆಟ್ಟು ಬೀಳಬಹುದು. ಆದರೆ ವಿಶೇಷವಾಗಿ ಹಣ್ಣು ಹಸಿರು ಬಣ್ಣದಲ್ಲಿದ್ದಾಗ ಇದು ಕೆಲವೊಂದು ವಾಣಿಜ್ಯ ತಳಿಗಳಲ್ಲಿ ಗಟ್ಟಿಯಾಗಿರುತ್ತದೆ. ದೊಡ್ಡದಾದ ಏಕ ಬೀಜ ಕೆಂಪು-ಕಂದು ಬಣ್ಣದಲ್ಲಿದ್ದು, ಅಂಡಾಕಾರದಲ್ಲಿರುತ್ತದೆ ಹಾಗೂ ಸರಿಸುಮಾರು 1.3–2 ಸೆಮಿ ನಷ್ಟು ಉದ್ದವನ್ನು ಹೊಂದಿರುತ್ತದೆ ಮತ್ತು ಮರದರೀತಿಯ ಸಿಪ್ಪೆಯಿಂದ ಸುತ್ತುವರೆಯಲ್ಪಟ್ಟಿರುತ್ತದೆ. ಚೆರಿಹಣ್ಣುಗಳು, ಪ್ಲಮ್ ಹಣ್ಣುಗಳು ಮತ್ತು ಏಪ್ರಿಕಾಟ್ ಹಣ್ಣುಗಳ(ಜರದಾಳು ಹಣ್ಣು) ಜೊತೆಯಲ್ಲಿ ಪೀಚ್ ಹಣ್ಣುಗಳು ಓಟೆ ಹಣ್ಣುಗಳಾಗಿವೆ (ಡ್ರ್ಯೂಪ್ಸ್).
ಸ್ವತಃ " ಪೀಚ್" ಪದದ ಜತೆ ಅನೇಕ ಯುರೋಪಿಯನ್ ಭಾಷೆಗಳಲ್ಲಿರುವ ಇದರ ಸಜಾತೀಯಗಳು ಪರ್ಸಿಕಾ ಎಂಬ ವೈಜ್ಞಾನಿಕ ಹೆಸರು, ಪೀಚ್ಗಳು ಪರ್ಷಿಯ(ಈಗಿನ ಇರಾನ್)ಕ್ಕೆ ಸ್ಥಳೀಯವಾದವು ಎಂಬ ಯುರೋಪಿನ ಮುಂಚಿನ ನಂಬಿಕೆಯಿಂದ ವ್ಯುತ್ಪತ್ತಿಯಾಗಿದೆ. ಅವುಗಳು ಚೀನಾದಲ್ಲಿ ಹುಟ್ಟಿದವು ಹಾಗೂ ಪರ್ಷಿಯಾಕ್ಕೆ ಮತ್ತು ಸಿಲ್ಕ್ ಹೆದ್ದಾರಿಯ ಮೂಲಕ ಮೆಡಿಟೇರಿಯನ್ ಪ್ರದೇಶಗಳಿಗೆ ಕ್ರಿಸ್ತ ಶಕ ಕಾಲಕ್ಕೆ ಮೊದಲೇ ಪರಿಚಯಿಸಲ್ಪಟ್ಟಿದ್ದವು ಎಂಬುದು ಆಧುನಿಕ ಸಸ್ಯವಿಜ್ಞಾನದ ಬಹುಮತಾಭಿಪ್ರಾಯವಾಗಿದೆ.[1] ತಿರುಳು ಓಟೆಯನ್ನು ಅಂಟಿಕೊಂಡಿರುತ್ತದೋ ಅಥವಾ ಇಲ್ಲವೋ ಎಂಬುದರ ಆಧಾರದ ಮೇಲೆ ಬೆಳೆದ ಪೀಚ್ ಗಳನ್ನು ಕ್ಲಿಂಗ್ಸ್ಟೋನ್ಸ್ ಮತ್ತು ಫ್ರೀಸ್ಟೋನ್ಸ್ ಎಂದು ವಿಂಗಡಿಸಲಾಗುತ್ತದೆ; ಎರಡು ಬಿಳಿಯ ಅಥವಾ ಹಳದಿ ಬಣ್ಣದ ತಿರುಳನ್ನು ಹೊಂದಿರಬಹುದು. ಬಿಳಿಯ ತಿರುಳನ್ನು ಹೊಂದಿರುವ ಪೀಚ್ ಹಣ್ಣುಗಳು ವಿಶೇಷವಾಗಿ ತುಂಬ ಸಿಹಿಯಾಗಿದ್ದು ಸ್ವಲ್ಪ ಹುಳಿಯನ್ನು ಹೊಂದಿದ್ದರೆ ಹಳದಿ ತಿರುಳನ್ನು ಹೊಂದಿರುವ ಪೀಚ್ ಹಣ್ಣುಗಳು ವಿಶೇಷವಾಗಿ ಸಿಹಿಯಿಂದ ಕೂಡಿರುವ ಆಮ್ಲೀಯ ರುಚಿಯನ್ನು ಹೊಂದಿದ್ದರೂ ಹೆಚ್ಚಾಗಿ ವೈವಿಧ್ಯದಿಂದ ಕೂಡಿದೆ. ಯಾವಾಗಲೂ ಎರಡು ಬಣ್ಣಗಳು ಅವುಗಳ ಸಿಪ್ಪೆಯ ಮೇಲೆ ಒಂದು ರೀತಿಯ ಕೆಂಪು ಬಣ್ಣವನ್ನು ಹೊಂದಿರುತ್ತವೆ. ಕಡಿಮೆ ಹುಳಿಯ ಬಿಳಿ ಬಣ್ಣದ ತಿರುಳನ್ನು ಹೊಂದಿರುವ ಪೀಚ್ ಹಣ್ಣುಗಳು ಚೀನಾ, ಜಪಾನ್ ಮತ್ತು ಸುತ್ತಮುತ್ತಲಿನ ಏಷ್ಯದ ರಾಷ್ಟ್ರಗಳಲ್ಲಿ ಅತ್ಯಂತ ಜನಪ್ರಿಯವಾಗಿರುವ ಪ್ರಭೇದಗಳಾಗಿದ್ದರೆ, ಆಮ್ಲೀಯ ಹಳದಿ ಬಣ್ಣದ ತಿರುಳಿನ ಪ್ರಭೇಧಗಳನ್ನು ಯುರೋಪಿನ ಮತ್ತು ಉತ್ತರ ಅಮೇರಿಕಾದವರು ಐತಿಹಾಸಿಕವಾಗಿ ಇಷ್ಟಪಡುತ್ತಾರೆ.