From Wikipedia, the free encyclopedia
ಬಾಳೆಹಣ್ಣು
ಬಾಳೆಹಣ್ಣಿಗೆ ಉಗಮಸ್ಥಾನ, ಭಾರತ. ಭಾರತದ ಎಲ್ಲ ರಾಜ್ಯಗಳಲ್ಲೂ ಬಾಳೆಹಣ್ಣು ಬೆಳೆಯುತ್ತಾರೆ. ಹೆಚ್ಚಾಗಿ, ಕರ್ನಾಟಕ, ಕೇರಳ, ಅಸ್ಸಾಂ, ತಮಿಳುನಾಡು, ಆಂಧ್ರ, ಹಾಗೂ ಪಶ್ಚಿಮ ಬಂಗಾಳದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಯೂರೋಪಿಯನ್ನರಲ್ಲಿ ಅಲೆಗ್ಸಾಂಡರ್, ಬಾಳೆಹಣ್ಣನ್ನು ಸವಿದ ಪ್ರಥಮನು. ಅವನು ತನ್ನ ದೇಶಕ್ಕೆ, ಬಾಳೆಹಣ್ಣನ್ನು ಪರಿಚಯಿಸಿದ.ಆಫ್ರಿಕ, ಇಜಿಪ್ಟ್ ನಿಂದ ಅರಬ್ ವರ್ತಕರು, ವಿಶ್ವದಾದ್ಯಂತ ಬಾಳೆಯನ್ನು ಮಾರಾಟಮಾಡಿ ಪ್ರಸಿದ್ಧಪಡಿಸಿದರು
ಉತ್ಪಾದನೆ ಮತ್ತು ದೇಶದ (2011) ಮೂಲಕ ಬಾಳೆಹಣ್ಣುಗಳು - ಉತ್ಪಾದನೆ | ||||||||||||||
---|---|---|---|---|---|---|---|---|---|---|---|---|---|---|
ಕ್ರ.ಸಂ | ದೇಶ | ಟನ್-ದಶಲಕ್ಷ | ವಿಶ್ವದ ಶೇಕಡಾವಾರು | . | ಕ್ರ.ಸಂ. | ದೇಶ | ಟನ್-ದಶಲಕ್ಷ | ವಿಶ್ವದ ಶೇಕಡಾವಾರು | ||||||
1 | ಭಾರತ | 29.7 | 20% | 7 | ಇಂಡೋನೇಷ್ಯಾ | 6.1 | 4% | |||||||
2 | ಉಗಾಂಡಾ | 11.1 | 8% | 8 | ಕೊಲಂಬಿಯಾ | 5.1 | 4% | |||||||
3 | ಚೀನಾ | 10.7 | 7% | 9 | ಕ್ಯಾಮರೂನ್ | 4.8 | 3% | |||||||
4 | ಫಿಲಿಪ್ಪೀನ್ಸ್ | 9.2 | 6% | 10 | ಟಾಂಜಾನಿಯಾ | 3.9 | 3% | |||||||
5 | ಈಕ್ವೆಡಾರ್ | 8.0 | 6% | 11 | ಇತರೆ ದೇಶಗಳ -ಒಟ್ಟು | 49.6 | 34% | |||||||
6 | ಬ್ರೆಜಿಲ್ | 7.3 | 5% | 12 | ಒಟ್ಟು ವಿಶ್ವದ ಬೆಳೆ | 145.4 | 100% |
1.ಶಕ್ತಿ 371 kJ (89 kcal | ಜೀವಸತ್ವಗಳು(ವಿಟಮಿನ್ಸ್) | (ಟ್ರೇಸ್) ಲೋಹಾಂಶಗಳು | ಇತರ ಅಂಶಗಳು |
---|---|---|---|
ಶಕ್ತಿ 371 kJ (89 kcal)
1.ಕಾರ್ಬೋಹೈಡ್ರೇಟ್ಗಳು 22,84 ಗ್ರಾಂ 2.ಸಕ್ಕರೆ 12,23 ಗ್ರಾಂ 3.ಆಹಾರದ ಫೈಬರ್ 2.6 ಗ್ರಾಂ 4.ಫ್ಯಾಟ್ 0.33 ಗ್ರಾಂ 5.ಪ್ರೋಟೀನ್ 1.09 ಗ್ರಾಂ |
1.ಥಿಯಾಮೈನ್ (ಬಿ 1) (3%) 0.031 ಮಿಗ್ರಾಂ
2.ರಿಬೋಫ್ಲಾವಿನ್ (B2) (6%) 0.073 ಮಿಗ್ರಾಂ 3.ನಿಯಾಸಿನ್ (B3) (4%) 0.665 ಮಿಗ್ರಾಂ 4.ಪಾಂಟೊಥೆನಿಕ್ ಆಮ್ಲ (ಬಿ 5) (7%) 0.334 ಮಿಗ್ರಾಂ 5.ಜೀವಸತ್ವ B6 (31%) 0.4 ಮಿಗ್ರಾಂ 6.ಫೋಲೇಟ್ (B9) (5%) 20 ಮಿಕ್ರೋಗ್ 7.ಕೋಲೀನ್ (2%) 9.8 ಮಿಗ್ರಾಂ 8.ವಿಟಮಿನ್ ಸಿ (10%) 8.7 ಮಿಗ್ರಾಂ |
1.ಐರನ್ (2%) 0.26 ಮಿಗ್ರಾಂ
2.ಮೆಗ್ನೀಸಿಯಮ್ (8%) 27 ಮಿಗ್ರಾಂ 3.ಮ್ಯಾಂಗನೀಸ್ (13%) 0.27 ಮಿಗ್ರಾಂ 4.ರಂಜಕ (3%) 22 ಮಿಗ್ರಾಂ 5.ಪೊಟ್ಯಾಸಿಯಮ್ (8%) 358 ಮಿಗ್ರಾಂ 6.ಸೋಡಿಯಂ (0%) 1 ಮಿಗ್ರಾಂ 7.ಸತು (2%) 0.15 ಮಿಗ್ರಾಂ |
1.ಫ್ಲೋರೈಡ್ 2.2 ಮಿಕ್ರೋಗ್ |
ಇತ್ತೀಚಿನ ಸಂಶೋಧನೆಗಳ ಪ್ರಕಾರ, ೯೦ ನಿಮಿಷಗಳ ಶ್ರಮದಾಯಕ ಕೆಲಸಕ್ಕೆ ಬೇಕಾಗುವ ಶಕ್ತಿಯನ್ನು ಪೂರೈಸಲು, ಎರಡು ಬಾಳೇಹಣ್ಣುಗಳು ಸಾಕು. ಈ ಹಣ್ಣಿನಲ್ಲಿ ಶಕ್ತಿಯಜೊತೆಗೆ, ನಾರಿನಂಶ, ಹಾಗೂ ೩ ವಿಧದ ಪ್ರಾಕೃತಿಕ ಸಕ್ಕರೆಗಳಿವೆ.
ಪ್ರತಿದಿನ ಇದರ ಸೇವನೆಯಿಂದ, ಅನಾರೋಗ್ಯ ಸಂಬಂಧೀ ಹತ್ತು ಹಲವು ಸಮಸ್ಯೆಗಳಿಂದ ದೂರವಿರಬಹುದಂತೆ.
'ಮೈಂಡ್ ಸಂಸ್ಥೆ,,' ಇತ್ತೀಚೆಗೆ ನಡೆಸಿದ, ಸರ್ವೇಕ್ಷಣೆಯ ಪ್ರಕಾರ, ಖಿನ್ನತೆಗೆ ಒಳಗಾದವರು ಒಂದು ಬಾಳೆಹಣ್ಣನ್ನು ಸೇವಿಸಿದ ಬಳಿಕ, ಹೆಚ್ಚಿನವರಲ್ಲಿ ಸುಧಾರಣೆ ಕಂಡುಬಂದಿದೆ. ಟ್ರಿಪ್ಟೋಪ್ಯಾನ್ ಎಂಬ ಪ್ರೋಟೀನ್ ಇದಕ್ಕೆ ಕಾರಣ. ನಮ್ಮ ದೇಹ ಈ ಪ್ರೋಟೀನ್ ನನ್ನು ಸೆರೋಟಿನ್ ಆಗಿ ಪರಿವರ್ತಿಸುತ್ತದೆ. ಇದರಿಂದ ಉದ್ವೇಗಶಮನಗೊಂಡು ಪ್ರಪುಲ್ಲಚಿತ್ತರನ್ನಾಗಿಸುವ ಅಂಶವೆಂದು ಪರಿಗಣಿತವಾಗಿದೆ. ಕಾಡುವ ನಮ್ಮೆಲ್ಲರ ಖಿನ್ನತೆಗೆ ಮಾತ್ರೆಗಳ ಮೊರೆಹೋಗುವಬದಲು, ದಿನಕ್ಕೊಂದು ಬಾಳೆಹಣ್ಣಿನ ಸೇವನೆಯಿಂದ ಉಪಶಮನಪಡೆಯಬಹುದು. ಬಾಳೆಹಣ್ಣಿನಲ್ಲಿರುವ ಬಿ-೬ ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವನ್ನು ಸಮಸ್ಥಿತಿಯಲ್ಲಿರಿಸಿ, ನಮ್ಮ ಮನಸ್ಥಿತಿಯ ಮೇಲೆ ಪರಿಣಾಮವನ್ನುಂಟುಮಾಡುತ್ತದೆ. ಬಾಳೆಹಣ್ಣು ನಮ್ಮ ದೇಹದಲ್ಲಿ ತ್ವರಿತ ಶಕ್ತಿ ವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಗ್ಲೂಕೋಸ್ ಮಟ್ಟವು ತುಂಬಾ ಹೆಚ್ಚಾಗಿದೆ, ಇದರಿಂದಾಗಿ ನಮ್ಮ ದೇಹವು ಶಕ್ತಿಯನ್ನು ಪಡೆಯುತ್ತದೆ. ಆದ್ದರಿಂದ, ಪ್ರತಿದಿನ ತಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಸೇರಿಸಿದರೆ, ಉತ್ತಮ ಶಕ್ತಿ ಮಟ್ಟವನ್ನು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು[1]. ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ, ಇದು ದೇಹದಲ್ಲಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬಾಳೆಹಣ್ಣಿನಲ್ಲಿ ಕಬ್ಬಿಣದ ಅಂಶ ಸಮೃದ್ಧವಾಗಿರುವುದರಿಂದ ದೇಹದಲ್ಲಿ ಕೆಂಪು ರಕ್ತಕಣಗಳ ಉತ್ಪಾದನೆಯನ್ನು ಪ್ರಚೋದಿಸಿ, ರಕ್ತಹೀನತೆಯನ್ನು ನೀಗಿಸುತ್ತದೆ.
ಪೊಟಾಷಿಯಮ್, ಲವಣ ಸಮೃದ್ಧಿಯಾಗಿದ್ದು, ಉಪ್ಪಿನ ಅಂಶ ತೀರಾ ಕಡಿಮೆ. ಇದರಿಂದ ಬಾಳೆಹಣ್ಣು ರಕ್ತದೊತ್ತಡವನ್ನು ತಡೆಗಟ್ಟಲು ಸೂಕ್ತ ಅಸ್ತ್ರ. "ಅಮೆರಿಕದ ಆಹಾರ ಮತ್ತು ಔಷಧಿಗಳ ಆಡಳಿತ ಮಂಡಲಿ" ಕೂಡ ಇತ್ತೀಚೆಗೆ ಅಧಿಕೃತವಾಗಿ ಜಾಹೀರುಗೊಳಿಸಲು, ಅನುಮತಿ ನೀಡಿದೆ.
ಅಧ್ಯಯನದ ಪ್ರಕಾರ, ಪೊಟಾಷಿಯಮ್ ಜಾಗೃತಗೊಳಿಸುವ ಕೆಲಸದಲ್ಲಿ ನೆರವಾಗಿದೆ.
ನಾರಿನ ಅಂಶ ಯತೇಚ್ಛ. ಕೃತಕ ವಿರೇಚಕಗಳಿಲ್ಲದೆ, ಮಲಬದ್ಧತೆಯ ಸಮಸ್ಯೆಯನ್ನು, ಹೋಗಲಾಡಿಸಲು ಅತ್ಯಂತ ಸಹಾಯಕಾರಿ.
ಜೇನುತುಪ್ಪವನ್ನು ಸೇರಿಸಿದ ಬಾಳೆಹಣ್ಣಿನ ಮಿಲ್ಕ್ ಶೇಕ್ ಒಂದು ದಿವ್ಯ ಪಾನಕ. ತಣ್ಣಗಾಗಿಸುವ ಕ್ರಿಯೆ ಬಾಳೆಹಣ್ಣು ಮಾಡಿದರೆ, ಜೇನುತುಪ್ಪ, ರಕ್ತದ ಸಕ್ಕರೆ ಪ್ರಮಾಣವನ್ನು ಸರಿದೂಗಿಸುತ್ತದೆ.
ಜಠರದಲ್ಲಿ, ಸಹಜ ಪ್ರತ್ಯಾಮ್ಲೀಯಪರಿಣಾಮವನ್ನುಂಟುಮಾಡಿ . ಎದೆಯುರಿಯಿಂದ ಪರಿತಪಿಸುತ್ತಿರುವವರಿಗೂ ಬಾಳೆಹಣ್ಣು ದಿವ್ಯೌಷಧ.
ಎರಡು ಊಟಗಳ ಮಧ್ಯೆ ಒಂದು ಬಾಳೆಹಣ್ಣನ್ನು ಗರ್ಭಿಣಿಸ್ತ್ರೀಯರಿಗೆ ಕೊಡುವುದರಿಂದ ವಾಕರಿಕೆ, ವಾಂತಿ ತಡೆಗಟ್ಟಬಹುದು. ಈ ಹಣ್ಣು, ಬೆಳಗಿನ ಆರೋಗ್ಯದ ಏರುಪೇರುಗಳನ್ನು ನಿಯಂತ್ರಣದಲ್ಲಿಡುತ್ತದೆ.
ಸಿಪ್ಪೆಯ ಒಳಭಾಗವನ್ನು ಸೊಳ್ಳೆ ಕಡಿದ ಜಾಗಕ್ಕೆ ಚೆನ್ನಾಗಿ ಉಜ್ಜಿ,
ಬಿ ವಿಟಮಿನ್ ಸಮೃದ್ಧಿಯಾಗಿರುವುದರಿಂದ ನರವ್ಯೂಹದ ಶಾಂತತೆ ಕಾಪಾಡುವುದರಲ್ಲಿ ಸಹಕಾರಿ.
ಅತೀವ ಒತ್ತಡದಲ್ಲಿ ಕೆಲಸಮಾಡುವವರು, ಬೊಜ್ಜಿನ ಸಮಸ್ಯೆಗೆ ಹೆಚ್ಚಾಗಿ ಒಳಗಾಗುವರು. ಸುಮಾರು , ೫೦೦೦ ಒಳರೋಗಿಗಳ ಆರೋಗ್ಯಸಮೀಕ್ಷೆಯಿಂದ ದ್ರಡ ಪಟ್ಟಿದೆ. ಹೆಚ್ಚುಒತ್ತಡದಲ್ಲಿ ಕೆಲಸಮಾಡುವವರಿಗೆ, ಊಟಸೇರುವುದಿಲ್ಲ. ಅದಕ್ಕಾಗಿ ಅವರು ಜಂಕ್ ಫುಡ್ (ಕುರುಕಲು ತಿಂಡಿಗಳನ್ನು) ಎಂದು ಕರೆಯಲಾಗುವ, ಚಿಪ್ಸ್, ಚಾಕೊಲೆಟ್, ಮುಂತಾದ ಅಡ್ಡತಿಂಡಿಗಳನ್ನು ತಿನ್ನುತ್ತಾರೆ. ಇದರಿಂದ ಬೊಜ್ಜುಬೆಳೆಯಲು ಸಹಾಯವಾಗುತ್ತದೆ. ಕಾರ್ಬೋಹೈಡ್ರೇಟ್ ಹೆಚ್ಚಾಗಿರುವ ಹಣ್ಣುಗಳ ಸೇವನೆಯಿಂದ ರಕ್ತದ ಸಕ್ಕರೆಯ ಪ್ರಮಾಣವನ್ನು ಕಾಯ್ದುಕೊಂಡು ಅಂತಹ ಅಡ್ಡತಿಂಡಿಗಳ ವಾಂಛೆಯಿಂದ ಮುಕ್ತರಾಗಬಹುದು.
ಆಮ್ಲೀಯತೆಯನ್ನು ತಗ್ಗಿಸುತ್ತದೆ. ಜಠರದ ಪೊರೆಯನ್ನು ಮರುಲೇಪಿಸುವ ಮೂಲಕ, ಅಲ್ಸರ್ ತೊಂದರೆಯನ್ನು ಶಮನಗೊಳಿಸುತ್ತದೆ.
ದೇಹಕ್ಕೆ ತಂಪು, ಎಂಬ ನಂಬಿಕೆ ವಿಶ್ವದ ಬಹುತೇಕ ಜನಾಂಗಗಳಲ್ಲಿ ಇದೆ. ಥಾಯ್ ಲ್ಯಾಂಡ್ ನಲ್ಲಿ ಗರ್ಭಿಣಿ ಸ್ತ್ರೀಯರು ಬಾಳೆಹಣ್ಣಿನ ಸೇವನೆಯನ್ನು ಮಾಡುವುದು ಸಾಮಾನ್ಯ. ಇದರಿಂದ ಅವರ ದೇಹ ಮತ್ತು ಮನಸ್ಸುಗಳೆರಡರ ಉಷ್ಣತೆ ಕಡಿಮೆಯಾಗಿ, ಹುಟ್ಟಿದ ಮಗುವಿನ ದೇಹಮತ್ತು-ಮನಸ್ಸುಗಳು ಶಾಂತವಾಗಿರಲೆಂಬ ನಂಬಿಕೆ ಇದೆ.
ಬಿ-೬, ಬಿ-೧೨ ವಿಟಮಿನ್ ಗಳು ಹಾಗೂ ಪೊಟ್ಯಾಶಿಯಮ್, ಮೆಗ್ನೀಶಿಯಮ್ ಅಂಶಗಳು, ನಿಕೊಟಿನ್ನ ಸೆಳೆತದಿಂದ ಹೊರಬರುವಾಗ, ದೇಹದ ಮೇಲಾಗುವ ಪರಿಣಾಮಗಳನ್ನು ನಿಭಾಯಿಸಲು ದೇಹಕ್ಕೆ ಸಹಾಯಮಾಡುತ್ತವೆ.
ಪೊಟಾಸಿಯಂ ಪ್ರಮುಖ ಖನಿಜ. ಹೃದಯದ ಬಡಿತವನ್ನು ನಿಯಂತ್ರಿಸುತ್ತದೆ. ಮೆದುಳಿಗೆ ಆಮ್ಲಜನಕವನ್ನು ಪೂರೈಸುತ್ತದೆ. ದೇಹದ ನೀರಿನ ಪ್ರಮಾಣವನ್ನು ಸರಿದೂಗಿಸುತ್ತದೆ. ಪ್ರಪಂಚದ ಮಂಚೂಣಿಯಲ್ಲಿರುವ ಕ್ರೀಡಾಳುಗಳ ಪ್ರಥಮ ಆದ್ಯತೆ- ಸೇಬು. ನಂತರ ಬಾಳೆಹಣ್ಣು. ಇದರಲ್ಲಿ, ೪ ರಷ್ಟು ಪ್ರೋಟಿನ್, ಎರಡುಪಟ್ಟು ಕಾರ್ಬೊ ಹೈಡ್ರೇಟ್, ೩ ಪಟ್ಟು ಫಾಸ್ಫರಸ್, ೫ ಪಟ್ಟು ವಿಟಮಿನ್ ಎ, ಮತ್ತು ಕಬ್ಬಿಣಾಂಶ ಹಾಗೂ ಎರಡುಪಟ್ಟು ಇತರ ವಿಟಮಿನ್, ಹಾಗೂ ಖನಿಜಗಳಿವೆ. ಪೊಟಾಷಿಯಮ್ ಅಂಶಕೂಡ ಸಮೃದ್ಧವಾಗಿದೆ. "ಹೊತ್ತಲ್ಲದ ಹೊತ್ತಿನಲ್ಲಿ ಅದೂ-ಇದು ತಿನ್ನುವಬದಲು ಬಾಳೆಹಣ್ಣಿನಸೇವನೆ ಮಾಡಿದರೆ ಖಂಡಿತವಾಗಿಯೂ ನಮ್ಮ ದೇಹ, ಸುಸ್ಥಿತಿಯಲ್ಲಿರುವುದು ಎಂದು ವೈದ್ಯರು ಹೇಳುತ್ತಾರೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.