ಬಿಸ್ಫೆನಾಲ್ ಎ
From Wikipedia, the free encyclopedia
BPA ಎಂದು ಸಾಮಾನ್ಯವಾಗಿ ಸಂಕ್ಷಿಪ್ತಗೊಳ್ಳುವ ಬಿಸ್ಫೆನಾಲ್ ಎ ಎಂಬುದು ಎರಡು ಫೀನಾಲ್ ಕಾರ್ಯಾತ್ಮಕ ಗುಂಪುಗಳೊಂದಿಗಿರುವ ಒಂದು ಜೈವಿಕ ಸಂಯುಕ್ತವಾಗಿದೆ. ಇದನ್ನು ಇತರ ಬಳಕೆಗಳೊಂದಿಗೆ ಪಾಲಿಕಾರ್ಬೋನೆಟ್ ಪ್ಲ್ಯಾಸ್ಟಿಕ್ ಹಾಗು ಇಪಾಕ್ಸಿ ರಾಸಾಯನಿಕ ರಾಳವನ್ನು ತಯಾರಿಸಲು ಬಳಸಲಾಗುತ್ತದೆ.
ಹೆಸರುಗಳು | |
---|---|
ಐಯುಪಿಎಸಿ ಹೆಸರು
4,4'-dihydroxy-2,2-diphenylpropane | |
Other names
BPA, 4,4'-(propan-2-ylidene)diphenol, p, p'-isopropylidenebisphenol, 4,4´-isopropylidenediphenol, 2,2-bis(4-hydroxyphenyl)propane. | |
Identifiers | |
CAS Number |
|
3D model (JSmol) |
|
ChemSpider |
|
ECHA InfoCard | 100.001.133 |
EC Number | 201-245-8 |
KEGG |
|
PubChem CID |
|
RTECS number | SL6300000 |
UNII | |
UN number | 2430 |
InChI
| |
SMILES
| |
ಗುಣಗಳು | |
ಆಣ್ವಿಕ ಸೂತ್ರ | C15H16O2 |
ಮೋಲಾರ್ ದ್ರವ್ಯರಾಶಿ | ೨೨೮.೨೯ g mol−1 |
Appearance | White to light brown flakes or powder |
ಸಾಂದ್ರತೆ | 1.20 g/cm³, solid |
ಕರಗು ಬಿಂದು |
158 to 159 °C (430 K) |
ಕುದಿ ಬಿಂದು |
220 °C (493 K) / 4 mmHg |
ಕರಗುವಿಕೆ ನೀರಿನಲ್ಲಿ | 120–300 ppm (at 21.5 °C) |
Hazards | |
ಆರ್-ಹಂತಗಳು | R36, R37, ಟೆಂಪ್ಲೇಟು:R38, R43 |
ಎಸ್-ಹಂತಗಳು | S24, S26, S37 |
NFPA 704 |
0
3
0 |
ಚಿಮ್ಮು ಬಿಂದು (ಫ್ಲಾಶ್ ಪಾಯಿಂಟ್) |
|
ಸಂಬಂಧಿತ ಸಂಯುಕ್ತಗಳು | |
Related compounds |
|
Except where otherwise noted, data are given for materials in their standard state (at 25 °C [77 °F], 100 kPa). > | |
Infobox references | |
೧೯೩೦ರ ಮಧ್ಯಭಾಗದಿಂದಲೂ ಈಸ್ಟ್ರಜೆನಿಕ್(ಮದಜನಕ)ವೆಂದು ಪರಿಚಿತವಾಗಿತ್ತು. ಅನೇಕ ಸರ್ಕಾರಗಳು ಅದರ ಸುರಕ್ಷತೆಯನ್ನು ಪ್ರಶ್ನಿಸಿ ವರದಿಗಳನ್ನು ನೀಡಿದ್ದರಿಂದ, ಗ್ರಾಹಕ ಪದಾರ್ಥಗಳಲ್ಲಿ ಬಿಸ್ಫೆನಾಲ್ ಎ ನ ಬಳಕೆಯ ಬಗ್ಗೆ ಕಳವಳಗಳು ೨೦೦೮ರಲ್ಲಿ ಸುದ್ದಿ ಮಾಧ್ಯಮದಲ್ಲಿ ನಿರಂತರವಾಗಿ ವರದಿಯಾದವು. ಇದರಿಂದ ತಮ್ಮ ಕಪಾಟುಗಳಲ್ಲಿ ಇದನ್ನು ಹೊಂದಿದ್ದಂತಹ ಕೆಲವು ವ್ಯಾಪಾರಿಗಳು ಇದನ್ನು ಹೊರಹಾಕುವಂತಾಯಿತು. ಅಮೆರಿಕ ಸಂಯುಕ್ತ ಸಂಸ್ಥಾನದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್ (FDA) ೨೦೧೦ರಲ್ಲಿ ನೀಡಿದ ಒಂದು ವರದಿಯು, ಇದಕ್ಕೆ ಭ್ರೂಣ, ಶಿಶುಗಳು ಹಾಗು ಚಿಕ್ಕ ಮಕ್ಕಳು ಒಡ್ಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಕಳವಳಗಳನ್ನು ಹುಟ್ಟುಹಾಕಿತು.[1] ಸೆಪ್ಟೆಂಬರ್ ೨೦೧೦ರಲ್ಲಿ, ಕೆನಡಾ, BPA ಒಂದು ವಿಷಯುಕ್ತ ಪದಾರ್ಥವೆಂದು ಘೋಷಿಸಿದ ಮೊದಲ ರಾಷ್ಟ್ರವಾಯಿತು.[2][3] ಯುರೋಪಿಯನ್ ಒಕ್ಕೂಟ ಹಾಗು ಕೆನಡಾದಲ್ಲಿ, ಮಕ್ಕಳು ಹಾಲು ಕುಡಿಯುವ ಬಾಟಲುಗಳಲ್ಲಿ BPAಯ ಬಳಕೆಯನ್ನು ನಿಷೇಧಿಸಲಾಯಿತು.[4]