ಬೋರಾನ್
ಮೂಲಧಾತು ಮತ್ತು ಮೂಲಧಾತುಗಳ ಪಟ್ಟಿಯಲ್ಲಿ ೫ನೆಯ ಸ್ಥಾನದಲ್ಲಿದೆ. / From Wikipedia, the free encyclopedia
ಬೋರಾನ್ ಒಂದು ಮೂಲವಸ್ತು. ಇದು ಅತ್ಯಂತ ಗಟ್ಟಿಯಾದ ಅಲೋಹ. ಆವಿಯಾದ ಸರೋವರಗಳ ತಳದಲ್ಲಿ ವಿಫುಲವಾಗಿ, ಪ್ರಪಂಚದೆಲ್ಲೆಡೆ ದೊರೆಯುತ್ತದೆ. ಸಸ್ಯಗಳ ಬೆಳವಣಿಗೆಗೆ ಆವಶ್ಯವಾದ ಮೂಲವಸ್ತು.[3][4][5] ಹಲವಾರು ಕೈಗಾರಿಕೆಗಳಲ್ಲಿ ವ್ಯಾಪಕವಾಗಿ ಉಪಯೋಗದಲ್ಲಿದೆ. ಉಷ್ಣನಿರೋಧಕ ಗಾಜಿನ ತಯಾರಿಕೆಯಲ್ಲಿ,[6][7] ಹಲವಾರು ಬಗೆಯ ಔಷಧಗಳಲ್ಲಿ ಬಳಕೆಯಲ್ಲಿದೆ. ಇದನ್ನು ೧೮೦೮ರಲ್ಲಿ ಫ್ರಾನ್ಸ್ ನ ಜೋಸೆಫ್ ಗೆ ಲುಸಾಕ್ ಮತ್ತು ಲೂಯಿಸ್ ಜಾಕಸ್ ಥೆನಾರ್ಡ್ ಎಂಬವರು ಮೂಲವಸ್ತುವಾಗಿ ಗುರುತಿಸಿದರು.
| |||||||||||||||
ಸಾಮಾನ್ಯ ಮಾಹಿತಿ | |||||||||||||||
---|---|---|---|---|---|---|---|---|---|---|---|---|---|---|---|
ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಬೋರಾನ್, B, 5 | ||||||||||||||
ರಾಸಾಯನಿಕ ಸರಣಿ | metalloid | ||||||||||||||
ಗುಂಪು, ಆವರ್ತ, ಖಂಡ | 13, 2, p | ||||||||||||||
ಸ್ವರೂಪ | ಕಪ್ಪು ಯಾ ಕಂದು | ||||||||||||||
ಅಣುವಿನ ತೂಕ | 10.811(7) g·mol−1 | ||||||||||||||
ಋಣವಿದ್ಯುತ್ಕಣ ಜೋಡಣೆ | 1s2 2s2 2p1 | ||||||||||||||
ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು | 2, 3 | ||||||||||||||
ಭೌತಿಕ ಗುಣಗಳು | |||||||||||||||
ಹಂತ | ಘನ | ||||||||||||||
ಸಾಂದ್ರತೆ (ಕೋ.ತಾ. ಹತ್ತಿರ) | 2.34 g·cm−3 | ||||||||||||||
ದ್ರವದ ಸಾಂದ್ರತೆ at ಕ.ಬಿ. | 2.08 g·cm−3 | ||||||||||||||
ಕರಗುವ ತಾಪಮಾನ | 2349 K (2076 °C, 3769 °ಎಫ್) | ||||||||||||||
ಕುದಿಯುವ ತಾಪಮಾನ | 4200 K (3927 °C, 7101 °F) | ||||||||||||||
ಸಮ್ಮಿಲನದ ಉಷ್ಣಾಂಶ | 50.2 kJ·mol−1 | ||||||||||||||
ಭಾಷ್ಪೀಕರಣ ಉಷ್ಣಾಂಶ | 480 kJ·mol−1 | ||||||||||||||
ಉಷ್ಣ ಸಾಮರ್ಥ್ಯ | (25 °C) 11.087 J·mol−1·K−1 | ||||||||||||||
| |||||||||||||||
ಅಣುವಿನ ಗುಣಗಳು | |||||||||||||||
ಸ್ಪಟಿಕ ಸ್ವರೂಪ | rhombohedral | ||||||||||||||
ಆಕ್ಸಿಡೀಕರಣ ಸ್ಥಿತಿಗಳು | 4,[1] 3, 1[2] (mildly acidic oxide) | ||||||||||||||
ವಿದ್ಯುದೃಣತ್ವ | 2.04 (Pauling scale) | ||||||||||||||
ಅಣುವಿನ ತ್ರಿಜ್ಯ | 85 pm | ||||||||||||||
ಅಣುವಿನ ತ್ರಿಜ್ಯ (ಲೆಖ್ಕಿತ) | 87 pm | ||||||||||||||
ತ್ರಿಜ್ಯ ಸಹಾಂಕ | 82 pm | ||||||||||||||
ಇತರೆ ಗುಣಗಳು | |||||||||||||||
ಕಾಂತೀಯ ವ್ಯವಸ್ಥೆ | nonmagnetic | ||||||||||||||
ವಿದ್ಯುತ್ ರೋಧಶೀಲತೆ | (20 °C) 1.5×104Ω·m | ||||||||||||||
ಉಷ್ಣ ವಾಹಕತೆ | (300 K) 27.4 W·m−1·K−1 | ||||||||||||||
ಉಷ್ಣ ವ್ಯಾಕೋಚನ | (25 °C) 5–7 µm·m−1·K−1 | ||||||||||||||
ಶಬ್ದದ ವೇಗ (ತೆಳು ಸರಳು) | (20 °C) 16200 m/s | ||||||||||||||
ಸಗಟು ಮಾಪನಾಂಕ | (β form) 185 GPa | ||||||||||||||
ಮೋಸ್ ಗಡಸುತನ | 9.3 | ||||||||||||||
Vickers ಗಡಸುತನ | 49000 MPa | ||||||||||||||
ಸಿಎಎಸ್ ನೋಂದಾವಣೆ ಸಂಖ್ಯೆ | 7440-42-8 | ||||||||||||||
ಉಲ್ಲೇಖನೆಗಳು | |||||||||||||||
ಆವರ್ತಕೋಷ್ಟಕದಲ್ಲಿಯ ಐದನೆಯ ಧಾತು. ರಾಸಾಯನಿಕ ಪ್ರತೀಕ B. ಅಲೋಹ. ಪರಮಾಣು ಸಂಖ್ಯೆ ೫; ಪರಮಾಣು ತೂಕ ೧೦.೮೧೧. ಇದರ ಎರಡು ಸಮಸ್ಥಾನಿಗಳ (ಐಸೊಟೋಪ್ಸ್) ಪರಮಾಣು ತೂಕ ೧೦ ಮತ್ತು ೧೧. ಇದು ಅಲೋಹವಾಗಿದ್ದರೂ ಲೋಹಗುಣಗಳನ್ನು ಪ್ರದರ್ಶಿಸುವುದರಿಂದ ಆವರ್ತಕೋಷ್ಟಕದ ಮೂರನೆಯ (III) ಗುಂಪಿಗೆ ಸೇರಿಸಲ್ಪಟ್ಟಿದೆ. ಕಾರ್ಬನ್ ಮತ್ತು ಸಿಲಿಕಾನುಗಳೊಡನೆ ಹಾರಿಜೀಯ ಮತ್ತು ಕರ್ಣ ಸಂಬಂಧಹೊಂದಿದೆ. ಎಲೆಕ್ಟ್ರಾನಿಕ್ ವಿನ್ಯಾಸ ೨.೩.
ಹೋಮ್ಬರ್ಗ್ ಎಂಬವ ಸಲ್ಫ್ಯೂರಿಕ್ ಆಮ್ಲದೊಂದಿಗೆ ಬೋರಾಕ್ಸ್ ರಾಸಾಯನಿಕವನ್ನು (ಬಿಳಿಗಾರ; ಟಿನ್ಕಾಲ್) ಬೆರೆಸಿ ಕಾಸುವುದರ ಮೂಲಕ ಸ್ಫಟಿಕರೂಪದ ವಸ್ತು ಪಡೆದ (೧೭೦೨). ಇದನ್ನು ಬೋರಾನ್ ಆಮ್ಲ ಎಂದು ಹೆಸರಿಸಿದ. ಗೇ ಲೂಸ್ಯಾಕ್ ಮತ್ತು ತೆನಾರ್ಡ್ ಎಂಬ ರಸಾಯನವಿಜ್ಞಾನಿಗಳು ಬೋರಾನ್ ಆಕ್ಸೈಡನ್ನು ಪೊಟ್ಯಾಸಿಯಮ್ಮಿನ ಜೊತೆಗೂಡಿಸಿ ಕಬ್ಬಿಣದ ಕೊಳವೆಯಲ್ಲಿ ಕಾಸಿ ಈ ಧಾತುವನ್ನು ಪಡೆದರು.[8] ೧೮೧೨ರಲ್ಲಿ ಹಂಫ್ರಿ ಡೇವಿ ಇದನ್ನು ಬೋರಾನ್ ಎಂದು ನಾಮಕರಿಸಿದ.[9]