![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/4/49/BritishIndianArmy.jpg/640px-BritishIndianArmy.jpg&w=640&q=50)
ಬ್ರಿಟಿಷ್ ಭಾರತೀಯ ಸೇನೆ
From Wikipedia, the free encyclopedia
೧೯೪೭ರಲ್ಲಿ ಭಾರತದ ವಿಭಜನೆಯಾಗುವುದಕ್ಕಿಂತ ಮುನ್ನ ಬ್ರಿಟಿಷ್ ಭಾರತೀಯ ಸೇನೆ ಯು ಭಾರತದಲ್ಲಿನ ಬ್ರಿಟಿಷ್ ರಾಜ್ನ/ಆಡಳಿತದ ಪ್ರಧಾನ ಸೇನೆಯಾಗಿತ್ತು. ಇದನ್ನು ಬ್ರಿಟಿಷ್ ಭಾರತೀಯ ಸೇನೆ ಎಂಬ ಅಂಕಿತದಿಂದ ನಿಯುಕ್ತಗೊಳಿಸಿರಲಿಲ್ಲ ಬದಲಿಗೆ ಭಾರತೀಯ ಸೇನೆ ಎಂದೇ ಅಂಕಿತಗೊಳಿಸಲಾಗಿತ್ತು ಹಾಗೂ ಸ್ಪಷ್ಟ ಐತಿಹಾಸಿಕ ಸಂದರ್ಭವನ್ನು ಹೊಂದಿದ್ದ ಯಾವುದಾದರೂ ಲೇಖನ ಇಲ್ಲವೇ ಗ್ರಂಥದಲ್ಲಿ ಇದನ್ನು ಭಾರತೀಯ ಸೇನೆ ಎಂದೇ ಉಲ್ಲೇಖಿಸಲಾಗುತ್ತದೆ. ಭಾರತೀಯ ಸೇನೆಯು ಬ್ರಿಟಿಷ್ ಸೇನಾಪಡೆಗೆ ಅತ್ಯಗತ್ಯವಾದ ಅಧೀನ ಸೇನೆಯೆಂದು ಕೇವಲ ಭಾರತದಲ್ಲಿ ಮಾತ್ರವಲ್ಲದೇ ಇತರೆ ರಾಷ್ಟ್ರಗಳಲ್ಲಿ ಕೂಡಾ, ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಅದರಲ್ಲೂ ನಿರ್ದಿಷ್ಟವಾಗಿ ಪ್ರಥಮ ಹಾಗೂ ದ್ವಿತೀಯ ವಿಶ್ವ ಸಮರಗಳ ಅವಧಿಯಲ್ಲಿ ಸಾಬೀತುಪಡಿಸಿತು.
![]() | This article includes a list of references, but its sources remain unclear because it has insufficient inline citations. (August 2009) |
- ಸ್ವಾತಂತ್ರ್ಯಾನಂತರದ (ಮತ್ತು ವಿಭಜನಾ ನಂತರದ) ಭಾರತ ಗಣರಾಜ್ಯದ ಸೇನೆಯ ಬಗ್ಗೆ ಭಾರತೀಯ ಸೇನೆಯನ್ನು ಮತ್ತು ಸ್ವಾತಂತ್ರ್ಯಾನಂತರದ ಪಾಕಿಸ್ತಾನದ ಸೇನೆಯ ಬಗ್ಗೆ ಪಾಕಿಸ್ತಾನ ಸೇನೆಯನ್ನು ನೋಡಿ
![](http://upload.wikimedia.org/wikipedia/commons/thumb/4/49/BritishIndianArmy.jpg/320px-BritishIndianArmy.jpg)
ಭಾರತದಲ್ಲಿ, ಈ ಸೇನೆಯು ನೇರ ಬ್ರಿಟಿಷ್ ಆಡಳಿತ/ಅಧಿಪತ್ಯಕ್ಕೆ (ಭಾರತದ ಅಧೀನ ಸಂಸ್ಥಾನಗಳು, ಅಥವಾ ಸಂಗ್ರಹವಾಗಿ, ಬ್ರಿಟಿಷ್ ಭಾರತ) ಒಳಪಟ್ಟಿದ್ದ ಪ್ರದೇಶಗಳು ಮಾತ್ರವಲ್ಲದೇ ಬ್ರಿಟಿಷ್ ಸಾರ್ವಭೌಮತ್ವಕ್ಕೆ (ರಾಜಾಡಳಿತಕ್ಕೆ ಒಳಪಟ್ಟ ಸಂಸ್ಥಾನಗಳು) ಒಳಪಟ್ಟ ಪ್ರದೇಶಗಳ ರಕ್ಷಣೆಯ ಜವಾಬ್ದಾರಿಯನ್ನು ಕೂಡಾ ಹೊತ್ತಿತ್ತು.[1]
"ಭಾರತೀಯ ಸೇನೆ" ಎಂದು ಅಧಿಕೃತವಾಗಿ ಕರೆಯಲ್ಪಟ್ಟ ಮೊದಲ ಸೇನಾಪಡೆಯನ್ನು ಭಾರತದ ಸರ್ಕಾರವು ೧೮೯೫ರಲ್ಲಿ, (ಬಂಗಾಳ ಸೇನೆ, ಮದ್ರಾಸು ಸೇನೆ ಮತ್ತು ಬಾಂಬೆ ಸೇನೆ) ದೀರ್ಘ ಕಾಲದ ಹಿಂದೆಯೇ ಸ್ಥಾಪಿಸಲ್ಪಟ್ಟಿದ್ದ ಬ್ರಿಟಿಷ್ ಭಾರತದ ಅಧೀನ ಪ್ರಾಂತ್ಯಗಳ ಮೂರು ಪ್ರಾಂತೀಯ ಸೇನಾಪಡೆಗಳ ಜೊತೆಜೊತೆಗೆ ಸ್ಥಾಪಿಸಿತು. ಆದಾಗ್ಯೂ, ೧೯೦೩ರಲ್ಲಿ ಭಾರತೀಯ ಸೇನೆಯು ಈ ಮೂರೂ ಸೇನಾಪಡೆಗಳನ್ನು ತನ್ನಲ್ಲಿ ವಿಲೀನಗೊಳಿಸಿಕೊಂಡಿತು.
"ಭಾರತೀಯ ಸೇನೆ" ಎಂಬ ಪದಪುಂಜವನ್ನು ಕೆಲವೊಮ್ಮೆ ಹಿಂದಿನ ಅಧೀನ ಪ್ರಾಂತ್ಯಗಳೆಲ್ಲದರ ಸೇನಾಪಡೆಗಳನ್ನು ಸಮಗ್ರವಾಗಿ ಹೆಸರಿಸಲು ಕೂಡಾ ಅದರಲ್ಲೂ ನಿರ್ದಿಷ್ಟವಾಗಿ ಭಾರತೀಯ ಸೈನಿಕ ದಂಗೆ/ಸ್ವಾತಂತ್ರ್ಯ ಸಂಗ್ರಾಮದ ನಂತರ ಬಳಸಲಾಗುತ್ತಿತ್ತು. ಭಾರತೀಯ ಸೇನೆ ಎಂಬುದನ್ನು ಭಾರತದ ಸೇನೆ ಯೆಂದು ಗೊಂದಲ ಮಾಡಿಕೊಳ್ಳಬಾರದು. ೧೯೦೩ರಿಂದ ೧೯೪೭ರ ನಡುವೆ ಈ ಸೇನಾಪಡೆಯು ಎರಡು ಪ್ರತ್ಯೇಕ ಪಡೆಗಳನ್ನು ಒಳಗೊಂಡಿತ್ತು: ಸ್ವತಃ ಭಾರತೀಯ ಸೇನೆ (ಭಾರತ ಮೂಲದವರನ್ನೇ ಹೊಂದಿದ್ದ ಭಾರತೀಯ ತುಕಡಿಗಳನ್ನು ಒಳಗೊಂಡಿದ್ದು), ಜೊತೆಗೆ (ಯುನೈಟೆಡ್ ಕಿಂಗ್ಡಮ್ ಮೂಲದವರನ್ನು ಒಳಗೊಂಡಿದ್ದ) ಭಾರತದಲ್ಲಿ ಕರ್ತವ್ಯದ ಮೇಲೆ ಪ್ರವಾಸ ಬಂದಿದ್ದ ಬ್ರಿಟಿಷ್ ಸೇನೆಯ ಘಟಕಗಳನ್ನೊಳಗೊಂಡಿದ್ದ ಭಾರತದಲ್ಲಿನ ಬ್ರಿಟಿಷ್ ಸೇನೆ .