ಬ್ರಿಸ್ಟಲ್
From Wikipedia, the free encyclopedia
Lua error in package.lua at line 80: module 'Module:Pagetype/setindex' not found.
Bristol | |
---|---|
Unitary, City, Ceremonial county | |
Sovereign state | United Kingdom |
Constituent country | England |
Region | South West England |
Ceremonial county | Bristol (County corporate) |
Admin HQ | Bristol |
Royal Charter | 1155 |
County status | 1373 |
Government | |
• Type | Unitary authority, City |
• Governing body | Bristol City Council |
• Leadership | Leader & Cabinet |
• Executive | Lib Dem |
• MPs | Chris Skidmore (C) Kerry McCarthy (L)
|
Area | |
• Unitary, City, Ceremonial county | ೪೦ sq mi (೧೧೦ km2) |
Elevation | ೩೬ ft (೧೧ m) |
Population (#REDIRECT Template:United Kingdom statistics year) | |
• Unitary, City, Ceremonial county |
|
• Density | ೯೪೨೦/sq mi (೩,೬೩೯/km2) |
• Urban | ೫,೮೭,೪೦೦ (೨,೦೦೬ ONS estimate) |
• Metro | ೧೦,೦೬,೬೦೦ (LUZ೨,೦೦೯) |
• Ethnicity[2] | ೮೮.೮% White (೮೩.೫% White British) ೪.೨% S. Asian ೧.೯% Black ೨.೨% Mixed Race ೧.೯% E. Asian or Other |
Time zone | UTC0 (GMT) |
Postcode | BS |
Area code | 0117 |
ISO 3166-2 | GB-BST |
ONS code | 00HB |
OS grid reference | ST595726 |
NUTS 3 | UKK11 |
Website | bristol.gov.uk/ |
ಬ್ರಿಸ್ಟಲ್ /[unsupported input]ˈbrɪstəl/ ನೈಋತ್ಯ ಇಂಗ್ಲೆಂಡ್ನಲ್ಲಿರುವ ನಗರ, ಏಕೀಕೃತ ಆಡಳಿತ ಪ್ರದೇಶ ಹಾಗೂ ವಿಧ್ಯುಕ್ತ ಕೌಂಟಿಯಾಗಿದೆ. 2009ರಲ್ಲಿ, ಏಕೀಕೃತ ಆಡಳಿತಕ್ಕೆ ಅಂದಾಜು ಜನಸಂಖ್ಯೆ 433,100ರಷ್ಟಿತ್ತು [3] ಹಾಗೂ ಸುತ್ತಲಿರುವ ಬೃಹತ್ ನಗರ ವಲಯದಲ್ಲಿ 1,006,600 ನಿವಾಸಿಗಳು ಎಂದು ಅಂದಾಜು ಮಾಡಲಾಗಿದೆ. ಬ್ರಿಸ್ಟಲ್ ಇಂಗ್ಲೆಂಡ್ನ ಆರನೆಯ ಹಾಗೂ ಯುನೈಟೆಡ್ ಕಿಂಗ್ಡಮ್ನ ಎಂಟನೆಯ ಅತಿ ಜನನಿಬಿಡ ನಗರವಾಗಿದೆ.[4] ಇಂಗ್ಲಿಷ್ ಪ್ರಮುಖ ನಗರಗಳು ಎನ್ನುವ ಸಮುದಾಯದಲ್ಲಿ ಇದೂ ಸಹ ಒಂದು ಹಾಗೂ ನೈಋತ್ಯ ಇಂಗ್ಲೆಂಡ್ನ ಅತಿ ಜನನಿಬಿಡ ನಗರವಾಗಿದೆ.
1155ರಲ್ಲಿ ಬ್ರಿಸ್ಟಲ್ ರಾಜಮನೆತನದ ಸನ್ನದು ಸ್ವೀಕರಿಸಿತು ಹಾಗೂ 1373ರಲ್ಲಿ ಕೌಂಟಿ ಸ್ಥಾನಮಾನವನ್ನು ನೀಡಲಾಯಿತು. ಹದಿಮೂರನೆಯ ಶತಮಾನದಿಂದ, ಅರ್ಧ ಸಹಸ್ರಮಾನದ ಕಾಲ, ತೆರಿಗೆ ಸ್ವೀಕಾರದ ವಿಚಾರದಲ್ಲಿ [5] ಲಂಡನ್ ನಂತರ ಬ್ರಿಸ್ಟಲ್, ಯಾರ್ಕ್ ಮತ್ತು ನಾರ್ವಿಚ್ಒಂದಿಗೆ ಅತ್ಯುತ್ತಮ ಮೂರು ಇಂಗ್ಲಿಷ್ ನಗರಗಳಲ್ಲಿ ಒಂದಾಗಿತ್ತು. ನಂತರ, 18ನೆಯ ಶತಮಾನದ ಅಪರಾರ್ಧದಲ್ಲಿ ಕೈಗಾರಿಕಾ ಕ್ರಾಂತಿ ನಡೆದಾಗ ಲಿವರ್ಪೂಲ್, ಬರ್ಮಿಂಗ್ಹ್ಯಾಮ್ ಮತ್ತು ಮ್ಯಾಂಚೆಸ್ಟರ್ ನಗರಗಳು ತ್ವರಿತ ಅಭಿವೃದ್ಧಿ ಹೊಂದಿದವು. ಬ್ರಿಸ್ಟಲ್ ಗಡಿಯಲ್ಲಿ ಸಾಮರ್ಸೆಟ್ ಮತ್ತು ಗ್ಲೌಸೆಸ್ಟರ್ಷೈರ್ ಕೌಂಟಿಗಳಿವೆ. ಜೊತೆಗೆ ಅಗ್ನೇಯ ಹಾಗೂ ಉತ್ತರ ದಿಕ್ಕುಗಳಲ್ಲಿ ಕ್ರಮವಾಗಿ ಬಾತ್ ಮತ್ತು ಗ್ಲೌಸೆಸ್ಟರ್ ಎಂಬ ಐತಿಹಾಸಿಕ ನಗರಗಳ ಸಮೀಪವಿದೆ. ನಗರವನ್ನು ಏವನ್ ನದಿಯ ತೀರದ ಸುತ್ತಲೂ ನಿರ್ಮಿಸಲಾಗಿದೆ. ಸೆವೆರ್ನ್ ನದೀಮುಖದಲ್ಲಿ ಬಹಳ ಕಿರಿದಾದ ಕಡಲತೀರವಿದೆ. ಇದು ಬ್ರಿಸ್ಟಲ್ ಕಡಲ್ಗಾಲುವೆಯೊಳಗೆ ಹರಿಯುತ್ತದೆ.
ಬ್ರಿಸ್ಟಲ್ ಈ ವಲಯದಲ್ಲಿ ಅತಿದೊಡ್ಡ ಸಾಂಸ್ಕೃತಿಕ, ಉದ್ಯೋಗ ಮತ್ತು ಶೈಕ್ಷಣಿಕ ಕೇಂದ್ರವಾಗಿದೆ. ನಗರದ ಆರಂಭಿಕ ದಿನಗಳಿಂದಲೂ ಇದರ ಏಳ್ಗೆಯು ಸಮುದ್ರದೊಂದಿಗೆ ಸಂಬಂಧ ಹೊಂದಿದೆ. ವಾಣಿಜ್ಯ ಉದ್ದೇಶದ ಬ್ರಿಸ್ಟಲ್ ಬಂದರು ಮೂಲತಃ ನಗರ ಕೇಂದ್ರವಾಗಿತ್ತು. ನಂತರ ಇದನ್ನು ಏವನ್ಮೌತ್ನಲ್ಲಿರುವ ಸೆವರ್ನ್ ನದೀಮುಖಕ್ಕೆ ವರ್ಗಾಯಿಸಲಾಯಿತು. ರಾಯಲ್ ಪೋರ್ಟ್ಬ್ಯುರಿ ಡಾಕ್ ನಗರದ ಗಡಿಯ ಪಶ್ಚಿಮ ಬದಿಯಲ್ಲಿದೆ. ಇನ್ನಷ್ಟು ಇತ್ತೀಚೆಗಿನ ವರ್ಷಗಳಲ್ಲಿ ಅರ್ಥಿಕತೆಯು ಕ್ರಿಯಾತ್ಮಕ ಮಾಧ್ಯಮ, ವಿದ್ಯುನ್ಮಾನ ಮತ್ತು ಅಂತರಿಕ್ಷಯಾನ ಉದ್ದಿಮೆಗಳನ್ನು ಅವಲಂಬಿಸಿದೆ. ನಗರ ಕೇಂದ್ರದ ಹಡಗುಕಟ್ಟೆಗಳನ್ನು ಪರಂಪರೆ ಮತ್ತು ಸಂಸ್ಕೃತಿಯ ಕೇಂದ್ರಗಳನ್ನಾಗಿ ಪುನಶ್ಚೇತನಗೊಳಿಸಲಾಗಿದೆ.[6] ಜಗತ್ತಿನಲ್ಲಿ ಬ್ರಿಸ್ಟಲ್ ಎಂಬ ಹೆಸರಿನ ಇನ್ನೂ 34 ಇತರೆ ಜನನಿಬಿಡ ಸ್ಥಳಗಳಿವೆ. ಇವುಗಳಲ್ಲಿ ಬಹಳಷ್ಟು ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿದೆ, ಜೊತೆಗೆ, ಪೆರು, ಕೆನಡಾ, ಜಮೈಕಾ ಮತ್ತು ಕೋಸ್ಟ ರಿಕಾ ದೇಶಗಳಲ್ಲಿವೆ. ಇವೆಲ್ಲವೂ ಸಹ ಬಹುಶಃ ಮೂಲ ನಗರದ ಹೆಸರನ್ನು ನೆನಪಿಸುತ್ತವೆ.[7][8]