ಭಾರತದಲ್ಲಿ ಆತ್ಮಹತ್ಯೆ
From Wikipedia, the free encyclopedia
೨೦೧೬ ರಲ್ಲಿ ೨,೩೦,೩೧೪ ಕ್ಕೆ ಏರಿತು. ೧೫-೨೯ ವರ್ಷ ಮತ್ತು ೧೫-೩೯ ವರ್ಷ ವಯಸ್ಸಿನವರಲ್ಲಿ ಆತ್ಮಹತ್ಯೆಯು ಸಾವಿಗೆ ಸಾಮಾನ್ಯ ಕಾರಣವಾಗಿದೆ.[2]
ಪ್ರತಿವರ್ಷ ವಿಶ್ವಾದ್ಯಂತ ಸುಮಾರು ೮,೦೦,೦೦೦ ಜನರು ಆತ್ಮಹತ್ಯೆಯಿಂದ ಸಾಯುತ್ತಾರೆ.[3] ಇವರಲ್ಲಿ ೧,೩೫,೦೦೦ (೧೭%) ಜನರು ಭಾರತದ ನಿವಾಸಿಗಳು. ಭಾರತವು ವಿಶ್ವ ಜನಸಂಖ್ಯೆಯ ೧೭.೫% ರಷ್ಟಿರುವ ರಾಷ್ಟ್ರ. ೧೯೮೭ ಮತ್ತು ೨೦೦೭ ರ ನಡುವೆ, ಆತ್ಮಹತ್ಯೆ ಪ್ರಮಾಣ ೧,೦೦,೦೦೦ ಜನರಿಗೆ ೭.೯ ರಿಂದ ೧೦.೩ ಕ್ಕೆ ಏರಿತು.[4] ಭಾರತದ ದಕ್ಷಿಣ ಮತ್ತು ಪೂರ್ವ ರಾಜ್ಯಗಳಲ್ಲಿ ಆತ್ಮಹತ್ಯೆಯ ಪ್ರಮಾಣ ಹೆಚ್ಚಾಗಿದೆ.[5] ೨೦೧೨ ರಲ್ಲಿ ತಮಿಳುನಾಡು (ಎಲ್ಲಾ ಆತ್ಮಹತ್ಯೆಗಳಲ್ಲಿ ೧೨.೫%), ಮಹಾರಾಷ್ಟ್ರ (೧೧.೯%) ಮತ್ತು ಪಶ್ಚಿಮ ಬಂಗಾಳ (೧೧.೦%) ಅಧಿಕ ಆತ್ಮಹತ್ಯೆಗಳ ಪ್ರಮಾಣವನ್ನು ಹೊಂದಿವೆ. ಪುರುಷ ಮತ್ತು ಸ್ತ್ರೀಯರಲ್ಲಿ ಆತ್ಮಹತ್ಯೆಯ ಅನುಪಾತವು ಸುಮಾರು ೨:೧ ಆಗಿದೆ.
ಭಾರತದಲ್ಲಿ ಆತ್ಮಹತ್ಯೆಗಳ ಸಂಖ್ಯೆಯ ಅಂದಾಜು ವ್ಯತ್ಯಾಸವಾಗುತ್ತಿರುತ್ತದೆ. ಉದಾಹರಣೆಗೆ, ದಿ ಲ್ಯಾನ್ಸೆಟ್ನಲ್ಲಿ ಪ್ರಕಟವಾದ ಒಂದು ಅಧ್ಯಯನವು ೨೦೧೦ ರಲ್ಲಿ ಭಾರತದಲ್ಲಿ ೧,೮೭,೦೦೦ ಆತ್ಮಹತ್ಯೆಗಳು ಎಂದುಅಂದಾಜಿಸಿದೆ.[6]. ಆದರೆ ಭಾರತ ಸರ್ಕಾರದ ಅಧಿಕೃತ ಮಾಹಿತಿಯು ಅದೇ ವರ್ಷದಲ್ಲಿ ೧,೩೪,೬೦೦ ಆತ್ಮಹತ್ಯೆಗಳು ಎಂದು ತಿಳಿಸಿದೆ.
ಡಬ್ಲ್ಯುಎಚ್ಒ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ವಯಸ್ಸಿನ ಪ್ರಮಾಣಿತ ಆತ್ಮಹತ್ಯೆಯ ಪ್ರಮಾಣ ಮಹಿಳೆಯರಿಗೆ ೧,೦೦,೦೦೦ ಕ್ಕೆ ೧೬.೪ (ವಿಶ್ವದಲ್ಲಿ ೬ ನೇ ಸ್ಥಾನ) ಮತ್ತು ಪುರುಷರಿಗೆ ೨೫.೮ (೨೨ ನೇ ಸ್ಥಾನದಲ್ಲಿದೆ).[7]