ಮಥಿಯಾಸ್ ಜೇಕಬ್ ಶ್ಲೈಡನ್ (1804-81) ಒಬ್ಬ ಜರ್ಮನ್ ಸಸ್ಯವಿಜ್ಞಾನಿ.[1] ಪ್ರಾಧ್ಯಾಪಕನಾಗಿ ಜೀನ ವಿಶ್ವದ್ಯಾಲಯದಲ್ಲಿಯೂ (1839-63) ಡೋರ್‌ಪಾಟ ವಿಶ್ವವಿದ್ಯಾಲಯದಲ್ಲಿಯೂ (1863-64) ಕೆಲಸ ಮಾಡಿದ. ಥಿಯೋಡರ್ ಶ್ವಾನ್ (1810-82) ಜೊತೆ ಸೇರಿ ಜೀವಕೋಶ ಸಿದ್ಧಾಂತದ ಅಸ್ಥಿಭಾರ ಹಾಕಿದ.

Thumb
ಮಥಿಯಾಸ್ ಶ್ಲೈಡನ್

ಜೀವನ

ಈತ ಕೋಲೊಜ಼ಸ್ಟರ್ ಟ್ರಾನ್‌ಸಿಲ್ವೇನಿಯದಲ್ಲಿ ಜನಿಸಿದ. ಹೈಡೆಲ್‌ಬರ್ಗ್‌ನಲ್ಲಿ ವಿದ್ಯಾರ್ಜನೆ ಮಾಡಿ ಹ್ಯಾಂಬರ್ಗ್‌ನಲ್ಲಿ ನ್ಯಾಯಶಾಸ್ತ್ರ ಅಭ್ಯಾಸದಲ್ಲಿ ತೊಡಗಿದ. ಹಾಗೆಯೇ ಸಸ್ಯವಿಜ್ಞಾನದಲ್ಲಿ ದಿನಪೂರ್ತಿ ಅನುಸರಣೆಕ್ರಿಯೆಯನ್ನು ಹವ್ಯಾಸವಾಗಿ ಮಾಡಿಕೊಂಡ. ಸಸ್ಯಗಳ ರಚನೆಗಳನ್ನು ಸೂಕ್ಷ್ಮದರ್ಶಕದ ಮೂಲಕ ಪರೀಕ್ಷಿಸಿ ತಿಳಿಯುವ ಪರಿಣತಿಗಳಿಸಿದ. ಸಸ್ಯಗಳ ಮುಖ್ಯ ಭಾಗಗಳನ್ನು ಗುರುತಿಸುತ್ತ ಅವೆಲ್ಲವೂ ಜೀವಕೋಶಗಳಿಂದ ಮಾಡಲ್ಪಟ್ಟಿವೆಯೆಂದೂ ಅವು ವಿಭಜನೆಯಾಗುವುದಕ್ಕೆ ಬೀಜಕಣಗಳು ಕಾರಣವೆಂದೂ ಪ್ರಕಟಿಸಿದ. ಈ ಸೂತ್ರವನ್ನು ಪ್ರಾಣಿಗಳಿಗೆ ಹೋಲಿಸಿ, ಅವುಗಳಲ್ಲಿಯೂ ಜೀವಕೋಶಗಳಿವೆ ಮತ್ತು ಅವು ಬೀಜಕಣಗಳಿಂದ ಬೆಳೆಯುತ್ತವೆ ಎಂದು ಸಾಧಿಸಿದ.

ಜೀವಕೋಶಗಳ ಅಸ್ತಿತ್ವವನ್ನು ಬ್ರಿಟಿಷ್ ಭೌತವಿಜ್ಞಾನಿ ರಾಬರ್ಟ್ ಹೂಕ್ (1635-1703) 1665ರಲ್ಲೇ ಸ್ಥಿರೀಕರಿಸಿದ್ದ. ಈ ತತ್ತ್ವವನ್ನು ಈತ ಗ್ರಹಿಸಿ ಇದರ ಜೊತೆಗೆ ಬೀಜಕಣಗಳು ಕೋಶವಿಭಜನೆಯಲ್ಲಿ ವಹಿಸುವ ಪಾತ್ರವನ್ನು ಶೋಧಿಸಿದ. ಅಲ್ಲದೇ ಸಸ್ಯಕೋಶಗಳು ಪರಿಣಾಮಕಾರಿ ಚಲನೆ ಪ್ರದರ್ಶಿಸುವುವೆಂದೂ ಕಂಡುಕೊಂಡ. ಈತ ಚಾರ್ಲ್ಸ್ ಡಾರ್ವಿನ್ (1809-82) ಪ್ರತಿಪಾದಿಸಿದ ಜೀವಿವಿಕಾಸ ಸೂತ್ರವನ್ನು ಒಪ್ಪಿಕೊಂಡ ಮೊದಲ ಜರ್ಮನ್ ಜೀವವಿಜ್ಞಾನಿ.[2]

ಉಲ್ಲೇಖಗಳು

ಹೊರಗಿನ ಕೊಂಡಿಗಳು

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.