From Wikipedia, the free encyclopedia
ಮಿರಿಯಾಪೊಡ ಆರ್ತ್ರಾಪೊಡ ವಿಭಾಗಕ್ಕೆ ಸೇರಿದ ಸಂಧಿಪದಿಗಳ ಒಂದು ವರ್ಗ. ಶತಪದಿ, ಜರಿ, ಅಥವಾ ಲಕ್ಷ್ಮಿಚೇಳು (ಸೆಂಟಿಪೀಡ್ಸ್) ಹಾಗೂ ಸಹಸ್ರಪದಿ ಅಥವಾ ಹೆಜ್ಜರಿ (ಮಿಲಿಪೀಡ್ಸ್) ಎಂಬ ಎರಡು ಮುಖ್ಯ ಬಗೆಯ ಪ್ರಾಣಿಗಳನ್ನು ಒಳಗೊಂಡಿದೆ. ಮೊದಲನೆಯ ಬಗೆಯವು ಕೈಲೊಪೊಡ ಎಂಬ ಉಪವರ್ಗಕ್ಕೂ ಎರಡನೆಯ ಬಗೆಯವು ಡಿಪ್ಲೊಪೊಡ ವರ್ಗಕ್ಕೂ ಸೇರಿವೆ.
ಬಹುಪಾದಿಗಳು Temporal range: Wenlock–Present PreꞒ
Ꞓ
O
S
D
C
P
T
J
K
Pg
N
| |
---|---|
ನಾಲ್ಕು ಅಸ್ತಿತ್ವದಲ್ಲಿರುವ ಬಹುಪಾದಿ ವರ್ಗಗಳ ಪ್ರತಿನಿಧಿಗಳು. ಮೇಲೆ ಎಡಕ್ಕಿಂದ ಪ್ರದಕ್ಷಿಣವಾಗಿ: ಕೈಲೊಪೋಡಾ, ಡಿಪ್ಲೊಪೋಡಾ, ಸಿಂಫ಼ೈಲಾ, ಮತ್ತು ಪೌರೊಪೋಡಾ. | |
Scientific classification | |
ಕ್ಷೇತ್ರ: | ಯೂಕ್ಯಾರ್ಯೋಟಾ |
ಸಾಮ್ರಾಜ್ಯ: | ಅನಿಮೇಲಿಯ |
ವಿಭಾಗ: | ಆರ್ಥ್ರೊಪೋಡಾ |
ಏಕಮೂಲ ವರ್ಗ: | ಮ್ಯಾಂಡಿಬ್ಯುಲೇಟಾ |
ಉಪವಿಭಾಗ: | ಮಿರಿಯಾಪೊಡ Latreille, 1802 |
ವರ್ಗಗಳು[1] | |
|
ಮಿರಿಯಾಪೊಡ ಗುಂಪಿನ ಪ್ರಾಣಿಗಳ ದೇಹ ಉದ್ದವಾಗಿದ್ದು ಸದೃಶರಚನೆಯ ಅನೇಕ ಖಂಡಗಳಿಂದ ರಚಿತವಾಗಿದೆ. ಖಂಡಗಳ ಸಂಖ್ಯೆ ನಿರ್ದಿಷ್ಟವೂ ಅಲ್ಲ. ನಿಯಮಿತವೂ ಅಲ್ಲ. ದೇಹವನ್ನು ತಲೆ ಮತ್ತು ಮುಂಡಗಳೆಂದು ವಿಭಾಗಿಸಬಹುದು. ಮುಂಡದಲ್ಲಿ ಎದೆ ಮತ್ತು ಉದರಗಳೆಂಬ ವಿಭಾಗಗಳಿಲ್ಲ. ತಲೆಯ ಭಾಗದಲ್ಲಿ ಒಂದು ಜೊತೆ ಕಣ್ಣುಗಳು, ಒಂದು ಜೊತೆ ಸ್ಪರ್ಶಾಂಗಗಳು ಹಾಗೂ ದವಡೆಗಳುಂಟು. ಉಸಿರಾಡಲು ನೆರವಾಗುವ ಶ್ವಾಸನಳಿಕೆಗಳೂ ತ್ಯಾಜ್ಯ ವಸ್ತುಗಳನ್ನು ದೇಹದಿಂದ ಹೊರಹಾಕಲು ಮ್ಯಾಲ್ಫೀಘಿಯನ್ ನಳಿಕೆಗಳೂ ಇವೆ. ಜೀವನಚರಿತ್ರೆಯಲ್ಲಿ ನಿರ್ದಿಷ್ಟ ರೂಪಪರಿವರ್ತನೆ ಹಂತ ಕಂಡುಬರುವುದಿಲ್ಲ.
ಇವು ಉಷ್ಣ ಹಾಗೂ ಸಮಶೀತೋಷ್ಣ ವಲಯಗಳಲ್ಲಿ ತೇವಭರಿತ ಸ್ಥಳಗಳಲ್ಲಿ ವಾಸಿಸುತ್ತವೆ.
ಶತಪದಿಗಳಲ್ಲಿ ಸುಮಾರು 3,000 ಪ್ರಭೇದಗಳಿವೆ. ಇವುಗಳ ಪೈಕಿ ಸ್ಕೋಲೊಪೆಂಡ್ರ ಎಂಬುದು ಸರ್ವೆಸಾಮಾನ್ಯವಾದುದು. ಇದರ ದೇಹ ಚಪ್ಪಟೆಯಾಗಿದೆ.
ಕ್ಯಾಲ್ಸಿಯಮ್ ಲವಣಗಳ ಸಂಗ್ರಹವಿಲ್ಲದ ಕಾರಣ ಮೈಮೇಲಿನ ಕೈಟಿನ್ ಪದರ ಗಡುಸಾಗಿರದೆ ಮೃದುವಾಗಿ ಸ್ಥಿತಿಸ್ಥಾಪಕ ಗುಣಗಳಿಂದ ಕೂಡಿದ್ದು ದೇಹ ಬಾಗಲು ಸಹಾಯಕವಾಗಿದೆ. ಮಾಂಸಾಹಾರಿ, ನಿಶಾಚರಿ ವಿಷಜಂತುಗಳಾದ ಇವು ಎರೆಹುಳು, ಜಿರಲೆ ಇತ್ಯಾದಿ ಕೀಟಗಳನ್ನು ತಿಂದು ಜೀವಿಸುತ್ತವೆ.[2][3][4]ಅಮೆರಿಕದಲ್ಲಿ ಕಾಣಬರುವ 30 ಸೆಂಮೀ ಉದ್ದ ಬೆಳೆಯಬಲ್ಲ ದೈತ್ಯ ಶತಪದಿ ಸ್ಕೋಲೊಪೆಂಡ್ರ ಜೈಗಾಂಟಿಯಾ ಎಂಬುದು ಹಲ್ಲಿ, ಇಲಿ ಇತ್ಯಾದಿ ದೊಡ್ಡ ಪ್ರಾಣಿಗಳನ್ನು ಸುಲಭವಾಗಿ ಹಿಡಿದು ತಿನ್ನುತ್ತದೆ.[5] ಶತಪದಿಗಳ ತಲೆಯ ಮೇಲೆ ಅಗಲವಾದ ಫಲಕವುಂಟು. ಪ್ರತಿಯೊಂದು ಖಂಡದಲ್ಲೂ ಒಂದು ಜೊತೆ ಕಾಲುಗಳಿದ್ದು, ಒಟ್ಟು ಕಾಲುಗಳ ಸಂಖ್ಯೆ 15-20 ಜೊತೆಗಳಿರಬಹುದು.[6] ಮೊದಲನೆಯ ಜೋಡಿಕಾಲು ವಿಷದ ನಖಗಳಾಗಿ, ರಕ್ಷಣೆಗೂ ಭಕ್ಷಣೆಗೂ ಸಹಾಯಕವಾಗಿವೆ.[7] ಜನನೇಂದ್ರಿಯದ್ವಾರ ದೇಹದ ಕೊನೆಯ ಭಾಗದಲ್ಲಿ ಸ್ಥಿತವಾಗಿದೆ. ಕೆಲ ತರದ ಶತಪದಿಗಳಿಗೆ ಸ್ಫುರ ಸಂದೀಪ್ತ ಸಾಮರ್ಥ್ಯವುಂಟು. ಶತಪದಿಗಳು ಭಿನ್ನಲಿಂಗಿಗಳು; ಮೊಟ್ಟೆಗಳನ್ನು ನೆಲದ ಬಿಲಗಳಲ್ಲಿಡುತ್ತವೆ.
ಸಹಸ್ರಪದಿಗಳಲ್ಲಿ ಸುಮಾರು 8,000 ಪ್ರಭೇದಗಳಿವೆ. ಇವುಗಳ ಪೈಕಿ ಸುಮಾರು 300 ಪ್ರಭೇದಗಳನ್ನು ಭಾರತದಲ್ಲಿ ಕಾಣಬಹುದು. ಸತ್ತ ಎಲೆ ಇತ್ಯಾದಿ ಕೊಳೆಯುತ್ತಿರುವ ಜೀವವಸ್ತುಗಳನ್ನು ತಿಂದು ಇವುಗಳಲ್ಲಿರುವ ಪೋಷಣಾಂಶಗಳನ್ನು ಮಣ್ಣಿಗೆ ಹಿಂದಿರುಗಿಸುವ ಕಾರ್ಯದಲ್ಲಿ ಸಹಾಯಕವಾಗಿದ್ದು ಉಪಯುಕ್ತವೆನಿಸಿಕೊಂಡಿದೆ.[8] ಕೆಲವೊಮ್ಮೆ ಆಹಾರದ ಅಭಾವ ಇದ್ದಾಗ ಗಿಡಗಳನ್ನು ತಿಂದು ಹಾನಿಕಾರಕವಾಗುತ್ತವೆ. ಸಹಸ್ರಪದಿಗಳ ದೇಹ ಉರುಟಾಗಿ, ಉದ್ದವಾದ ಕೊಳವೆಯಂತಿದೆ. ದೇಹದ ಪ್ರತಿಯೊಂದು ಖಂಡ ಎರಡು ಖಂಡಗಳ ಸಮ್ಮಿಲನದಿಂದ ರೂಪಿತವಾಗಿದ್ದಂತೆ ತೋರುತ್ತದೆ. ಇದರಿಂದಾಗಿ ಪ್ರತಿಯೊಂದು ಖಂಡದಲ್ಲೂ ಎರಡು ಜೊತೆ ಕಾಲು, ಎರಡು ಜೊತೆ ಸ್ಟಿಗ್ಮೆಟ (ಶ್ವಾಸನಾಳರಂಧ್ರ) ಇತ್ಯಾದಿ ಇವೆ.[9] ಹೆಸರಿಗೆ ಸಹಸ್ರಪದಿಗಳಾದರೂ ಕಾಲುಗಳ ಸಂಖ್ಯೆ 200 ಅಥವಾ 250ಕ್ಕಿಂತ ಹೆಚ್ಚಾಗಿರದು. ಬಹುಪಾಲು ಸಹಸ್ರಪದಿಗಳು ಅಪಾಯ ಸನ್ನಿಹಿತವಾದಾಗ ತಮ್ಮ ದೇಹವನ್ನು ಸುರುಳಿಯಾಗಿ ಚೆಂಡಿನಂತೆ ಸುತ್ತಿಕೊಂಡು ಬೀಳುವ ಗುಣವನ್ನು ತೋರುತ್ತದೆ.[10] ದೇಹದ ಇಕ್ಕೆಡೆಗಳಲ್ಲಿ ಸಾಲಾಗಿ ಕಂಡುಬರುವ ಸ್ಟಿಂಕ್ ಗ್ರಂಥಿಗಳಿಂದ ಹೊರಸೂಸುವ ದ್ರವ ಪದಾರ್ಥ ಚಿಕ್ಕಪುಟ್ಟ ಪ್ರಾಣಿಗಳಿಗೆ ವಿಷಕಾರಿಯಾಗಿ ಕೆಲಸ ಮಾಡುವುದು. ಭಿನ್ನಲಿಂಗಿಗಳಾದ ಈ ಪ್ರಾಣಿಗಳಲ್ಲಿ ಜನನೇಂದ್ರಿಯ ದ್ವಾರ ದೇಹದ ಕೊನೆಯ ಭಾಗದಲ್ಲಿದೆ. ದೇಹದ ಮುಂಭಾಗದಲ್ಲಿದೆ. ಇವುಗಳ ಆಯಸ್ಸು ಸಾಧಾರಣವಾಗಿ 1 ರಿಂದ 2 ವರ್ಷಗಳಾದರೂ ಕೆಲವು ಬಗೆಗಳು 7 ವರ್ಷಕಾಲ ಬದುಕಿರುವ ನಿದರ್ಶನಗಳಿವೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.