ಮಿಸಳ್ ಪಾವ್
From Wikipedia, the free encyclopedia
ಮಿಸಳ್ ಪಾವ್ ಮಹಾರಾಷ್ಟ್ರದ ಒಂದು ಜನಪ್ರಿಯ ಖಾದ್ಯ.[1] ಇದು ಮಿಸಳ್ (ಸಾಮಾನ್ಯವಾಗಿ ಮೊಳಕೆ ಎಬ್ಬಿಸಿದ ಮಡಿಕೆ ಕಾಳಿನಿಂದ ತಯಾರಿಸಲಾದ ಖಾರದ ಕರಿ) ಮತ್ತು ಪಾವ್ ಅನ್ನು (ಒಂದು ಬಗೆಯ ಭಾರತೀಯ ಬ್ರೆಡ್) ಹೊಂದಿರುತ್ತದೆ.[2][3] ಅಂತಿಮ ಭಕ್ಷ್ಯದ ಮೇಲೆ ಆಲೂಗಡ್ಡೆ-ಚಿವ್ಡಾ ಮಿಶ್ರಣ, ಫ಼ರ್ಸಾಣ್ ಅಥವಾ ಸೇವ್, ಈರುಳ್ಳಿ, ನಿಂಬೆ ಮತ್ತು ಕೊತ್ತಂಬರಿಯನ್ನು ಉದುರಿಸಲಾಗುತ್ತದೆ.[4] ಇದನ್ನು ಸಾಮಾನ್ಯವಾಗಿ ಬ್ರೆಡ್ ಅಥವಾ ರೋಲ್ಸ್,[5] ಜೊತೆಗೆ ಬೆಣ್ಣೆ ಹಾಗೂ ಮಜ್ಜಿಗೆ ಅಥವಾ ಮೊಸರು ಹಾಗೂ ಹಪ್ಪಳವನ್ನು ಹಾಕಿ ಬಡಿಸಲಾಗುತ್ತದೆ. ಇದನ್ನು ಬೆಳಿಗ್ಗೆ ತಿಂಡಿಯಾಗಿ, ಲಘು ಆಹಾರವಾಗಿ ಮತ್ತು ಪೂರ್ಣ ಊಟವಾಗಿಯೂ ಬಡಿಸಲಾಗುತ್ತದೆ.[5]
Quick Facts ಮೂಲ, ಪರ್ಯಾಯ ಹೆಸರು(ಗಳು) ...
ಮೂಲ | |
---|---|
ಪರ್ಯಾಯ ಹೆಸರು(ಗಳು) | ಮಿಸಳ್ |
ಮೂಲ ಸ್ಥಳ | ಭಾರತ |
ಪ್ರಾಂತ್ಯ ಅಥವಾ ರಾಜ್ಯ | ಮಹಾರಾಷ್ಟ್ರ, ಗೋವಾ |
ವಿವರಗಳು | |
ನಮೂನೆ | ಕರಿ ಮತ್ತು ಬ್ರೆಡ್ |
ಬಡಿಸುವಾಗ ಬೇಕಾದ ಉಷ್ಣತೆ | ಮುಖ್ಯ ಭಕ್ಷ್ಯ, ಬೆಳಿಗ್ಗೆ ತಿಂಡಿ, ಮಧ್ಯಾಹ್ನದ ಊಟ, ರಾತ್ರಿ ಊಟ |
ಮುಖ್ಯ ಘಟಕಾಂಶ(ಗಳು) | ಮೊಳಕೆ ಕಾಳುಗಳು, ಬಟಾಣಿ, ಕಡಲೆ ಮತ್ತು ಖಾರದ ಪುಡಿಯ ರಸ |
ಪ್ರಭೇದಗಳು | ಮಿಸಳ್ ವಡಾ |
ಪೋಷಕಾಂಶಗಳು | 550 ಕ್ಯಾಲೊರಿ |
Close