From Wikipedia, the free encyclopedia
ಮೈಸ್ಪೇಸ್ ಒಂದು ಸಾಮಾಜಿಕ ಅಂತರಜಾಲದ ಜಾಲ ತಾಣ. ಅದರ ಕೇಂದ್ರ ಕಾರ್ಯಾಗಾರ ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್ [2] ನಲ್ಲಿದೆ, ಅಲ್ಲಿ ಅದು ತನ್ನ ನಿಕಟವರ್ತಿ ಮಾಲಿಕ ನ್ಯೂಸ್ ಕಾರ್ಪ್. ಡಿಜಿಟಲ್ ಮೀಡಿಯಾದ ಮಾಲಿಕ ನ್ಯೂಸ್ ಕಾರ್ಪೋರೇಷನ್ ಜೊತೆ ಕಚೇರಿಯ ಕಟ್ಟಡವನ್ನು ಹಂಚಿಕೊಳ್ಳುತ್ತದೆ. ಮೈಸ್ಪೇಸ್ ಜೂನ್ 2006 ರಲ್ಲಿ ಸಂಯುಕ್ತ ಸಂಸ್ಥಾನದ ಅತ್ಯಂತ ಜನಪ್ರಿಯ ಸಾಮಾಜಿಕ ಅಂತರಜಾಲದ ಸ್ಥಳವಾಯಿತು.[3] ಕಾಮ್ ಸ್ಕೋರ್ ಪ್ರಕಾರ, ಮೈಸ್ಪೇಸ್ ಅನ್ನು, ಮಾಸಿಕ ವಿಶಿಷ್ಟ ಸಂದರ್ಶಕರ ಆಧಾರದ ಮೇರೆಗೆ, ಏಪ್ರಿಲ್ 2008 ರಲ್ಲಿ ಅದರ ಮುಖ್ಯ ಪ್ರತಿಸ್ಪರ್ಧಿ ಫೇಸ್ ಬುಕ್ ಅಂತರಾಷ್ಟ್ರೀಯ ಮಟ್ಟದಲ್ಲಿ ಹಿಂದಿಕ್ಕಿತು.[4][5] ಜೂನ್ 2009 ರಲ್ಲಿ ತನ್ನ ಕಾರ್ಮಿಕ ವರ್ಗದವರ ಶೇಕಡಾ 30 ರಷ್ಟು ಕೆಲಸಗಾರರನ್ನು ತೆಗೆದು ಹಾಕಿದ ನಂತರ ಮೈಸ್ಪೇಸ್ 1,000 ಕೆಲಸಗಾರರನ್ನು ಹೊಂದಿದೆ;[6] ಕಂಪನಿಯು ನ್ಯೂಸ್ ಕಾರ್ಪೋರೇಷನ್ ನಿಂದ ಪ್ರತ್ಯೇಕವಾಗಿಸಿ ಲಾಭಗಳು ಅಥವಾ ಆದಾಯಗಳನ್ನು ಬಹಿರಂಗ ಪಡಿಸುವುದಿಲ್ಲ. ನೆದರ್ ಲ್ಯಾಂಡ್ಸ್ ನಲ್ಲಿ ಆಗಸ್ಟ್ 9, 2006[7] ರಂದು ಅದರ 100 ನೇ ಮಿಲಿಯನ್ ಖಾತೆಯು ರಚಿಸಲ್ಪಟ್ಟಿತು.[8]
ಮಾದರಿ | Subsidiary |
---|---|
ಅಡಿಪಾಯದ ದಿನಾಂಕ | 2003 |
ಪ್ರಧಾನ ಕಚೇರಿ | Beverly Hills, California, US |
ಸೇವೆ ಸಲ್ಲಿಸಿದ ಪ್ರದೇಶ | Worldwide |
Key people | Tom Anderson (President) Owen Van Natta (CEO) Mike Jones (COO) Jason Hirschhorn (CPO) |
ಮಾಲೀಕ | News Corporation |
ನೌಕರರು | 1000[1] |
Slogan(s) | A Place for Friends |
ಜಾಲತಾಣ | www.myspace.com |
Alexa rank | 17 |
ಸೈಟ್ನ ಪ್ರಕಾರ | Social network service |
Advertising | Google, AdSense |
ನೋಂದಣಿ | Required |
ಲಭ್ಯತೆ | 15 languages |
ಪ್ರಾರಂಭಿಸಲಾಗಿದೆ | August 2003 |
ಪ್ರಸ್ತುತ ಸ್ಥಿತಿ | Active |
2002 ರಲ್ಲಿ ಫ್ರೆಂಡ್ ಸ್ಟರ್ ಪ್ರಾರಂಭದ ನಂತರ, ಫ್ರೆಂಡ್ ಸ್ಟರ್ ನ ಖಾತೆಗಳನ್ನು ಹೊಂದಿದ್ದ ಅನೇಕ ಇಯುನಿವರ್ಸ್ ನ ಕಾರ್ಮಿಕರು ಅದರ ಸಾಮರ್ಥ್ಯವನ್ನು ತಿಳಿದರು ಹಾಗೂ ಆಗಸ್ಟ್ 2003 ರಲ್ಲಿ ಸಾಮಾಜಿಕ ಅಂತರಜಾಲದ ಜಾಲ ತಾಣದ ಹೆಚ್ಚು ಜನಪ್ರಿಯ ವೈಶಿಷ್ಟ್ಯಗಳನ್ನು ಅನುಕರಿಸಲು ನಿರ್ಧರಿಸಿದರು. 10 ದಿನದೊಳಗೆ, ಮೈಸ್ಪೇಸ್ ನ ಮೊದಲ ಆವೃತ್ತಿಯನ್ನು ಪ್ರಾರಂಭಿಸಲು ತಯಾರಾಗಿತ್ತು.[9] ಆರ್ಥಿಕ ವ್ಯವಸ್ಥೆ, ಮಾನವ ಸಂಪನ್ಮೂಲ, ತಾಂತ್ರಿಕ ದಕ್ಷತೆ, ಬ್ಯಾಂಡಿನ ಅಗಲ ಹಾಗೂ ಸರ್ವರ್ ಸಾಮರ್ಥ್ಯ ದ ಒಂದು ಸಂಪೂರ್ಣ ಮೂಲಭೂತ ಸೌಕರ್ಯ ಗಳು ಸರಿಯಾಗಿ ತಮ್ಮಲಿಯೇ ಕಾರ್ಯಾಗಾರಕ್ಕೆ ಪ್ರಾಪ್ತವಾಯಿತು, ಹಾಗಾಗಿ ಮೈಸ್ಪೇಸ್ ತಂಡವು ಸಾಂಕೇತಿಕ ಕಾರ್ಯಾರಂಭದ ವಿವಾದಾಂಶಗಳಿಂದ ವಿಕರ್ಷಿತಗೊಳ್ಳಲಿಲ್ಲ. ಆ ಯೋಜನೆಯು ಬ್ರಾಡ್ ಗ್ರೀನ್ ಸ್ಪಾನ್ (ಇಯೂನಿವರ್ಸ್ ನ ಸಂಸ್ಥಾಪಕ, ಅಧ್ಯಕ್ಷ, ಸಿ ಇ ಒ) ರವರಿಂದ ಮೇಲ್ವಿಚಾರಣೆ ಮಾಡಲ್ಪಟ್ಟಿತು, ಅವರು ಕ್ರಿಸ್ ಡಿವೊಲ್ಫ್ (ಮೈಸ್ಪೇಸ್ ನ ಪ್ರಾರಂಭಿಕ ಸಿ ಇ ಒ), ಜೋಷ್ ಬರ್ಮನ್, ಟಾಮ್ ಆಂಡರ್ ಸನ್ (ಮೈಸ್ಪೇಸ್ ನ ಪ್ರಾರಂಭಿಕ ಅಧ್ಯಕ್ಷ), ಹಾಗೂ ಕಾರ್ಯಕರ್ತರ ಒಂದು ತಂಡ ಮತ್ತು ಇಯೂನಿವರ್ಸ್ ಒದಗಿಸಿದ ಸಂಪನ್ಮೂಲಗಳನ್ನು ನಿರ್ವಹಿಸಿದರು.
ಮೈಸ್ಪೇಸ್ ನ ಮೊಟ್ಟಮೊದಲ ಉಪಯೋಗದಾರರು ಇಯೂನಿವರ್ಸ್ ನ ಕೆಲಸಗಾರರು. ಅತ್ಯಂತ ಹೆಚ್ಚು ಬಳಕೆದಾರರನ್ನು ಸಹಿ ಮಾಡಿಸಿಕೊಳ್ಳುವವರನ್ನು ನೋಡಲು ಕಂಪನಿಯು ಸ್ಫರ್ಧೆಗಳನ್ನು ಏರ್ಪಡಿಸಿತು.[10] ನಂತರ ಕಂಪನಿಯು ಮೈಸ್ಪೇಸ್ ಅನ್ನು ಸಾರ್ವಜನಿಕರಿಗೆ ಪ್ರೇರೇಪಿಸಲು ತನ್ನ ಸಂಪನ್ಮೂಲಗಳನ್ನು ಉಪಯೋಗಿಸಿತು. ಇಯೂನಿವರ್ಸ್ ಮೈಸ್ಪೇಸ್ ಗೆ [11] ಜಾಗ್ರತೆಯಾಗಿ ಜೀವತುಂಬಲು ತನ್ನ ಈ-ಮೇಲ್ ಚಂದಾದಾರರು ಹಾಗೂ 20 ಮಿಲಿಯನ್ ಬಳಕೆದಾರರ ಪ್ರಯೋಜನ ಪಡೆದುಕೊಂಡಿತು ಹಾಗೂ ಅದನ್ನು ಸಾಮಾಜಿಕ ಅಂತರಜಾಲದ ಜಾಲ ತಾಣಗಳಲ್ಲೇ ಮುಂಚೂಣಿಯಲ್ಲಿಡಲು ಪ್ರಯತ್ನಿಸಿತು. ತಾಂತ್ರಿಕ ಪ್ರವೀಣ ಟೊಯೆನ್ ಗುಯೆನ್ ಇದರ ಮುಖ್ಯ ವಾಸ್ತುಶಿಲ್ಪಿ, ಬ್ರಾಡ್ ಗ್ರೀನ್ ಸ್ಫಾನ್ ನು ತಂಡಕ್ಕೆ ಸೇರಿಕೊಳ್ಳಲು ಕೇಳಿದಾಗ, ಅವನು ಮೈಸ್ಪೇಸ್ ವೇದಿಕೆಯನ್ನು ಸ್ಥಿರಗೊಳಿಸಲು ಸಹಾಯ ಮಾಡಿದರು.[12]
ಮೈಸ್ಪೇಸ್.ಕಾಂ ನ ಡೊಮೈನ್ ನ ಆಧಿಪತ್ಯವು ಯುವರ್ಜ.ಕಾಂ, ಇಂಕ್ ನವರ ಮಾಲಿಕತ್ವದ ಒಂದು ತಾಣ.[13] ಅದು 2002 ರವರೆಗೂ ಒಂದು ಪ್ರಮುಖವಾದ ಆನ್ ಲೈನ್ ಮಾಹಿತಿ ಸಂಗ್ರಹಣಾ ಮತ್ತು ಪಾಲುದಾರ ತಾಣ ಆಗಿರಬೇಕೆಂದು ಉದ್ದೇಶಿಸಲಾಗಿತ್ತು. 2004 ರಷ್ಟರಲ್ಲಿ, ಯುವರ್ಜ.ಕಾಂ [14][15] ಜೊತೆ ಸಂಬಂಧಿಸಿದ ಒಂದು ಮುದ್ರೆಯಾಗಿ ಜಾರಿಯಲ್ಲಿದ್ದ ಮೈಸ್ಪೇಸ್.ಕಾಂ ಮತ್ತು ಮೈಸ್ಪೇಸ್, ಒಂದು ವಾಸ್ತವಿಕ ಶೇಖರಣಾ ತಾಣದಿಂದ ಸಾಮಾಜಿಕ ಅಂತರಜಾಲ ತಾಣಕ್ಕೆ ಬದಲಾವಣೆ ಮಾಡಿಕೊಂಡಿತ್ತು. ಇದು ಕ್ರಿಸ್ ಡಿವುಲ್ಫ್ ಹಾಗೂ ಒಬ್ಬ ಸ್ನೇಹಿತನ ಸ್ವಾಭಾವಿಕ ಸಂಬಂಧವಾಗಿತ್ತು, ಅವನು ಒಂದು ವೆಬ್ ಹೋಸ್ಟ್ ಮಾಡುವ ತಾಣಕ್ಕಾಗಿ [16] ಉಪಯೋಗಿಸುವ ಉದ್ದೇಶದಿಂದ ಯು ಅರ್ ಎಲ್ ಡೊಮೈನ್ ಆದ ಮೈಸ್ಪೇಸ್.ಕಾಂ ಅನ್ನು ಮೊದಲೇ ಕೊಂಡಿದ್ದನೆಂದು ಎಚ್ಚರಿಸಿದನು. ಏಕೆಂದರೆ ಒಂದು ಕಾಲದಲ್ಲಿ ತಾತ್ವಿಕ ಡಾಟಾ ಸಂಗ್ರಹಣಾ ವ್ಯವಹಾರದಲ್ಲಿ ಇಬ್ಬರೂ ಕೆಲಸ ಮಾಡಿದ್ದರು, ಅದು ಸ್ವತಃ "ಡಾಟ್ ಬಾಂಬ್" ಕಾಲದ ಒಂದು ದುರ್ಘಟನೆಯಾಗಿತ್ತು
ತಾಣದ ಪ್ರಾರಂಭದ ಕೆಲವೇ ಸಮಯದ ನಂತರ, ಮೈಸ್ಪೇಸ್ ನ ಮೂಲಭೂತ ಸೇವೆಗೆ ತಾವು ವಂತಿಗೆಯನ್ನು ವಸೂಲು ಮಾಡಲು ಪ್ರಾರಂಭಿಸುವುದಾಗಿ ತಂಡದ ಸದಸ್ಯ ಕ್ರಿಸ್ ಡಿವುಲ್ಫ್ ಸೂಚಿಸಿದನು.[17] ಅದನ್ನು ಒಂದು ವಿಶಾಲ ಹಾಗೂ ಯಶಸ್ವಿ ಸಂಸ್ಥೆಯಾಗಿ ಬೆಳೆಸಲು ಮೈಸ್ಪೇಸ್ ಅನ್ನು ಸ್ವತಂತ್ರ ಹಾಗೂ ಮುಕ್ತವಾಗಿಡುವುದು ಅತ್ಯವಶ್ಯವೆಂದು ನಂಬಿ, ಬ್ರಾಡ್ ಗ್ರೀನ್ ಸ್ಪ್ಯಾನನು ಆ ಕಲ್ಪನೆಯನ್ನು ತಳ್ಳಿಹಾಕಿದನು.[18]
ಡಿವುಲ್ಫ್ ಮತ್ತು ಬರ್ಮನ್ ಒಳಗೊಂಡಂತೆ ಮೈಸ್ಪೇಸ್ ನ ಕೆಲವು ಕಾರ್ಮಿಕರು ಮೈಸ್ಪೇಸ್ ನಲ್ಲಿರುವ ಆಸ್ತಿಯಲ್ಲಿ ತಮಗಾಗಿ ಭಾಗವನ್ನು ಖರೀದಿಸಲು ಕೊನೆಗೆ ಶಕ್ತರಾದರು ಮತ್ತು ಅದರೆ ಮಾತೃ ಸಂಸ್ಥೆ ಇಯೂನಿವರ್ಸ್ (ಈಗ ಇಂಟರ್ ಮಿಕ್ಸ್ ಮೀಡಿಯಾ ಎಂದು ಮರುನಾಮಕರಣವಾಗಿದೆ) ಅನ್ನು ರುಪರ್ಟ್ ಮುರುಡೊಚ್ ನ ನ್ಯೂಸ್ ಕಾರ್ಪೊರೇಷನ್ (ಫಾಕ್ಸ್ ಬ್ರಾಡ್ಕಾಸ್ಟಿಂಗ್ ನ ಮಾತೃಸಂಸ್ಥೆ ಮತ್ತು ಇತರೆ ಮೀಡಿಯಾ ಸಂಸ್ಥೆಗಳು) ನಿಂದ ಸಂಯುಕ್ತ ಸಂಸ್ಥಾನದ 580 ಮಿಲಿಯನ್ ಡಾಲರುಗಳಿಗೆ ಜುಲೈ 2005 ರಲ್ಲಿ ಖರೀದಿಸಲಾಯಿತು.[9][19] ಈ ಮೊತ್ತದಲ್ಲಿ, ಸುಮಾರು ಸಂಯುಕ್ತ ಸಂಸ್ಥಾನದ 327 ಮಿಲಿಯ್ ಡಾಲರುಗಳನ್ನು ಆರ್ಥಿಕ ಸಲಹೆಗಾರರ ನ್ಯಾಯವಾದ ಅಭಿಪ್ರಾಯಕ್ಕೆ ಅನುಸಾರವಾಗಿ ಮೈಸ್ಪೇಸ್ ನ ಬೆಲೆಗೆ ಸರಿದೂಗಿಸಲಾಯಿತು.[20]
ಜನವರಿ 2006 ರರಲ್ಲಿ, "ಇಗ್ಲೆಂಡಿನ ಸಂಗೀತ ದೃಷ್ಯಕ್ಕೆ ಲಗ್ಗೆ ಇಡಲು" [21] ಮೈಸ್ಪೇಸ್ ನ ಇಗ್ಲೆಂಡಿನ ಆವೃತ್ತಿಯನ್ನು ಪ್ರಾರಂಭಿಸುವ ಯೋಜನೆಯನ್ನು ಫಾಕ್ಸ್ ಘೋಷಿಸಿತು ಹಾಗೂ ಅದರಲ್ಲಿ ಯಶಸ್ವಿಯಾಯಿತು. ಅವರು ಚೀನಾದಲ್ಲಿ [22] ಒಂದು ಆವೃತ್ತಿಯನ್ನು ಸಹ ಬಿಡುಗಡೆ ಮಾಡಿದರು ಮತ್ತು ಬೇರೆ ದೇಶಗಳಲ್ಲಿ ಸಮಾನರೂಪದ ಆವೃತ್ತಿಗಳನ್ನು ಅಂದಿನಿಂದ ಪ್ರಾರಂಭ ಮಾಡಿದ್ದಾರೆ.
ಮೈಸ್ಪೇಸ್ ಸಂಸ್ಥೆಯಾಗಿ ಏರ್ಪಟ್ಟ ಇತಿಹಾಸವೂ ಅಲ್ಲದೆ ಮೈಸ್ಪೇಸ್ ನ ಸಂಸ್ಥಾಪಕನಾಗಿ ಟಾಮ್ ಆಂಡರ್ ಸನ್ ಅಂತಸ್ತು ಸಹ ಕೆಲವು ಬಾರಿ ಸಾರ್ವಜನಿಕ ಚರ್ಚೆಯ ವಿವಾದದ ವಿಷಯವಾಗಿತ್ತು.
2007 ಹಾಗೂ 2008 ರ ಕೊನೆಯವರೆಗೂ, ವಿನ್ಯಾಸ ಹಾಗೂ ಕೆಲಸಗಳೆರಡರಲ್ಲೂ ತನ್ನ ತಾಣದ ಅನೇಕ ಲಕ್ಷಣಗಳನ್ನು ಮೈಸ್ಪೇಸ್ ಪುನರ್ರಚಿಸಿತು. ಫೇಸ್ ಬುಕ್ ನ ಜೊತೆ ಸ್ಪರ್ಧಿಸುವ ಸಲುವಾಗಿ ಸ್ಟೇಟಸ್ ಅಪ್ಡೇಟ್ಸ್, ಅಪ್ಲಿಕೇಷನ್ಸ್ ಹಾಗೂ ಚಂದಾದಾರರನ್ನು ಸೇರಿಸುವಂತಹ ವೈಶಿಷ್ಟ್ಯಗಳ ಸಹಿತ, ಪುನರ್ರಚನೆಯ ಮೊದಲ ಕಾರ್ಯ ಬಳಕೆದಾರರ ಹೋಮ್ ಪೇಜ್ ಆಗಿತ್ತು. 2008 ರಲ್ಲಿ, ಮೈಸ್ಪೇಸ್ ನ ಹೋಮ್ ಪೇಜ್ ಅನ್ನು ಪುನಃ ರಚಿಸಲಾಯಿತು. 2008 ರ ಚಳಿಗಾಲದಲ್ಲಿ ಮೈಸ್ಪೇಸ್ ನ ಸಂಪೂರ್ಣ ಪ್ರೊಫೈಲ್ ಅನ್ನು ಸುಧಾರಿಸಲ್ಪಟ್ಟ ಆವೃತ್ತಿಯ ಸಹಿತ ಮೈಸ್ಪೇಸ್ ಸಂಗೀತವನ್ನು ಪುನಃ ಸೃಷ್ಟಿಸಲಾಯಿತು.[ಸೂಕ್ತ ಉಲ್ಲೇಖನ ಬೇಕು]
ಮಾರ್ಚ್ 10, 2010 ರಂದು, ಮೈಸ್ಪೇಸ್ ಒಂದು ಪರಿವರ್ತನೆಗೆ ಒಳಗಾಯಿತು ಮತ್ತು ಅವರ ಹಿಂದಿನ ಅನ್ವೇಷಣೆಯ ಸ್ವಭಾವಗಳ ಮೇಲೆ ಆಧರಿಸಿದ ಪಂದ್ಯಗಳು, ಸಂಗೀತ ಮತ್ತು ವಿಡಿಯೊಗಳನ್ನು ಸೂಚಿಸುವಂತಹ ನವೀನ ಬಳಕೆದಾರರಿಗೆ ಶಿಫಾರಸುಗಳ ಸಾಧನಗಳಂತಹ ಕೆಲವು ಆಧುನಿಕ ವೈಶಿಷ್ಟ್ಯಗಳನ್ನು ಸೇರಿಸಲಾಯಿತು. ಅವರಿಗೆ ಪಂದ್ಯಗಳ ಜಾಗರೂಕತೆಯನ್ನು ಕಳುಹಿಸುವುದೂ ಅಲ್ಲದೆ ಮೈಸ್ಪೇಸ್ ಪಂದ್ಯಾಳುಗಳಿಗೆ ಅನೇಕ ಮೊಬೈನಲ್ಲಿನ ಮೈಕ್ರೊ ಅಪ್ಲಿಕೇಷನ್ ಸಹ ಜಾಲ ತಾಣವು ಬಿಡುಗಡೆ ಮಾಡುತ್ತದೆ. ತಾಣವು 20 ರಿಂದ 30 ಮೈಕ್ರೊ ಅಪ್ಲಿಕೇಷಣ್ ಗಳನ್ನು ಬಿಡುಗಡೆ ಮಾಡಿ ಮುಂದಿನ ವರ್ಷದಿಂದ ಮೊಬೈಲ್ ಆಗುತ್ತಿದೆ.[23]
ಮೈಸ್ಪೇಸ್ ಕೇವಲ ಜಾಹಿರಾತಿನಿಂದ ಬರುವ ಆದಾಯದಿಂದ ಕಾರ್ಯ ನಿರ್ವಹಿಸುತ್ತದೆ ಏಕೆಂದರೆ ಅದರ ಕಾರ್ಯಗಳನ್ನು ಉಪಯೋಗಿಸುವ ಕೊನೆಯ ಬಳಕೆದಾರನು ಯಾವುದೇ ಶುಲ್ಕವನ್ನು ಪಾವತಿಸುವ ಸಾಧ್ಯತೆಯಿರುವುದಿಲ್ಲ.[24] ತನ್ನ ಜಾಲ ತಾಣ ಹಾಗೂ ಅನುಮೊದಿಸಲ್ಪಟ್ಟ ಜಾಹಿರಾತಿನ ನೆಟ್ವರ್ಕ್ ಮೂಲಕ, ತನ್ನ ಉಪಯೋಗದಾರರ ಬಗ್ಗೆ ಡಾಟಾ ಸಂಗ್ರಹಿಸಲು ತನ್ನ ಸಾಮರ್ಥ್ಯದಲ್ಲಿ ಈ ರೀತಿಯಾಗಿ ನೋಡುವ ಜಾಹಿರಾತುಗಳಿಂದ ಅವನ ನಡವಳಿಕೆಯ ಲಕ್ಷ್ಯವನ್ನು ಪ್ರತಿ ಸಂದರ್ಶಕನು ಉಪಯೋಗಿಸುವ ಬಗ್ಗೆ ತಿಳಿಯಲು ತನ್ನ ದಕ್ಷತೆಯಲ್ಲಿ ಅದು ಕೇವಲ ಯಾಹೂ! ಗೆ ದ್ವಿತೀಯವಾಗಿದೆ.[25]
ಆಗಸ್ಟ್ 8, 2006 ರಂದು, ಮೈಸ್ಪೇಸ್ ನಲ್ಲಿ ಜಾಹಿರಾತು ಹಾಗೂ ಒಂದು ಗೂಗಲ್ ನ ಅನ್ವೇಷಣೆಯ ಸಾಧನದ ಅನುಕೂಲವನ್ನು ಒದಗಿಸಲು 900 ಮಿಲಿಯನ್ ಡಾಲರುಗಳ ಒಂದು ವ್ಯವಹಾರಕ್ಕೆ ಅನ್ವೇಷಣೆಯ ಸಾಧನ ಗೂಗಲ್ ಸಹಿ ಹಾಕಿತು.[26][27][28] ಸಾಮಾಜಿಕ ಅಂತರಜಾಲ ದೈತ್ಯನಿಗೆ ಉಪಕರಣಗಳು ಹಾಗೂ ವಿಡ್ ಗೆಟ್ಸ್ ಗಳನ್ನು ಒದಗಿಸುವಂತಹ ಅನೇಕ ಸಣ್ಣ ಸಣ್ಣ ಕಂಪನಿಗಳಿಗೆ ಮೈಸ್ಪೇಸ್ ಆಕಸ್ಮಿಕ ಧನಲಾಭವಾಗಿ ಪರಿಣಮಿಸಿತು. ಆ ತಾಣಕ್ಕೆ ಹೆಚ್ಚುವರಿ ವಿಶೇಷತೆಯನ್ನು ಒದಗಿಸುವ ವಿಡ್ ಗೆಟ್ಸ್ ಗಳಾಗಿ ಮೈಸ್ಪೇಸ್ ನಲ್ಲಿ ಸ್ಲೈಡ್.ಕಾಂ, ರಾಕ್ ಯು! ಮತ್ತು ಯೂಟ್ಯೂಬ್ ನಂತಹ ಕಂಪನಿಗಳೆಲ್ಲವೂ ಆರಂಭಿಸಲ್ಪಟ್ಟವು. ಇತರೆ ಸ್ಥಳಗಳು ಆ ತಾಣವನ್ನು ವ್ಯಕ್ತಿಗತಗೊಳಿಸಲು ಪ್ರದರ್ಶನ ವಿನ್ಯಾಸಗಳನ್ನು ಸೃಷ್ಟಿಸಿದವು ಮತ್ತು ಹದಿವಯಸ್ಸಿನ ಕೊನೆಯಲ್ಲಿರುವವರು ಇಲ್ಲವೇ ಇಪ್ಪತ್ತರ ಅಂಚಿನಲ್ಲಿರುವಂತಹ ಹೆಚ್ಚು ಮಾಲೀಕರಿಗೆ ನೂರಾರು ಸಾವಿರಾರು ಡಾಲರುಗಳನ್ನು ತಂದುಕೊಟ್ಟಿತು.[29][30]
2008 ನವೆಂಬರ್ ನಲ್ಲಿ, ಎಮ್ ಟಿ ವಿ ಮತ್ತು ಅದರ ಸಹಾಯಕ ನೆಟ್ವರ್ಕ್ ಗಳ ಭದ್ರಪಡಿಸಿದ ಹಕ್ಕನ್ನು ಉಲ್ಲಂಘಿಸಿದಂತಹ ಬಳಕೆದಾರನು ಅಪ್ ಲೋಡ್ ಮಾಡಿದ ಪರಿವಿಡಿಯನ್ನು ಮೈಸ್ಪೇಸ್ ಘೋಷಿಸುತು ಹಾಗೂ ಅದರ ಸಹಾಯಕ ನೆಟ್ವರ್ಕ್ ಗಳ ಕಂಪನಿಗಳಿಗೆ ಆದಾಯವನ್ನು ಉತ್ಪಾದಿಸುವಂತಹ ಜಾಹಿರಾತುಗಳ ಸಹಿತ ಪುನರ್ ಹಂಚಿಕೆ ಮಾಡಲ್ಪಡಬಹುದು.[31]
ಇತ್ತೀಚಿನ ತಿಂಗಳುಗಳಲ್ಲಿ ಟ್ವಿಟರ್ ಮತ್ತು ಫೇಸ್ ಬುಕ್ ಗೆ ಜನಪ್ರಿಯತೆಯನ್ನು ಕಳೆದುಕೊಂಡಿದ್ದಾಗ್ಯೂ, ಮೈಸ್ಪೇಸ್ ಅನ್ನು ಮಾರುವುದಾಗಲಿ, ಇಲ್ಲವೆ ಟ್ವಿಟರ್ ಅನ್ನು ಕೊಂಡುಕೊಳ್ಳುವ ಯೋಜನೆಯನ್ನಾಗಲಿ ರುಪರ್ಟ್ ಮುರುಡೊಚ್ ಹೊಂದಿಲ್ಲ. ತಾನೇ ಸ್ವತಃ ಹಣಗಳಿಸುವಂತಹ ಮಾರ್ಗವನ್ನು ಟ್ವಿಟರ್ ಹುಡುಕ ಬೇಕೆಂದು ಯೋಚಿಸುತ್ತಾ, ಮುರುಡೊಚ್ ತನ್ನ ವೈಯಕ್ತಿಕ ಬೆಂಬಲವನ್ನು ಆ ತಾಣಕ್ಕೆ ಕೊಟ್ಟನು.[32] ಆದಾಗ್ಯೂ, 2009 ರಲ್ಲಿ, ಮೈಸ್ಪೇಸ್ ಸಹ ಒಂದು ಹೊಸ ಸ್ಟೇಟಸ್ ಅಪ್ ಡೇಟ್ ಮಾಡುವ ವಿಧಾನವನ್ನು ತನ್ನ ತಾಣಕ್ಕೆ ಸೇರಿಸಿತು. ಮೈಸ್ಪೇಸ್ ನ ಬಳಕೆದಾರನು ಟ್ವಿಟರ್ ಖಾತೆಯನ್ನೂ ಹೊಂದಿದ್ದರೆ, ಟ್ವೀಟ್ ಸಹ ಮೈಸ್ಪೇಸ್ ನ ಸ್ಟೇಟಸ್ ಅನ್ನು ಅಪ್ ಡೇಟ್ ಮಾಡುತ್ತದೆ. (ಫೇಸ್ ಬುಕ್ ಸಹ ಸಮಾನರೂಪದ ಲಕ್ಷಣಗಳನ್ನು ಹೊಂದಿದೆ.) ಆದಾಗ್ಯೂ, ಎರಡೂ ಖಾತೆಗಳು ಒಟ್ಟಿಗೆ ಅನುರೂಪವಾಗಿರಬೇಕೆಂದು ಅದು ಅಪೇಕ್ಷಿಸುತ್ತದೆ.
ಮನೋಭಾವನೆಗಳು ಮನಸ್ಥಿತಿಯನ್ನು ತಿಳಿಸುವ ಚಿಕ್ಕ ವಿಧಾನಗಳು, ಅದನ್ನು ಬಳಕೆದಾರನು ಒಳಗಿರುವನೆಂಬ ಒಂದು ಗುಣವನ್ನು ವರ್ಣಿಸಲು ಉಪಯೋಗಿಸುತ್ತಾರೆ. ಜುಲೈ 2007 ರಲ್ಲಿ ಈ ವೈಶಿಷ್ಟ್ಯವನ್ನು ಸೇರಿಸಲಾಯಿತು.
ವ್ಯಕ್ತಿಚಿತ್ರಗಳು ಎರಡು ಮುಖ್ಯ ಬ್ಲುರ್ಬ್ ಗಳನ್ನು ಹೊಂದಿರುತ್ತವೆ: "ನನ್ನ ಬಗ್ಗೆ" ಹಾಗೂ "ನಾನು ಯಾರನ್ನು ಭೇಟಿಯಾಗಲು ಬಯಸಯತ್ತೇನೆ" ವಿಭಾಗಗಳು. ಪ್ರೊಫೈಲ್ಸ್ ಗಳು ಒಂದು "ಇಂಟರೆಸ್ಟ್" ವಿಭಾಗ ಮತ್ತು ಒಂದು "ಡೀಟೈಲ್" ವಿಭಾಗವನ್ನು ಹೊಂದಿರುತ್ತವೆ. "ಡೀಟೈಲ್ಸ್" ವಿಭಾಗದಲ್ಲಿ, "ಸ್ಟೇಟಸ್" ಮತ್ತು "ಜೋಡಿಯಾಕ್ ಸೈನ್" ಭಾಗಗಳು ಯಾವಾಗಲೂ ಪ್ರದರ್ಶನಗೊಳ್ಳುತ್ತವೆ. ಆದಾಗ್ಯೂ, ಸದಸ್ಯರು ಅವುಗಳನ್ನು ಭರ್ತಿ ಮಾಡದೇ ಹೋದರೆ ಈ ಭಾಗಗಳಲ್ಲಿನ ಕಾರ್ಯರಂಗಗಳು ಪ್ರದರ್ಶನಗೊಳ್ಳುವುದಿಲ್ಲ. ಕಂಟೆಂಟ್, ಎಮೊಷನ್ ಮತ್ತು ಮಿಡಿಯಾ ದಂತಹ ಸ್ಟಾಂಡರ್ಡ್ ಭಾಗಗಳ ಜೊತೆ ಪ್ರೊಫೈಲ್ ಗಳು ಒಂದು ಬ್ಲಾಗ್ ಅನ್ನು ಸಹ ಹೊಂದಿರುತ್ತವೆ. ಮೈಸ್ಪೇಸ್ ಪ್ರತಿಬಿಂಬಗಳನ್ನು ಅಪ್ ಲೋಡ್ ಮಾಡಲು ಸಹ ಬೆಂಬಲಿಸುತ್ತದೆ. ಪ್ರತಿಬಿಂಬಗಳಲ್ಲೊಂದನ್ನು ಆರಿಸಿ ಅದನ್ನು "ಡೀಫಾಲ್ಟ್ ಇಮೇಜ್" ಆಗಿ ಮಾಡಬಹುದು, ಆ ಪ್ರತಿಬಿಂಬವು ಪ್ರೊಫೈಲ್ ನ ಮುಖ್ಯ ಪುಟ, ಶೋಧನೆಯ ಪುಟ ಮತ್ತು ಬಳಕೆದಾರನ ಹೆಸರಿನ ಪಕ್ಕ ಹಾಗೂ ವಿಮರ್ಶೆ ಗಳು, ಸಂದೇಶಗಳು ಇತ್ಯಾದಿಗಳ ಮೇಲೆ ಕಾಣಿಸಿಕೊಳ್ಳುತ್ತದೆ. ಫೋಟೋಫ್ಲೆಕ್ಸರ್ ನಿಂದ ಶಕ್ತಿ ಹೊಂದಿದ ಒಂದು ಛಾಯಾಚಿತ್ರದ ಆವೃತ್ತಿಯು ದೊರಕುತ್ತದೆ, ಇದು ಪ್ರತಿಬಿಂಬಗಳು ಅಕಸ್ಮಾತ್ತಾಗಿ ಕಾಣಿಸಿಕೊಳ್ಳುವಂತೆ ಹಾಗೂ ಚಿತ್ರದ ಬೆಳಕನ್ನು ಹೊಂದಿಸುವುದೂ ಅಲ್ಲದೆ, ಪ್ರತಿಬಿಂಬವನ್ನು ಒಂದು ಕಾರ್ಟೂನ್ ಗೆ ಅಥವಾ ನಿಯಾನ್ ಬೆಳಕನ್ನು ಹೊಂದಿದ ರೇಖಾ ಚಿತ್ರವನ್ನಾಗಿ ಮಾರ್ಪಡಿಸಬಹುದು, ಇಲ್ಲವೆ ಬಳಕೆದಾರನ ಮುಖವನ್ನು 100 ಡಾಲರಿನ ನೋಟಿನ ಮೇಲೆ ಹಾಕ ಬಹುದು. ಮೈಸ್ಪೇಸ್ ನ ವಿಡಿಯೋ ಸೇವೆಗಳ ಜೊತೆ ಫ್ಲ್ಯಾಷ್ ಅನ್ನು ಹೊಂದಿಸಬಹುದು. ಬ್ಲಾಗಿಂಗ್ ವೈಶಿಷ್ಟ್ಯಗಳೂ ಸಹ ದೊರಕುತ್ತವೆ.
ಯೂಸರ್ಸ್ ಫ್ರೆಂಡ್ಸ್ ಸ್ಪೇಸ್ (ಢಿಫಾಲ್ಟ್ ನಿಂದ) ನ ಕೆಳಗೆ "ಕಾಮೆಂಟ್ಸ್" ವಿಭಾಗವಿದೆ, ಇದರಲ್ಲಿ ಉಪಯೋಗದಾರರ ಸ್ನೇಹಿತರು ಎಲ್ಲಾ ದರ್ಶಕರಿಗೂ ಓದಲು ವ್ಯಾಖ್ಯಾನಗಳನ್ನು ಬಿಡಬಹುದು. ಮೈಸ್ಪೇಸ್ ನ ಬಳಕೆದಾರರು ಯಾವುದೇ ವಿಮರ್ಶೆಯನ್ನು ಅಳಿಸಿಹಾಕುವ ಆಯ್ಕೆ ಹೊಂದಿರುತ್ತಾರೆ ಮತ್ತು / ಅಥವಾ ಪ್ರಕಟಿಸುವ ಮೊದಲು ಎಲ್ಲಾ ಟೀಕೆಗಳನ್ನು ಅನುಮೋದನೆ ಯಾಗುವುದನ್ನು ಅಪೇಕ್ಷಿಸುತ್ತಾರೆ. ಒಬ್ಬ ಬಳಕೆದಾರನ ಖಾತೆಯನ್ನು ಆಳಿಸಿಹಾಕಿದರೆ, ಆ ವ್ಯಕ್ತಿಯ ಇತರೆ ಪ್ರೊಫೈಲ್ ಗಳ ಮೇಲೆ ಇದ್ದಂತಹ ಪ್ರತಿಯೊಂದು ವ್ಯಾಖ್ಯಾನವು ಅಳಿಸಿಹಾಕಲ್ಪಡುತ್ತದೆ, ಹಾಗೂ "ಈ ವ್ಯಕ್ತಿಚಿತ್ರವು ಚಾಲ್ತಿಯಲ್ಲಿಯೇ ಇಲ್ಲ" ಎಂಬ ನುಡಿಯ ಟೀಕೆಯ ಸಹಿತ ಬದಲಾಯಿಸಲಾಗುತ್ತದೆ.
"ನನ್ನ ಬಗ್ಗೆ", "ನಾನು ಭೇಟಿಯಾಗ ಬಯಸುತ್ತೇವೆ" ಮತ್ತು "ಅಭಿರುಚಿಗಳು" ಇಂತಹ ಪ್ರದೇಶಗಳಿಗೆ ಹೆಚ್ ಟಿ ಎಮ್ ಎಮ್ (ಆದರೆ ಜಾವಾ ಸ್ಕ್ರಿಪ್ಟ್ ಅಲ್ಲ)ಮುಖಾಂತರ ತಮ್ಮ ಉಪಯೋಗದ ಪ್ರೊಫೈಲ್ ನ ಪುಟಗಳನ್ನು ತಮಗೆ ತಕ್ಕಂತೆ ಬದಲಾವಣೆ ಮಾಡಲು ಮೈಸ್ಪೇಸ್ ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ವಿಡಿಯೋಗಳು ಮತ್ತು ಫ್ಲ್ಯಾಷ್-ಆಧಾರಿತ ಪರಿವಿಡಿಯನ್ನು ಇದೇ ರೀತಿಯಾಗಿ ಸೇರಿಸ ಬಹುದು. ಉಪಯೋಗದಾರರು ಮೈಸ್ಪೇಸ್ ಸಂಗೀತದ ಮುಖಾಂತರ ತಮ್ಮ ಪ್ರೊಫೈಲ್ ನ ಪುಟಗಳಿಗೆ ಸಂಗೀತವನ್ನು ಸೇರಿಸುವ ಆಯ್ಕೆಯನ್ನೂ ಸಹ ಹೊಂದಿರುತ್ತಾರೆ, ಇದು ಮೈಸ್ಪೇಸ್ ನಲ್ಲಿ ಉಪಯೋಗಿಸಲು ಹಾಡುಗಳನ್ನು ಕಳುಹಿಸುವುದಕ್ಕೆ ಸಂಗೀತಗಾರರ ತಂಡಗಳಿಗೆ ದಾರಿಮಾಡಿಕೊಡುವ ಒಂದು ಸೇವೆ.
ಮೈಸ್ಪೇಸ್ ಸಂಪಾದಕೀಯವನ್ನು ಉಪಯೋಗಿಸಿ ಪುಟದ ಡಿಫಾಲ್ಟ್ ಸ್ಟೈಲ್ ಹಾಳೆಯನ್ನು ಬದಲಾಯಿಸುವುದಕ್ಕೆ ಅದರಲ್ಲಿನ ಒಂದು ಕ್ಷೇತ್ರಕ್ಕೆ ಸಿ ಎಸ್ ಎಸ್ (in a <style>...</style> element) ಗೆ ಪ್ರವೇಶಿಸಿ ಅವನ ಅಥವಾ ಅವಳ ಪುಟದ ಸರ್ವೇಸಾಮಾನ್ಯ ಬಾಹ್ಯರಚನೆಯನ್ನು ಸಹ ಒಬ್ಬ ಬಳಕೆದಾರನು ಬದಲಾಯಿಸಬಹುದು. ಅಕ್ಷರವಿನ್ಯಾಸ ಮತ್ತು ಬಣ್ಣಗಳನ್ನು ಹೊಂದಿಸಲು ಇದು ಆಗಾಗ್ಗೆ ಉಪಯೋಗಿಸಲ್ಪಡುತ್ತದೆ. ಉಪಯೋಗದ ವಿನ್ಯಾಸಕ್ಕೆ ಒಂದೇ ಬಾರಿಗೆ ಬದಲಾಗುವ ಮುಂಚೆ ಡಿಫಾಲ್ಟ್ ಮೈಸ್ಪೇಸ್ ವಿನ್ಯಾಸದ ಜೊತೆ ಪುಟವು ಪ್ರಾರಂಭವಾಗುತ್ತದೆಯೆಂದರೆ ಆ ಹಾಳೆಯ ಮಧ್ಯ ಭಾಗದಲ್ಲಿ (<head> element ನಲ್ಲಿ ಸ್ಥಾಪಿಸಲ್ಪಟ್ಟಿರುವುದಕ್ಕೆ ಬದಲಾಗಿ) ಬಳಕೆದಾರನು ಸೇರಿಸಿರುವ ಸಿ ಎಸ್ ಎಸ್ ನೆಲೆಗೊಂಡಿರುವುದು ವಾಸ್ತವಾಂಶ. ಒಂದು ವಿಶೇಷ ರೀತಿಯ ಬದಲಾವಣೆಯಂದರೆ ಒಂದು ಡಿವ್ ಓವರ್ ಲೇ ಆಗಿದೆ, ಅದರಲ್ಲಿ
ಟೆಂಪ್ಲೇಟು:Fox Interactive Media ಟೆಂಪ್ಲೇಟು:News Corporation
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.