ಯೇತಿ
From Wikipedia, the free encyclopedia
ಟೆಂಪ್ಲೇಟು:Infobox Paranormal creature
ಯೇತಿ ಅಥವಾ ತುಂಬು ಕೂದಲಿನ ಹಿಮ ಮಾನವ ಆದಿವಾಸಿ ಪ್ರಾಣಿ ಎಂದು ಹೇಳಲಾಗಿದೆ. ಮಂಗಮಾನವನ ಸ್ವರೂಪ ಹೊಂದಿರುವ ಈ ಪ್ರಾಣಿಯು, ನೇಪಾಳ ಮತ್ತು ಟಿಬೆಟ್ನ ಹಿಮಾಲಯ ಪರ್ವತ ಪ್ರದೇಶದಲ್ಲಿ ನೆಲೆಸಿತ್ತು ಎಂದು ಹೇಳಲಾಗಿದೆ. ಯೇತಿ ಮತ್ತು ಮೆಹ್-ತೆಕ್ ಎಂಬ ಹೆಸರನ್ನು ಸ್ಥಳೀಯ ಜನರು ಬಳಸುತ್ತಾರೆ,[1] ಮತ್ತು ಅವರ ಇತಿಹಾಸ ಹಾಗೂ ಕಾಲ್ಪನಿಕ ಕಥೆಗಳ ಭಾಗವಾಗಿದೆ. ಪಾಶ್ಚಿಮಾತ್ಯರಲ್ಲಿ ಹತ್ತೊಂಭತ್ತನೇಯ ಶತಮಾನದಲ್ಲಿ ಯೇತಿಯ ಬಗೆಗಿನ ಪ್ರಸಿದ್ಧ ನಂಬಿಕೆಯ ಮೊದಲ ಕಥೆಗಳ ಭಾಗಗಳಾಗಿ ಹುಟ್ಟಿಕೊಂಡವು.
ವೈಜ್ಞಾನಿಕ ಸಮುದಾಯವು ಯೇತಿ ಒಂದು ದಂತಕಥೆ ಎಂದು ಭಾವಿಸಿದೆ. ಇದಕ್ಕೆ ಆಧಾರಗಳ ಕೊರತೆ ಇದೆ.[2] ಗೂಢಪ್ರಾಣಿಶಾಸ್ತ್ರದಲ್ಲಿ ಈಗಲೂ ಇದೊಂದು ಪ್ರಸಿದ್ಧ ಪ್ರಾಣಿಯಾಗಿದೆ. ಯೇತಿಯನ್ನು ಉತ್ತರ ಅಮೆರಿಕಾದ ಬಿಗ್ಫೂಟ್ ದಂತಕಥೆಯ ವರ್ಗಕ್ಕೆ ಸಮನಾದ ಪ್ರಾಣಿ ಎಂದು ಪರಿಗಣಿಸಲಾಗಿದೆ.