ರಫ್ಲೀಸಿಯ
From Wikipedia, the free encyclopedia
ರಫ್ಲೀಸಿಯ ಆವೃತಬೀಜಸಸ್ಯಗಳ (ಆಂಜಿಯೋಸ್ಪರ್ಮ್ಸ್) ಪೈಕಿ ರಫ್ಲೀಸಿಯೇಸಿ ಕುಟುಂಬಕ್ಕೆ ಸೇರಿರುವ ಸಸ್ಯ.[2]: 2 [3] ಇದರ ಜೈವಿತಾಮ ರಫ್ಲೀಸಿಯ ಒಂದು ವೈವಿಧ್ಯಮಯ ಹಾಗೂ ವಿಚಿತ್ರ ಸಸ್ಯ. ಮಲಯ ದ್ವೀಪಸಮೂಹಗಳಲ್ಲಿ ಮಾತ್ರ ಕಂಡುಬರುವ ಈ ಸಸ್ಯ ಒಂದು ಪರಾವಲಂಬಿ ಸಸ್ಯ. ವಿವಿಧ ಜಾತಿಯ ಸಸ್ಯಗಳ ಮೇಲೆ ಇದು ಪರಾವಲಂಬಿ ಜೀವನ ನಡೆಸಬಲ್ಲದು. ಆವೃತಬೀಜಸಸ್ಯಗಳ ಮುಖ್ಯ ಭಾಗಗಳಾದ ಬೇರು, ಕಾಂಡ, ಎಲೆಗಳಾವುವೂ ಈ ಸಸ್ಯದಲ್ಲಿ ಇರುವುದಿಲ್ಲ. ಪ್ರಬುದ್ಧಸಸ್ಯ ಬಿಳಿಯ ಸೂಕ್ಷ್ಮನಾಳಗಳ ತಂತುಜಾಲದಂತಿದ್ದು ಆತಿಥೇಯ ಸಸ್ಯದ ಒಳಭಾಗದಲ್ಲಿ ಹರಡಿಕೊಂಡಿರುತ್ತದೆ.[4] ಹೀಗಾಗಿ ಹೊರನೋಟಕ್ಕೆ ಸಸ್ಯದ ಇರುವಿಕೆಯ ಅರಿವೇ ಆಗುವುದಿಲ್ಲ. ಹೂ ಅರಳಿದ ಅನಂತರವೇ ಸಸ್ಯದ ಇರುವಿಕೆಯ ಅರಿವಾಗುತ್ತದೆ. ಅರಳಿದ ಹೂ ಕೊಳೆತಮಾಂಸದ ವಾಸನೆ ಬೀರುವುದರಿಂದ ಸಸ್ಯವನ್ನು ಸುಲಭವಾಗಿ ಪತ್ತೆಮಾಡಬಹುದು.
ರಫ್ಲೀಸಿಯ | |
---|---|
Rafflesia arnoldii flowers in Bengkulu, Indonesia | |
Scientific classification | |
ಸಾಮ್ರಾಜ್ಯ: | ಸಸ್ಯ |
ಏಕಮೂಲ ವರ್ಗ: | ಹೂಬಿಡುವ ಸಸ್ಯ |
ಏಕಮೂಲ ವರ್ಗ: | ಯೂಡೈಕಾಟ್ಗಳು |
ಏಕಮೂಲ ವರ್ಗ: | ರೋಸಿಡ್ಸ್ |
ಗಣ: | ಮ್ಯಾಲ್ಪಿಘಿಯಾಲೆಸ್ |
ಕುಟುಂಬ: | ರಫ್ಲೀಸಿಯೇಸೀ |
ಕುಲ: | ರಫ್ಲೀಸಿಯ R.Br. ex Thomson bis[1] |
Type species | |
Rafflesia arnoldii | |
Species | |
See Classification section |
ಪರಾವಲಂಬನಕ್ಕೆ ಹೊಂದಿಕೊಳ್ಳಲು ಈ ಸಸ್ಯ ತನ್ನ ವಿಕಾಸಕ್ರಮದಲ್ಲಿ ಬೇರು, ಕಾಂಡ, ಎಲೆಗಳನ್ನು ಕಳೆದುಕೊಂಡಿತು. ರಚನೆಯಲ್ಲಿ ಶಿಲೀಂಧ್ರಗಳನ್ನು ಹೋಲುವಂತೆ ಮಾರ್ಪಾಡಾಯಿತು. ಆದರೆ ಮೂಲಗುಣವಾದ ಆವೃತಬೀಜವನ್ನು ಉತ್ಪಾದಿಸಲು ಅರಳುವ ಪುಷ್ಪ ಮಾತ್ರ ಉಳಿದು ಬಂತು.