ಲಿಂಪ್ ಬಿಜ್ಕಿಟ್
From Wikipedia, the free encyclopedia
ಲಿಂಪ್ ಬಿಜ್ಕಿಟ್ ಅಮೆರಿಕಾ ದೇಶದ ಒಂದು ರಾಕ್ ಸಂಗೀತ ವಾದ್ಯತಂಡ. ಇದರ ಮೂಲಸ್ಥಾನ ಫ್ಲಾರಿಡಾ ರಾಜ್ಯದ ಜ್ಯಾಕ್ಸನ್ವಿಲ್. ಫ್ರೆಡ್ ಡರ್ಸ್ಟ್ (ಪ್ರಮುಖ ಗಾಯನ), ವೆಸ್ ಬೊರ್ಲೆಂಡ್ (ಗಿಟಾರ್), ಸ್ಯಾಮ್ ರಿವರ್ಸ್ (ಬಾಸ್), ಜಾನ್ ಒಟ್ಟೊ (ಡ್ರಮ್ಸ್) ಹಾಗೂ DJ ಲೀತಲ್ ಈ ವಾದ್ಯತಂಡದ ಸದಸ್ಯರು.
Limp Bizkit | |
---|---|
ಹಿನ್ನೆಲೆ ಮಾಹಿತಿ | |
ಮೂಲಸ್ಥಳ | Jacksonville, Florida, United States |
ಸಂಗೀತ ಶೈಲಿ | Nu metal, rap metal, alternative rock |
ಸಕ್ರಿಯ ವರ್ಷಗಳು | 1995–present |
Labels | Flip, Interscope, Geffen |
Associated acts | Black Light Burns, House of Pain, La Coka Nostra |
ಅಧೀಕೃತ ಜಾಲತಾಣ | www.limpbizkit.com |
ಸಧ್ಯದ ಸದಸ್ಯರು | Fred Durst Wes Borland Sam Rivers DJ Lethal John Otto |
ಮಾಜಿ ಸದಸ್ಯರು | Mike Smith |
ಲಿಂಪ್ ಬಿಜ್ಕಿಟ್ ಮೂರು ಗ್ರ್ಯಾಮಿ ಪ್ರಶಸ್ತಿಗಳಿಗಾಗಿ ನಾಮನಿರ್ದೇಶನ ಗಳಿಸಿತಲ್ಲದೆ, ಹಲವು ಇತರೆ ಪ್ರಸಿದ್ಧ ಪ್ರಶಸ್ತಿಗಳನ್ನು ಗಳಿಸಿದೆ. ಈ ವಾದ್ಯತಂಡದ್ದು ವಿಶ್ವಾದ್ಯಂತ ಸುಮಾರು 35 ದಶಲಕ್ಷ ಆಲ್ಬಮ್ಗಳು ಮಾರಾಟವಾಗಿವೆಯೆಂದು ಅಂದಾಜಿಸಲಾಗಿದೆ.[1]
ಇಸವಿ 1995ರಲ್ಲಿ ರಚನೆಯಾದ ಈ ವಾದ್ಯತಂಡವು, 1999ರಲ್ಲಿ ಬಿಡುಗಡೆಯಾದ ತಮ್ಮ ಎರಡನೆಯ ಸ್ಟುಡಿಯೊ ಆಲ್ಬಮ್ ಸಿಗ್ನಿಫಿಕೆಂಟ್ ಅದರ್ ಒಂದಿಗೆ ಮುಖ್ಯವಾಹಿನಿಯಲ್ಲಿಯೇ ಯಶಸ್ಸು ಗಳಿಸಿತು. ವಾದ್ಯತಂಡದ ಮೂರನೆಯ ಸ್ಟುಡಿಯೊ ಆಲ್ಬಮ್ ಚಾಕೊಲೇಟ್ ಸ್ಟಾರ್ಫಿಷ್ ಅಂಡ್ ದಿ ಹಾಟ್ ಡಾಗ್ ಫ್ಲೇವರ್ಡ್ ವಾಟರ್ , 2000ದಲ್ಲಿ ಬಿಡುಗಡೆಯಾಗಿ ಅದರ ಯಶಸ್ಸಿನ ಅಭಿಯಾನವನ್ನು ಮುಂದುವರೆಸಿತು. ಅದರ ಮೊದಲ ವಾರದಲ್ಲಿ, ಆಲ್ಬಮ್ನ 1.05 ದಶಲಕ್ಷ ಪ್ರತಿಗಳು ಮಾರಾಟವಾದವು. ರಾಕ್ ಆಲ್ಬಮ್ ಇತಿಹಾಸದಲ್ಲಿ ಅತಿ-ವೇಗವಾಗಿ ಮಾರಾಟವಾದ ಅಲ್ಬಮ್ ಎಂಬ ಕೀರ್ತಿ ಗಳಿಸಿತು. ಸತತ ಏಳು ವರ್ಷಗಳ ಕಾಲ ದಾಖಲೆಯಾಗಿ ಉಳಿದಿದ್ದ ಪರ್ಲ್ ಜ್ಯಾಮ್ನ Vs. ನ್ನು ಇದು ಹಿಂದಿಕ್ಕಿತು.[2]
ಇಸವಿ 2001ರಲ್ಲಿ ವೆಸ್ ಬೊರ್ಲೆಂಡ್ ವಾದ್ಯತಂಡವನ್ನು ತೊರೆದರು. ಆನಂತರ, 2003ರಲ್ಲಿ ಬಿಡುಗಡೆಯಾದ ನಾಲ್ಕನೆಯ ಸ್ಟುಡಿಯೊ ಆಲ್ಬಮ್ ರಿಸಲ್ಟ್ಸ್ ಮೇ ವೇರಿ ಗಾಗಿ ಬೊರ್ಲೆಂಡ್ ಸ್ಥಾನವನ್ನು ತುಂಬಲು ಮೈಕ್ ಸ್ಮಿತ್ರನ್ನು ಸೇರಿಸಿಕೊಳ್ಳಲಾಯಿತು. ಮುಂಚಿನ ಎರಡು ಆಲ್ಬಮ್ಗಳಷ್ಟು ಯಶಸ್ಸನ್ನು ಈ ಆಲ್ಬಮ್ ಗಳಿಸಲಿಲ್ಲ. ಇಸವಿ 2005ರಲ್ಲಿ ವೆಸ್ ಬೊರ್ಲೆಂಡ್ ವಾದ್ಯತಂಡಕ್ಕೆ ಪುನಃ ಸೇರ್ಪಡೆಯಾದರು. ದಿ ಅನ್ಕ್ವೆಷ್ಚನಬಲ್ ಟ್ರೂತ್ (ಪಾರ್ಟ್ 1) ಎಂಬ EP ಬಿಡುಗಡೆಯಾಯಿತು. ಇದರ ನಂತರ ಬೊರ್ಲೆಂಡ್ ಪುನಃ ತಂಡವನ್ನು ಅಗಲಿ, ಫೆಬ್ರವರಿ 2009ರಲ್ಲಿ ಸೇರ್ಪಡೆಯಾದರು. ಲಿಂಪ್ ಬಿಜ್ಕಿಟ್ನ ಮೂಲತಃ ಸದಸ್ಯರನ್ನೊಳಗೊಂಡು ರಚನೆಯಾದ, ಏಳು ವರ್ಷಗಳಲ್ಲಿ ಇದೇ ಮೊದಲ ಸಂಪೂರ್ಣಾವಧಿಯ ಆಲ್ಬಮ್ ಗೋಲ್ಡ್ ಕೋಬ್ರಾ 2010ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.[3]