From Wikipedia, the free encyclopedia
ಲೋಕ್ತಾಕ್ ಸರೋವರವು ಈಶಾನ್ಯ ಭಾರತದಲ್ಲಿನ ಅತಿ ದೊಡ್ಡ ಸಿಹಿನೀರಿನ ಸರೋವರವಾಗಿದೆ. ಇದು ಅದರ ಮೇಲೆ ತೇಲುವ ಫುಮ್ಡಿಗಳಿಗೆ (ವಿಘಟನೆಯ ವಿವಿಧ ಹಂತಗಳಲ್ಲಿರುವ ಸಸ್ಯಗಳು, ಮಣ್ಣು ಮತ್ತು ಸಾವಯವ ವಸ್ತುಗಳ ವೈವಿಧ್ಯಮಯ ದ್ರವ್ಯರಾಶಿ) ಪ್ರಸಿದ್ಧವಾಗಿದೆ. ಈ ಸರೋವರವು ಭಾರತದ ಮಣಿಪುರ ರಾಜ್ಯದಲ್ಲಿನ ಮೊಯಿರಾಂಗ್ನಲ್ಲಿ ಸ್ಥಿತವಾಗಿದೆ.[1] ಲೋಕ್ತಾಕ್ನ ಶಬ್ದವ್ಯುತ್ಪತ್ತಿ ಹೀಗಿದೆ, ಲೋಕ್ = "ತೊರೆ" ಮತ್ತು ತಾಕ್ = "ಕೊನೆ".[2] ಎಲ್ಲ ಫುಮ್ಡಿಗಳಲ್ಲಿ ಅತ್ಯಂತ ದೊಡ್ಡದು ೪೦ ಚದರ ಕಿ.ಮಿ. ಪ್ರದೇಶವನ್ನು ಆವರಿಸುತ್ತದೆ ಮತ್ತು ಸರೋವರದ ಆಗ್ನೇಯ ತಟದಲ್ಲಿ ಸ್ಥಿತವಾಗಿದೆ. ಈ ಫುಮ್ಡಿಯ ಮೇಲೆ ಸ್ಥಿತವಾಗಿರುವ ಕೈಬುಲ್ ಲಂಜಾವ್ ರಾಷ್ಟ್ರೀಯ ಉದ್ಯಾನವು ವಿಶ್ವದಲ್ಲಿನ ಏಕೈಕ ತೇಲುವ ರಾಷ್ಟ್ರೀಯ ಉದ್ಯಾನವಾಗಿದೆ. ಈ ಉದ್ಯಾನವು ಸಾಂಗಾಯ್ನ (ರಾಜ್ಯಪ್ರಾಣಿ) ಅಥವಾ ಮಣಿಪುರ್ ಕಂದು ಕವಲ್ಗೊಂಬಿನ ಜಿಂಕೆಯ ಕೊನೆಯ ನೈಸರ್ಗಿಕ ರಕ್ಷಿತ ಸ್ಥಾನವಾಗಿದೆ.[3][4]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.