ಲೋಹಾಭ
ತುಲನಾತ್ಮಕವಾಗಿ ದುರ್ಬಲವಾದ ಲೋಹೀಯ ಮತ್ತು ಲೋಹವಲ್ಲದ ಗುಣಲಕ್ಷಣಗಳನ್ನು ಹೊಂದಿರುವ ರಾಸಾಯನಿಕ ಅಂಶ / From Wikipedia, the free encyclopedia
ಲೋಹಾಭಗಳೆಂದರೆ ಲೋಹ ಮತ್ತು ಅಲೋಹಗಳೆರಡರ ನಡುವಿನ ಗುಣಲಕ್ಷಣಗಳನ್ನು ತೋರುವ ಅಥವಾ ಅವೆರಡರ ಗುಣಲಕ್ಷಣಗಳನ್ನು ತೋರುವ ಮೂಲವಸ್ತುಗಳು. ಇವುಗಳ ವಿಭಿನ್ನವಾದ ಮತ್ತು ವಿಚಿತ್ರವಾದ ಗುಣಲಕ್ಷಣಗಳನ್ನು ತೋರುವ ಗುಣದಿಂದಾಗಿ ಇವುಗಳಿಗೆ ನಿಖರವಾದ ವ್ಯಾಖ್ಯೆಯನ್ನು ನೀಡುವುದು ಕಷ್ಟ. ಈ ವಿಶೇಷ ಗುಣದ ಹೊರತಾಗಿಯೂ ಇವು ರಸಾಯನಶಾಸ್ತ್ರದ ಸಾಹಿತ್ಯದಲ್ಲಿ ತಮ್ಮದೇ ಆದ ಸ್ಥಾನವನ್ನು ಹೊಂದಿವೆ.