ಯಾರು ಬೇಕಾದರೂ ಸಂಪಾದಿಸಬಲ್ಲ ಸ್ವತಂತ್ರ ವಿಶ್ವಕೋಶ From Wikipedia, the free encyclopedia
ವಿಕಿಪೀಡಿಯವು (ಇಂಗ್ಲಿಷ್: Wikipedia ) ಒಂದು ಅಂತರಜಾಲ-ಆಧಾರಿತ ಬಹುಭಾಷೀಯ ವಿಶ್ವಕೋಶವಾಗಿದೆ. ಹಾಗೆಯೇ ಇದು ಒಂದು ವಿಶ್ವಕೋಶೀಯ ಜಾಲತಾಣವು ಸಹ ಆಗಿದೆ.
ಜಾಲತಾಣದ ವಿಳಾಸ | wikipedia.org |
---|---|
ಘೋಷಣೆ | ಯಾರಾದರು ಸಂಪಾದಿಸಬಲ್ಲ ಸ್ವತಂತ್ರ ವಿಶ್ಚಕೋಶ |
ವಾಣಿಜ್ಯ ತಾಣ | ಅಲ್ಲ |
ಲಭ್ಯವಿರುವ ಭಾಷೆ | 287 ಸಂಪಾದನೆಗಳು[1] |
ಬಳಕೆದಾರರು(ನೊಂದಾಯಿತರೂ ಸೇರಿ) | 69,189 ಸಕ್ರಿಯ ಸಂಪಾದಕರು(ನವೆಂಬರ್ 2014),೮೮,೧೮೫ ಒಟ್ಟು ಸಂಪಾದಕರು. |
ವಿಷಯದ ಪರವಾನಗಿ | CC Attribution / Share-Alike 3.0 ಬಹುತೇಕ ಎಲ್ಲ ಪಠ್ಯ GFDLನಲ್ಲಿ ಕೂಡ ದ್ವಿ-ಪರವಾನಿಗೆ ಹೊಂದಿವೆ; ಚಿತ್ರ ಮಾಧ್ಯಮ ಪರವನಿಗೆ ವಿವಿಧತರ. |
ಬಳಸಿದ ಭಾಷೆ | PHP[2] |
ಒಡೆಯ | ವಿಕಿಮೀಡಿಯ ಫೌ಼ಂಡೇಷನ್ |
ಸೃಷ್ಟಿಸಿದ್ದು | ಜಿಮ್ಮಿ ವೇಲ್ಸ್, ಲ್ಯಾರಿ ಸ್ಯಾಂಗರ್ |
ಪ್ರಾರಂಭಿಸಿದ್ದು | ಜನವರಿ 15, 2001 |
ಅಲೆಕ್ಸಾ ಶ್ರೇಯಾಂಕ | 7 (ಡಿಸೆಂಬರ್ 2015[update]) |
ಸಧ್ಯದ ಸ್ಥಿತಿ | ಜಾರಿಯಲ್ಲಿದೆ |
ಇದು ಪ್ರಸ್ತುತ ವಿಕಿಮೀಡಿಯ ಫೌ಼ಂಡೇಷನ್ (wikimedia foundation) ಎಂಬ ಅಮೆರಿಕದ ಸ್ಯಾನ್ಫ್ರ್ಯಾ಼ನ್ಸಿಸ್ಕೊ ನಗರದಲ್ಲಿ ತನ್ನ ಕೇಂದ್ರಕಾರ್ಯಲಯವನ್ನು ಹೊಂದಿರುವ ಒಂದು ಲಾಭೋದ್ದೇಶರಹಿತ ಹಾಗೂ ದಾನಶೀಲ ಸಂಘಟನೆಯ ಮೇಲ್ವಿಚಾರಣೆಗೆ ಒಳಪಟ್ಟಿದೆ. ಇದರ ಸೇವೆಯು ಉಚಿತವಾಗಿದ್ದು, ಅಂತರಜಾಲ ಸಂಪರ್ಕವನ್ನು ಹೊಂದಿರುವ ಯಾರು ಬೇಕಾದರೂ ಸೇವೆಯನ್ನು ಪಡೆಯಬಹುದಾಗಿದೆ. ಪ್ರಸ್ತುತ ಇದು ಏಳನೇ ಅತಿ ಪ್ರಸಿದ್ಧ ಜಾಲತಾಣವಾಗಿದೆ (ಜನವರಿ ೨೦೧೫ ಕ್ಕೆ ಇದ್ದಂತೆ).
'ವಿಕಿಪೀಡಿಯ' ಎಂಬ ಪದವು ಒಂದು ಮಿಶ್ರಪದ (Portmanteau word) ಆಗಿದ್ದು, ಹವಾಯಿ ಭಾಷೆಯ 'ವಿಕಿ' (ಅಂದರೆ 'ಶೀಘ್ರ' ಎಂದರ್ಥ) ಹಾಗು ಇಂಗ್ಲಿಷ್ನ 'ಎನ್ಸೈಕ್ಲೊಪೀಡಿಯ' ಎಂಬ ಎರಡು ಪದಗಳು ಸೇರಿ ರಚನೆಯಾಗಿದೆ.
ವಿಕಿಪೀಡಿಯವು ಮೂಲತಃ ನ್ಯುಪೀಡಿಯ (Nupedia) ಎಂಬ ಇನ್ನೊಂದು ಇಂಗ್ಲಿಷ್ ವಿಶ್ವಕೋಶೀಯ ಜಾಲತಾಣದ ಯೋಜನೆಯಿಂದ ಮೂಡಿಬಂದಿತು. ಜಿಮ್ಮಿ ವೇಲ್ಸ್ (Jimmy Wales) ಮತ್ತು ಲ್ಯಾರಿ ಸ್ಯಾಂಗರ್ (Larry Sanger) ಎಂಬುವವರು ಇದನ್ನು ಜನವರಿ ೧೫, ೨೦೦೧ ರಂದು ಆರಂಭಿಸಿದರು. ಪ್ರಸ್ತುತ ಇದು ವಿಕಿಮೀಡಿಯ ಫೌಂಡೇಷನ್ ಎಂಬ ಒಂದು ಲಾಭೋದ್ದೆಶರಹಿತ ಸಂಸ್ಥೆಯ ಮೇಲ್ವಿಚಾರಣೆಗೆ ಒಳಪಟ್ಟಿದೆ.
ವಿಕಿಪೀಡಿಯಾದಲ್ಲಿರುವ ಮಾಹಿತಿಗಳನ್ನು ವಗೀಕರಿಸಿದಾಗ ಅವುಗಳಲ್ಲಿ ಸಂಸ್ಕ್ರತಿ ಮತ್ತು ಕಲೆ - ೩೦% ವ್ಯಕ್ತಿಗಳ ಚರಿತ್ರೆ - ೧೫% ಬೌಗೋಳಿಕ ಮತ್ತು ಸ್ಥಳ ಮಾಹಿತಿ -14% ಸಮಾಜ ಮತ್ತು ಸಮಾಜ ವಿಜ್ಞಾನ - ೧೨ % ಐತಿಹಾಸಿಕ ಘಟನೆಗಳು - ೧೧% ನೈಸರ್ಗಿಕ ಮತ್ತು ಬೌತ ವಿಜ್ಞಾನ - ೯% ತಂತ್ರಜ್ಞಾನ ಮತ್ತು ಅನ್ವಯಿಕ ವಿಜ್ಞಾನ - ೪% ಧರ್ಮ ಮತ್ತು ನಂಬಿಕೆ - ೨% ಆರೋಗ್ಯ - ೨% ಗಣಿತ ಮತ್ತು ಅದರ ತಂತ್ರಗಳು - ೧% ಚಿಂತನೆಗಳು ಮತ್ತು ತತ್ವಶಾಸ್ತ್ರ - ೧%
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.