ವಿಜಯನಗರ ಜಿಲ್ಲೆ
From Wikipedia, the free encyclopedia
ವಿಜಯನಗರ ಜಿಲ್ಲೆ ಭಾರತದ, ಕರ್ನಾಟಕ ರಾಜ್ಯದ ೩೧ನೇ ಜಿಲ್ಲೆ, ಇದು ಕಲ್ಯಾಣ -ಕರ್ನಾಟಕ ಪ್ರದೇಶದಲ್ಲಿದೆ. ಈ ಪ್ರದೇಶವನ್ನು ಬಳ್ಳಾರಿ ಜಿಲ್ಲೆಯಿಂದ ಪ್ರತ್ಯೇಕಿಸಿ ಹೊಸ ಜಿಲ್ಲೆಯಾಗಿಸಲಾಯಿತು. [1] [2] ೨ನೇ ಅಕ್ಟೋಬರ್ ೨೦೨೧ ರಂದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕೃತವಾಗಿ ಹೊಸ ಜಿಲ್ಲೆಯನ್ನು ಘೋಷಿಸಿದರು [3]
ಐತಿಹಾಸಿಕವಾಗಿ ಇದು ವಿಜಯನಗರ ಸಾಮ್ರಾಜ್ಯದ ಹಿಂದಿನ ರಾಜಧಾನಿಯಾಗಿತ್ತು ಹಂಪಿ ಮತ್ತು ವಿರೂಪಾಕ್ಷ ದೇವಸ್ಥಾನದ ಎಲ್ಲಾ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ . [4] [5]