From Wikipedia, the free encyclopedia
ದ ವಿಲ್ಸನ್ ಕಾಲೇಜ್,[1] ೧೮೩೨ ರಲ್ಲಿ ದಕ್ಷಿಣ ಮುಂಬಯಿನ ಚೌಪಾತಿಯಲ್ಲಿ ಸ್ಥಾಪಿಸಲ್ಪಟ್ಟಿತು. 'ವಿಲ್ಸನ್ ಕಾಲೇಜ್', ಭಾರತದಲ್ಲಿ ಬ್ರಿಟಿಷರಿಂದ ಸ್ಥಾಪಿಸಲ್ಪಟ್ಟ ಅತಿ ಪುರಾತನ ಕಾಲೇಜ್ ಗಳಲ್ಲೊಂದು. ಮುಂಬಯಿ ವಿಶ್ವವಿದ್ಯಾಲಯ ಅಸ್ಥಿತ್ವಕ್ಕೆ ಬರುವ ಎರಡೂವರೆ ದಶಕಗಳ ಮೊದಲೇ ಈ ಕಾಲೇಜ್ ಕೆಲಸಮಾಡುತ್ತಿತ್ತು. ೨೦೦೫ ರಲ್ಲಿ ಈ ಕಾಲೇಜಿಗೆ ಸರ್ಟಿಫಿಕೇಟ್ ದೊರೆಯಿತು. (National Assessment and Accreditation Council, NAAC) ಈ ಕಾಲೇಜ್, ಮುಂಬಯಿ ಉಪನಗರದ ಗಿರ್ಗಾಮ್ ಚೌಪಾತಿಯಲ್ಲಿದೆ. ೧೮೮೯ ರಲ್ಲಿ ಕಾಲೇಜ್ ಕಟ್ಟಡವನ್ನು ಜಾನ್ ಆಡಮ್ಸ್ ಎಂಬ ಕಟ್ಟಡ ಶಿಲ್ಪಿ ವಿಕ್ಟೋರಿಯನ್ ಗಾಥಿಕ್ ಶೈಲಿಯಲ್ಲಿ ನಿರ್ಮಿಸಿದರು. ಸ್ಥಾನೀಯವಾಗಿ (Grade III Heritage) ಹೆರಿಟೇಜ್ ಕಟ್ಟಡವೆಂದು ಗುರುತಿಸಲಾಗುತ್ತದೆ. 'ವಿಲ್ಸನ್ ಕಾಲೇಜ್',[2] ನಗರದಲ್ಲಿ ೨೦೧೧ ರಲ್ಲಿ, ಕಾಲೇಜ್ ಹೈಯರ್ ಸೆಕೆಂಡರಿ ಮತ್ತು ಪದವಿಪೂರ್ವ ತರಗತಿಗಳಿಗೆ ಗೆ ಹಲವಾರು ವಿಷಯಗಳನ್ನು ಒದಗಿಸಿತ್ತು. ವಿಶ್ವವಿದ್ಯಾಲಯದ ಸಹಾಯಕ ವಿಷಯಗಳು ಸೇರಿದ್ದವು. ಕಲೆ ಮತ್ತು ವಿಜ್ಞಾನವಲ್ಲದೆ ಸ್ವತಃ ಹಣ ಒದಗಿಸಿದ ಪಠ್ಯಕ್ರಮಗಳು.
ಭಾರತದಲ್ಲಿ ಪಾದ್ರಿ,ಜಾನ್ ವಿಲ್ಸನ್,[3] ೧೮೩೨ ರಲ್ಲಿ ಮುಂಬಯಿಗೆ ಫೆಬ್ರವರಿ, ೧೮೨೯ ರಲ್ಲಿ ಬಂದನಂತರ, ಅವರು ಮತ್ತು ಅವರ ಪತ್ನಿ ಮಾರ್ಗರೆಟ್ ವಿಲ್ಸನ್,[4] ಸ್ಥಾನೀಯ ಭಾಷೆಗಳಲ್ಲಿ ಪ್ರಮುಖವಾದ ಮರಾಠಿ ಕಲಿಯಲು ಆರಂಭಿಸಿದರು. ೧೮೨೯ ರಲ್ಲಿ ಮಾರ್ಗರೆಟ್ ಒಂದು ಶಾಲೆಯನ್ನು ಅಮ್ರೋಲಿ ಹೌಸ್ ಗಿರ್ಗಾಮ್ ನಲ್ಲಿ ಸ್ಥಾಪಿಸಿದಳು. ಮರಾಠಿಕಲಿಯಲು ಹಾಗೂ ಕಲಿಸಲು ಪ್ರಮುಖ ಮಾಧ್ಯಮ ಭಾಷೆಯಾಗಿತ್ತು. ೧೮೩೩ ರಲ್ಲಿ ಇಂಗ್ಲೀಷ್ ಮಾಧ್ಯಮ ದಲ್ಲಿ ಬೋರ್ಡಿಂಗ್ ಶಾಲೆ ಆರಂಭವಾಯಿತು. ಅದನ್ನೇ ಸೇಂಟ್ ಕೊಲಂಬಿಯ ಸ್ಕೂಲ್ ಎಂದು ಕರೆದರು. ಅಮ್ರೋಲಿ ಇಂಗ್ಲೀಷ್ ಸ್ಕೂಲ್ ಈಗಿನ ಕಾಲೇಜಿಗೆ ಪ್ರೇರಣೆಯಾಗಿ ಮೊದಲು ಆರಂಭಿಸಲ್ಪಟ್ಟಿತ್ತು.
೧೮೭೫ ರಲ್ಲಿ ರೆವೆರೆಂಡ್ ಡಾ.ವಿಲ್ಸನ್, ನಿಧನರಾದರು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.