ವೇಗದ ಬೌಲಿಂಗ್
From Wikipedia, the free encyclopedia
ವೇಗದ ಬೌಲಿಂಗ್ ಅನ್ನು ಕೆಲವೊಮ್ಮೆ ಪೇಸ್(ವೇಗ) ಬೌಲಿಂಗ್ ಎಂದು ಕೂಡ ಕರೆಯಲಾಗುತ್ತದೆ, ಇದು ಕ್ರಿಕೆಟ್ ಕ್ರೀಡೆಯಲ್ಲಿರುವ ಬೌಲಿಂಗ್ ನ ಎರಡು ಮುಖ್ಯ ವಿಧಾನಗಳಲ್ಲಿ ಒಂದಾಗಿದೆ. ಮತ್ತೊಂದು ಸ್ಪಿನ್ ಬೌಲಿಂಗ್ ಆಗಿದೆ. ವೃತ್ತಿಗಾರರನ್ನು ಸಾಮಾನ್ಯವಾಗಿ ವೇಗದ ಬೌಲರ್ ಗಳು, ಫಾಸ್ಟ್ಮನ್ , ಪೇಸ್ ಬೌಲರ್ ಗಳು ಅಥವಾ ಪೇಸ್ ಮನ್ ಗಳೆಂದು ಕರೆದರೂ ಕೂಡ, ಕೆಲವೊಮ್ಮೆ ಈ ಹೆಸರನ್ನು ಸ್ವಿಂಗ್ ಬೌಲರ್ ಸೀಮ್ ಬೌಲರ್ ನಂತಹ ಬೌಲರ್ ಆದ್ಯತೆ ನೀಡುವ ನಿರ್ದಿಷ್ಟವಾದ ವೇಗದ ಬೌಲಿಂಗ್ ತಂತ್ರವನ್ನು ಸೂಚಿಸಲು ಬಳಸಲಾಗುತ್ತದೆ.
Bowling techniques |
---|
|
Deliveries |
|
Historical styles |
|
ಗಟ್ಟಿಯಾಗಿರುವ ಕ್ರಿಕೆಟ್ ಚೆಂಡನ್ನು ಅತ್ಯಂತ ವೇಗದಲ್ಲಿ ಬೌಲ್ ಮಾಡುವುದು, ಹಾಗು ಅನಿಯತ ಶೈಲಿಯಲ್ಲಿ ಪಿಚ್ ಗೆ ತಾಗಿ ಪುಟಿಯುವಂತೆ ಚೆಂಡನ್ನು ಎಸೆಯುವುದು, ಅಥವಾ ಗಾಳಿಯ ಮೂಲಕ ಪಕ್ಕದ ಬದಿಯಲ್ಲಿ ಚೆಂಡು ಸಾಗುವಂತೆ ಮಾಡುವುದು, ವೇಗದ ಬೌಲಿಂಗ್ನ ಗುರಿಯಾಗಿದೆ. ಇವು ಬ್ಯಾಟ್ಸ್ಮನ್ ಗೆ ಸುಲಭವಾಗಿ ಚೆಂಡನ್ನು ಹೊಡೆಯಲು ಸಾಧ್ಯವಾಗದಂತೆ ಮಾಡುವ ಅಂಶಗಳಾಗಿವೆ. ಸಾಮಾನ್ಯವಾಗಿ ೧೩೬ ರಿಂದ ೧೫೦ ಕಿಲೋಮೀಟರ್/ಪ್ರತಿ ಗಂಟೆಗೆ (೮೫ ರಿಂದ ೯೫ ಪ್ರತಿಗಂಟೆಗೆ ಮೈಲು) ವ್ಯಾಪ್ತಿಯ ವೇಗದಲ್ಲಿ ಬೌಲಿಂಗ್ ಮಾಡಲಾಗುತ್ತದೆ. ಇಲ್ಲಿಯವರೆಗು ಅನಧಿಕೃತವಾಗಿ ದಾಖಲಿಸಲಾದ ಅತ್ಯಂತ ವೇಗವಾದ ಬೌಲಿಂಗ್ ಎಸೆತವನ್ನು 101.9 mph (164.0 km/h) ಎಂದು ಕಾಲಮಾಪನ ಮಾಡಲಾಗಿದ್ದು, ಇದನ್ನು ಪಾಕಿಸ್ತಾನದ ಮೊಹಮದ್ ಸಮಿ ಯವರು ಭಾರತದ ವಿರುದ್ಧ ಮಾಡಿದ್ದರು.[1] ಅಧಿಕೃತವಾಗಿ ದಾಖಲಿಸಲಾದ ಅತ್ಯಂತ ವೇಗದ ಬೌಲಿಂಗ್ ೧೬೧.೩ ಕಿಲೋಮೀಟರ್/ಪ್ರತಿ ಗಂಟೆ (೧೦೦.೨ ಪ್ರತಿ ಗಂಟೆಗೆ ಮೈಲುಗಳು) ಎಂದು ಕಾಲಮಾಪನ ಮಾಡಲಾಗಿದೆ. ಇದನ್ನು ಪಾಕಿಸ್ತಾನದ ಶೋಯೆಬ್ ಅಖ್ತರ್ ೨೦೦೩ ರ ಕ್ರಿಕೆಟ್ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ ಪಂದ್ಯದ ಸಂದರ್ಭದಲ್ಲಿ ಬೌಲ್ ಮಾಡಿದ್ದರು. ಈ ಎಸೆತದ ಕೊನೆಯಲ್ಲಿದ್ದ ಬ್ಯಾಟ್ಸ್ಮನ್ ನಿಕ್ ನೈಟ್ ಆಗಿದ್ದು, ಅವರು ಇದನ್ನು ಬಲಭಾಗಕ್ಕೆತಿರುಗಿಸಿದ್ದರು.[2] ಅನಂತರ ಇದೇ ವೇಗಕ್ಕೆ ಹೊಂದಿಕೆಯಾಗುವಂತೆ ಬ್ರೆಟ್ ಲೀ ಅವರು ಬೌಲಿಂಗ್ ಮಾಡಿದ್ದಾರೆಂದು ಹೇಳಲಾಗುತ್ತದೆ. ಆದಾಗ್ಯೂ, ರೇಡಾರ್ ಸಂಕೇತದ ಬಾಹ್ಯ ಪ್ರವೇಶದಿಂದಾಗಿ ಇದನ್ನು ತಪ್ಪು ದಾಖಲೆ ಎಂದು ಪರಿಗಣಿಸಲಾಯಿತು. ಎರಡು ಬ್ಯಾಕ್ ಅಪ್(ಬೆಂಬಲಿತ) ರೇಡಾರ್ ಗಳು ಈ ಎಸೆತದ ಸರಿಯಾದ ವೇಗವನ್ನು 142 km/h (88 mph) ಎಂದು ದಾಖಲಿಸಿಕೊಂಡಿದ್ದವು.[3]
ಕ್ರಿಕೆಟ್ ಆಟವನ್ನು ಆಡುವ ಬಹುಪಾಲು ರಾಷ್ಟ್ರಗಳಲ್ಲಿ ವೇಗದ ಬೌಲರ್ಗಳನ್ನು, ಬೆಂಬಲದ ಪಾತ್ರಗಳಲ್ಲಿ ನಿಧಾನ ಬೌಲರ್ ಗಳೊಂದಿಗೆ, ತಂಡದ ಬೌಲಿಂಗ್ ಆಕ್ರಮಣದ ಮೂಲಾಧಾರವೆಂದು ಪರಿಗಣಿಸಲಾಗುತ್ತದೆ. ಉಪಖಂಡದಲ್ಲಿ ಅದರಲ್ಲೂ ವಿಶೇಷವಾಗಿ ಭಾರತಮತ್ತು ಶ್ರೀಲಂಕಾದಲ್ಲಿ ಅದರ ವಿರುದ್ಧ ಸ್ಥಿತಿ ಸಾಮಾನ್ಯವಾಗಿ ನಿಜವಾಗಿರುತ್ತದೆ. ಇಲ್ಲಿ ವೇಗದ ಬೌಲರ್ ಗಳು ಪ್ರಧಾನವಾಗಿ ಸ್ಪಿನ್ನರ್ಗಳಿಗೆ ಚೆಂಡನ್ನು ಮೃದುಗೊಳಿಸುವ ಕಾರ್ಯವನ್ನಷ್ಟೇ ಮಾಡುತ್ತಾರೆ. ಅಂತಹ ರಾಷ್ಟ್ರಗಳಲ್ಲಿ ಬಳಸುವ ಪಿಚ್ಗಳ ಸ್ಥಿತಿಯು ಇದಕ್ಕೆ ಕಾರಣವಾಗಿರುತ್ತದೆ. ಇಂತಹ ಪಿಚ್ ಗಳು ವೇಗದ ಬೌಲರ್ ಗಳಿಗಿಂತ ಸ್ಪಿನ್ನರ್ಗಳಿಗೆ ಹೆಚ್ಚಿನ ಸಹಾಯವನ್ನು ಮಾಡುತ್ತವೆ. ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂತಹ ರಾಷ್ಟ್ರಗಳ ವೇಗದ ಬೌಲರ್ ಗಳಿಗೆ ಹೋಲಿಸಿದರೆ ಅವುಗಳ ಸ್ಪಿನ್ನರ್ಗಳ ಮಹೋನ್ನತ ಕೌಶಲಗಳನ್ನು ಬಿಂಬಿಸುತ್ತದೆ. ಇದಕ್ಕೆ ವಿರುದ್ಧವಾಗಿ ಇತರ ಪ್ರಮುಖ ಉಪಖಂಡ ರಾಷ್ಟ್ರವಾದ ಪಾಕಿಸ್ತಾನ್, ಅಂಜಿಕೆ ಉಂಟುಮಾಡುವ ವೇಗದ ಬೌಲರ್(ಪೇಸ್ಮನ್) ಗಳ ಅನೇಕ ಪೀಳಿಗೆಗಳನ್ನು ಉತ್ಪಾದಿಸಿದೆ. ಇದಕ್ಕೆ ಮುಖ್ಯ ಕಾರಣ ಆ ರಾಷ್ಟ್ರ ರಿವರ್ಸ್ ಸ್ವಿಂಗ್ ನಲ್ಲಿ ಹೊಂದಿರುವ ಕೌಶಲವಾಗಿದ್ದು, ವೇಗದ ಬೌಲರ್ಗಳಿಗೆ ಸಹಾಯಕವಾದ ಪಿಚ್ ಗಳನ್ನು ಹೊಂದಿರುವುದು ಕೂಡ ಆಗಿದೆ.