ಶಿಯೋಮಿ
ಚೀನಾದ ಎಲೆಕ್ಟ್ರಾನಿಕ್ಸ್ ಕಂಪನಿ / From Wikipedia, the free encyclopedia
39.9255°N 116.4416°E / 39.9255; 116.4416 ಶಿಯೋಮಿ ಕಂಪನಿಯು ಚೀನಾ ದೇಶದ ಖಾಸಗಿ ಸ್ವಾಮ್ಯದ ಚೀನಾದ ಸ್ಮಾರ್ಟ್ ಪೋನ್ ತಯಾರಿಕೆ ಕಂಪನಿಯಾಗಿದೆ.ಶಿಯೋಮಿ ಕಂಪನಿಯನ್ನು ಮಿ ರೆಡಮಿ ಎಂದುಸಂಬೋದಿಸಲಾಗುತ್ತದೆ.ಆದರೆ ಪ್ರಚಲಿತ ವಿದ್ಯಮಾನದಲ್ಲಿ ಶಿಯೋಮಿ ರೆಡಮಿ ಯನ್ನು ತನ್ನ ಪ್ರತ್ಯೇಕ ಅಂಗಸಂಸ್ಥೆಯನ್ನಾಗಿ ಮಾರ್ಪಡಿಸಿದೆ.[2] ಈ ಶಿಯೋಮಿ ಸಂಸ್ಥೆ ಬೀಜಿಂಗ್ನಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ. ಲೀ ಜುನ್ ಇದರ ಸಂಸ್ಥಾಪಕರು. ಶಿಯೋಮಿ ಕೇವಲ ಸ್ಮಾರ್ಟ್ ಫೋನ್ ಮಾತ್ರವಲ್ಲದೆ ಟಿವಿ, ಮೊಬೈಲ್ ಪರಿಕರಗಳು,ಬ್ಯಾಗ್,ಕನ್ನಡಕ, ಹೀಗೆ ಸಾವಿರಾರು ಉತ್ಪನಗಳನ್ನ ಚೀನಾದಲ್ಲಿ ಉತ್ಪಾದಿಸುತ್ತದೆ. ಆದರೆ ಆಯ್ದ ಕೇಲವೆ ಉತ್ಪನಗಳನ್ನು ಮಾತ್ರ ಭಾರತದಲ್ಲಿ ಮಾರಾಟ ಮಾಡುತ್ತಿದೆ.[3] ಶೀಯೊಮಿ 2018 ರಲ್ಲಿ ಪ್ರಪಂಚದ 4 ನೇ ಅತಿ ದೊಡ್ಡ ಸ್ಮಾರ್ಟ್ಫೋನ್ ತಯಾರಕ ಕಂಪನಿಯಾಗಿದ್ದು ಶೇಕಡಾ 8% ಮಾರುಕಟ್ಟೆಯ ಪಾಲುದಾರಿಕೆಯನ್ನು ಹೊಂದಿದ್ದು 2018ನೆ ವರ್ಷದಲ್ಲಿ ಶೇಕಡಾ ೨೬% ಅಭಿವೃದ್ಧಿ ಹೂಂದಿದೆ. ಅದೇ ಭಾರತದಲ್ಲಿ ಸ್ಯಾಮ್ಸಂಗ್ ಕಂಪನಿಯನ್ನು ಹಿಂದಿಕ್ಕಿ ಭಾರತದ ನಂ.1 ಸ್ಮಾರ್ಟ್ ಫೋನ್ ಕಂಪನಿಯಾಗಿ ಮುಂದುವರಿದಿದೆ ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಶೀಯೊಮಿ ಶೇಕಡಾ 26% ಪಾಲನ್ನು ಹೊಂದಿದೆ. ಚೀನಾದಲ್ಲಿ ತಯಾರಾದ ತನ್ನ ಉತ್ಪನಗಳನ್ನು ಭಾರತದಲ್ಲಿ ಜೋಡಿಸುವ ಕಾರ್ಯವನ್ನು ಕೈಗೊಂಡಿದ್ದು ಆಂಧ್ರಪ್ರದೇಶ ದಿಲ್ಲಿ ಇಂತಹ ಒಂದು ಜೋಡಣೆ ಕೇಂದ್ರವಿದ್ದು, ತನ್ನ ಉತ್ಪನಗಳ ಮಾರಾಟಕ್ಕಾಗಿ ಶೀಯೋಮಿ ಕೇವಲ ಆನ್ಲೈನ್ ಮತ್ತು ತನ್ನದೆ ಸ್ಟೋರ್ ಗೋಳನ್ನು ಮತ್ತು ದುರಸ್ತಿ ಕೇಂದ್ರವನ್ನು ತೆರೆದು ಉತ್ತಮ ಸೇವೆಯನ್ನು ನೀಡುವುದರ ಮೂಲಕ ಭಾರತದ ಗ್ರಾಹಕರ ಮನೆ ಗೆದ್ದಿದೆ. ಕೇಶನ್ಗಳುಪ್ಗಳು ಮತ್ತು ಸಂಬಂಧಿತ ಗ್ರಾಹಕ ಎಲೆಕ್ಟ್ರಾನಿಕ್ಸ್ಗಳನ್ನು ವಿನ್ಯಾಸಗೊಳಿಸುತ್ತದೆ, ಅಭಿವೃದ್ಧಿಪಡಿಸುತ್ತದೆ, ಮತ್ತು ಮಾರಾಟ ಮಾಡುತ್ತದೆ.
ಸಂಸ್ಥೆಯ ಪ್ರಕಾರ | ಖಾಸಗಿ |
---|---|
ಸ್ಥಾಪನೆ | 6 ಏಪ್ರಿಲ್ 2010; 5166 ದಿನ ಗಳ ಹಿಂದೆ (2010-೦೪-06) |
ಸಂಸ್ಥಾಪಕ(ರು) | Lei Jun |
ಮುಖ್ಯ ಕಾರ್ಯಾಲಯ | Haidian District, Beijing, China |
ವ್ಯಾಪ್ತಿ ಪ್ರದೇಶ | Selected markets List:
|
ಪ್ರಮುಖ ವ್ಯಕ್ತಿ(ಗಳು) | Lei Jun (Chinese) (CEO) Lin Bin (林斌) (Chinese)(president) Manu Kumar Jain (Indian)(Managing Director) |
ಉದ್ಯಮ | Consumer electronics Computer hardware |
ಉತ್ಪನ್ನ | Mobile phones Smartphones Tablet computers Smart home devices Laptops |
ಆದಾಯ | US$89.5 billion (2015) |
ಉದ್ಯೋಗಿಗಳು | Approximately 8,100[1] |
ಜಾಲತಾಣ | Mi.com Mi.com - International |
ಶಿಯೋಮಿಯು ಆಗಸ್ಟ್ 2011 ರಲ್ಲಿ ತನ್ನ ಮೊದಲ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿತು. ಲೀ ಜುನ್ ಅವರು ಕಂಪನಿಯ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು. ಫೋರ್ಬ್ಸ್ನ ಪ್ರಕಾರ ಇವರು ಚೀನಾದ ೨೩ನೆಯ ಶ್ರೀಮಂತವ್ಯಕ್ತಿ. ೨೦೧೪ರ ತನಕ 60 ಮಿಲಿಯನ್ ಗೂ ಹೆಚ್ಚು ಸ್ಮಾರ್ಟ್ ಫೋನ್ಗಳನ್ನು ಮಾರಾಟ ಮಾಡಲಾಗಿದೆ. ಈ ಕಂಪನಿಯಲ್ಲಿ 15,000 ಕ್ಕೂ ಹೆಚ್ಚು ನೌಕರರಿದ್ದಾರೆ. ಮುಖ್ಯಭೂಭಾಗಚೀನಾ, ಭಾರತ, ಮಲೇಷಿಯಾ, ಸಿಂಗಾಪುರ್ ಇಂಡೋನೇಷ್ಯಾ, ಫಿಲಿಪ್ಪೀನ್ಸ್ ಹಾಗು ದಕ್ಷಿಣ ಆಫ್ರಿಕಾದಲ್ಲಿ ಈ ಕಂಪನಿಯ ಶಾಖೆಗಳಿವೆ.[4] ಐಡಿಸಿಯ ಪ್ರಕಾರ, ಅಕ್ಟೋಬರ್ ೨೦೧೪ರಲ್ಲಿ ಶಿಯೋಮಿಯು ವಿಶ್ವದ ಮೂರನೇ ಅತಿದೊಡ್ಡ ಸ್ಮಾರ್ಟ್ಫೋನ್ ತಯಾರಕ ಕಂಪನಿಯಾಗಿದೆ. ಜುಲೈ ೨೦೧೬ರಲ್ಲಿ, ಲಿಯು ಷಿಶಿ, ವೂ ಕ್ಸುಬು ಮತ್ತು ಲಿಯು ಹಾರಾನ್ ಚೀನಾದಲ್ಲಿನ ಶಿಯೋಮಿ ರೆಡ್ಮಿ ಸರಣಿಯ ಮೊದಲ ರಾಯಭಾರಿಯಾದರು.