ಶಿವ
ಮಹಾದೇವ / From Wikipedia, the free encyclopedia
ಶಿವ (ಮಂಗಳಕರನು) ಹಾಗೂ ಮಹಾದೇವ (ದೇವರುಗಳಿಗೆ ದೇವರು) [1][2][3] ಶಿವನು ಹಿಂದೂ ಧರ್ಮದ ಪ್ರಮುಖ ದೇವರು.[4]. ಶಿವನು ತ್ರಿಮೂರ್ತಿಗಳಲ್ಲಿ ಒಬ್ಬನ್ನು, ಇತರರು ಬ್ರಹ್ಮ ಮತ್ತು ವಿಷ್ಣು,[5][6] ಶೈವ ಸಂಪ್ರದಾಯಲ್ಲಿ ಶಿವನೂ ಸರ್ವೋಚ್ಚನಾಗಿದ್ದಾನೆ, ಈತನು ಜಗತ್ತಿನ ಸೃಷ್ಟಿ, ರಕ್ಷಣೆ, ಮತ್ತು ಪರಿವರ್ತನೆಯ ದೈವ.[7] [1][2][3], ಆದಿಶಕ್ತಿ ಕೇಂದ್ರಿತ ಶಕ್ತ ಸಂಪ್ರದಾಯದಲ್ಲಿ ಶಿವನು ದೇವಿಯ ಪತಿ ಮತ್ತು ಸರಿಸಮನನಾಗಿದ್ದಾನೆ.[8][9], ಸ್ಮಾರ್ತ ಸಂಪ್ರದಾಯದ ಐದು ಪ್ರಮುಖ ದೇವರಲ್ಲಿ ಶಿವನು ಒಬ್ಬನು.[10] ಶಿವನು ಶಾಂತ ಹಾಗೂ ರೌದ್ರ ಸ್ವರೂಪನು, ಶಾಂತ ರೂಪದಲ್ಲಿ ಯೋಗಿಯಾಗಿ ವೈರಾಗ್ಯ ಜೀವನವನ್ನು ಮತ್ತು ಸಂಸಾರಿಯಾಗಿ ಪತ್ನಿ ಪಾರ್ವತಿ ಹಾಗೂ ಮಕ್ಕಳು ಗಣೇಶ, ಕಾರ್ತಿಕೇಯನ ಜೊತೆ ಇರವನು.[5], ರೌದ್ರ ರೂಪದಲ್ಲಿ ದುಷ್ಟರನ್ನು ಸಂಹರಿಸುವ ಮಹಾಕಾಲ, ಭೈರವ, ವೀರಭದ್ರ ಹಾಗೂ ಇತರ ರೂಪಗಳನ್ನು ಅವತರಿಸಿದ್ದಾನೆ. ಶಿವನು ಯೋಗ, ಧ್ಯಾನ ಮತ್ತು ಕಲೆಯ ದೇವರಾಗಿ ಆದಿಯೋಗಿ, ನಟರಾಜ ಎಂಬ ರೂಪವನ್ನು ಸಹ ಹೊಂದಿದ್ದಾನೆ.[11] ಶಿವನು ಪ್ರತಿಮಾಶಾಸ್ತ್ರದ ಪ್ರಕಾರ, ಕೊರಳಲ್ಲಿ ಸರ್ಪಗಳ ರಾಜ ವಾಸುಕಿ, ಕೇಶದಲ್ಲಿ ಅರ್ಧಚಂದ್ರ, ಗಂಗೆ, ಮತ್ತು ಹಣೆಯ ಮೇಲೆ ಮೂರನೇ ಕಣ್ಣು, ಕೈಯಲ್ಲಿ ತ್ರಿಶೂಲ ಮತ್ತು ಡಮರುನ್ನು ಹೊಂದಿದ್ದಾನೆ. ಶಿವನನ್ನು ಬಹುತೇಕವಾಗಿ ಲಿಂಗದ ರೂಪದಲ್ಲಿ ಪೂಜಿಸಲಾಗುತ್ತದೆ.[12]
ಶಿವ ಮಹಾದೇವ | |
---|---|
ಸರ್ವೋಚ್ಚ ದೇವರು (ಶೈವ)
| |
Member of ತ್ರಿಮೂರ್ತಿ | |
ಇತರ ಹೆಸರುಗಳು |
|
ಸಂಲಗ್ನತೆ |
|
ನೆಲೆ |
|
ಮಂತ್ರ |
|
ಆಯುಧ |
|
ಲಾಂಛನಗಳು |
|
ದಿನ |
|
ಸಂಗಾತಿ | ಪಾರ್ವತಿ/ಸತಿ [note 1] |
ಮಕ್ಕಳು | |
ವಾಹನ | ನಂದಿ[19] |
ಗ್ರಂಥಗಳು | |
ಹಬ್ಬಗಳು |
|
ಶಿವನಿಗೆ ವೇದಪೂರ್ವದ ಇತಿಹಾಸವಿದೆ.[21], ಶಿವನ ಸುಗುಣ ಆಕೃತಿಯು ವಿವಿಧ ಹಳೆಯ ವೈದಿಕವಲ್ಲದ ಮತ್ತು ವೈದಿಕ ದೇವತೆಗಳ ಸಂಯೋಜನೆಯಾಗಿ ಒಂದೇ ಪ್ರಮುಖ ದೇವರಾಗಿ ವಿಕಸನಗೊಂಡಿದೆ.[22][23] ಶಿವ ಸರ್ವ ಹಿಂದೂ ದೇವನಾಗಿ ಪ್ರಮುಖವಾಗಿ ಭಾರತ, ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ , ಇಂಡೋನೇಷಿಯಾ ದೇಶದಲ್ಲಿ ಪೂಜಿಸಲ್ಪಡುತ್ತಾನೆ.[24]