From Wikipedia, the free encyclopedia
'ಶ್ಯೋಕ್ ನದಿ (ಅಕ್ಷರಶಃ ಸಾವಿನ ನದಿ')[1] ಸಿಂಧೂ ನದಿಯ ಒಂದು ಉಪನದಿಯಾಗಿದೆ. ಇದು ಉತ್ತರ ಲಡಾಖ್ ಮೂಲಕ ಹರಿಯುತ್ತದೆ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ ಪ್ರವೇಶಿಸುತ್ತದೆ. ಇದು ಸುಮಾರು 550 km (340 mi) ಉದ್ದವಿದೆ.
ಶ್ಯೋಕ್ ನದಿಯು ಸಿಯಾಚಿನ್ ಹಿಮನದಿಯ ನಾಲಿಗೆಗಳಲ್ಲಿ ಒಂದಾದ ರೀಮೋ ಹಿಮನದಿಯಲ್ಲಿ ಹುಟ್ಟುತ್ತದೆ. ಶ್ಯೋಕ್ ನದಿಯ ಜೋಡಣೆಯು ಅತ್ಯಂತ ಅಸಾಮಾನ್ಯವಾದುದಾಗಿದೆ. ಇದು ರೀಮೋ ಹಿಮನದಿಯಿಂದ ಹುಟ್ಟಿಕೊಂಡು ನಂತರ ಆಗ್ನೇಯ ದಿಕ್ಕಿನಲ್ಲಿ ಹರಿಯುತ್ತದೆ ಮತ್ತು ಪಾಂಗೊಂಗ್ ಶ್ರೇಣಿಯನ್ನು ಸೇರಿಕೊಂಡು, ವಾಯವ್ಯ ದಿಕ್ಕಿನಲ್ಲಿ ತನ್ನ ಹಿಂದಿನ ಮಾರ್ಗಕ್ಕೆ ಸಮಾನಾಂತರವಾಗಿ ಹರಿಯುತ್ತದೆ. ನುಬ್ರಾ ನದಿಯ ಸಂಗಮದಲ್ಲಿ ಶ್ಯೋಕ್ ಕಣಿವೆಯು ವಿಸ್ತಾರಗೊಳ್ಳುತ್ತದೆ ಆದರೆ ಇದ್ದಕ್ಕಿದ್ದಂತೆ ಯಗುಲುಂಗ್ ಬಳಿ ಕಿರಿದಾದ ಕಮರಿಯಾಗಿ ಬದಲಾಗುತ್ತದೆ ಮತ್ತು ಬಾಲ್ಟಿಸ್ತಾನ್ ಪ್ರವೇಶಿಸುವ ಮುನ್ನ ಬೋಗ್ಡಾಂಗ್, ತುರ್ತುಕ್ ಹಾಗೂ ತ್ಯಾಕ್ಷಿ ಮೂಲಕ ಮುಂದುವರಿಯುತ್ತದೆ.[2] ಶ್ಯೋಕ್ ಕಣಿವೆಯ ಮತ್ತೆ ಸಾಲ್ಟೋರೋ ನದಿಯ ಸಂಗಮದ ಹತ್ತಿರ ಘುರ್ಸೇ ಕಣಿವೆಯಲ್ಲಿ ಅಗಲವಾಗುತ್ತದೆ. ಸ್ಕಾರ್ಡು ಪಟ್ಟಣದ ಪೂರ್ವದಲ್ಲಿರುವ ಕೆರಿಸ್ನಲ್ಲಿ ಈ ನದಿ ಸಿಂಧೂವನ್ನು ಸೇರುತ್ತದೆ.[3][4]
ಶ್ಯೋಕ್ ಕಣಿವೆಯು ಲಡಾಖ್ನಲ್ಲಿರುವ ಶ್ಯೋಕ್ ನದಿಯ ಕಣಿವೆ. ಈ ಕಣಿವೆಯು ನುಬ್ರಾ ಕಣಿವೆಯ ಹತ್ತಿರದಲ್ಲಿದೆ. ಲಡಾಖ್ ಶ್ರೇಣಿಯ ಮೇಲೆ ಖಾರ್ದುಂಗ್ ಲಾ ಲೇಹ್ನ ಉತ್ತರಕ್ಕೆ ಇದ್ದು ಶ್ಯೋಕ್ ಮತ್ತು ನುಬ್ರಾ ಕಣಿವೆಗಳ ಹೆಬ್ಬಾಗಿಲಂತಿದೆ. ಸಿಯಾಚಿನ್ ಗ್ಲೇಸಿಯರ್ ನಂತರದ ಕಣಿವೆಯ ಭಾಗದಲ್ಲಿದೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.