ಸದಸ್ಯ:Chaithra Pillareddy/sandbox
From Wikipedia, the free encyclopedia
ಕೆಪ್ಲರ್-೬೨ಎಫ್
![Thumb image](http://upload.wikimedia.org/wikipedia/commons/thumb/8/82/The_diagram_compares_the_planets_of_the_inner_solar_system_to_Kepler-62.jpg/640px-The_diagram_compares_the_planets_of_the_inner_solar_system_to_Kepler-62.jpg)
ಸೂಪರ್ ಅರ್ಥ್ ಎಕ್ಸೊಪ್ಲನೆಟ್ ಎಂದು ಕರೆಯಲಾದ ಕೆಪ್ಲರ್-೬೨ಎಫ್ (KOI-701.04) , ವಾಸಯೋಗ್ಯ ವಲಯದಲ್ಲಿ ಪರಿಭ್ರಮಿಸುತ್ತದೆ. ನಾಸಾದ ಕೆಪ್ಲೆರ್ ಉಪಗ್ರಹದಿಂದ ಕಂಡುಹಿಡಿದ ಐದು ಗ್ರಹಗಳ ಪೈಕಿ ಇದು ಒಂದು. ಈ ಸೌರಾತೀತ ಗ್ರಹ ಹೊರವಲಯದ ಕಕ್ಷೆಯಲ್ಲಿ ಪರಿಭ್ರಮಿಸುತ್ತಿದೆ. ಈ ಗ್ರಹವನ್ನು ಏಪ್ರಿಲ್ ೨೦೧೩ರಲ್ಲಿ ಕಂಡುಹಿಡಿದರು. ಇದು ಲೈರಾ[1] ಎಂಬ ನಕ್ಷತ್ರಪುಂಜದಲ್ಲಿದೆ ಮತ್ತು ಭೂಮಿಯಿಂದ ೧೨೦೦ ಜ್ಯೋತಿರ್ವರ್ಷಗಳ (ಸುಮಾರು ೧.೧೩೫x೧೦೨೬ ಕಿ.ಮಿ) ದೂರದಲ್ಲಿದೆ. ಈ ಸೌರಾತೀತ ಗ್ರಹ, ಬಂಡೆ ಮತ್ತು ನೀರಿನಿಂದ ತುಂಬಿಕೊಂಡಿದೆ.