ಸದಸ್ಯ:Makamsumukh1940456/ನನ್ನ ಪ್ರಯೋಗಪುಟ
From Wikipedia, the free encyclopedia
ಡಾನ್ ಬ್ಲಾಕಿ ಎಂಬ ವ್ಯಕ್ತಿ ಆಸ್ಟ್ರೇಲಿಯದ ದಕ್ಷಿಣ ಮೆಲ್ಬೋರ್ನಲ್ಲಿ ಏಪ್ರಿಲ್ ೫ನೆ ತಾರೀಕು ೧೮೮೨ರಂದು ಜನಿಸಿದನು. ಇವನು ಮುಂದೆ ೧೯೨೮ರಲ್ಲಿ ಆಸ್ಟ್ರೇಲಿಯ ಕ್ರಿಕೆಟ್ ತಂಡಕ್ಕೆ ಚೊಚ್ಚಲ ಪಂದ್ಯವನ್ನು ಆಡಿದನು, ಆಗ ಅವನಿಗೆ ೪೬ ವರ್ಷಗಳು ಆಗಿದ್ದು ಅವನು ಆಸ್ಟ್ರೇಲಿಯ ಕ್ರಿಕೆಟ್ ತಂಡಕ್ಕೆ ಚೊಚ್ಚಲ ಪಂದ್ಯವನ್ನು ಆಡಿದ ಅತಿ ಹೆಚ್ಚು ವಯಸ್ಸಿಗನೆಂಬ ಹಿರಿಮೆಗೆ ಪಾತ್ರನಾದನು. ಇದು ಅವನ ಛಲ ಹಾಗು ತನಗೆ ಕ್ರೀಡೆಯ ಮೇಲೆ ಇರುವ ಪ್ರೀತಿಯನ್ನು ತೋರುತ್ತದೆ.
ಡಾನ್ ಬ್ಲಾಕಿಯ ಜನನದ ದಿನಾಂಕದಿಂದ ೧೧೯ ವರ್ಷಗಳು ಮುಂದೆ ಹೋದರೆ, ಅಂದರೆ ಏಪ್ರಿಲ್ ೫ನೆ ತಾರೀಕು ೨೦೦೧ರಂದು ಸುಮುಖ್ ವಿ ಮಾಕಂ ಎಂಬ ವ್ಯಕ್ತಿ ಜನಸಿದನು, ಆ ವ್ಯಕ್ತಿಯು ಬೇರೆ ಯಾರು ಅಲ್ಲ ಅದು ನಾನೆ, ಅದಕ್ಕೆ ಏನೋ, ನಾನು ಸಹ ಕ್ರೀಡಾ ಪ್ರೀಮಿ. ನಾನು ನನ್ನ ಬಾಲ್ಯದಿಂದಲು ನನ್ನ ಗೆಳೆಯರೊಡನೆ ಕೂಡಿ ಬಹಳಷ್ಟು ಬಗೆಯ ಆಟಗಳನ್ನು ಆಡುತ್ತಿದ್ದೆ, ಕಣ್ಣಮುಚ್ಚಾಲೆ,ಲಾಕ್ ಆಂಡ್ ಕೀ, ಚೆಸ್, ಚೌಕ ಬಾರ, ಕೇರಂ ಅವುಗಳಲ್ಲಿ ಕೆಲವು.ನನಗೆ ಬಹಳ ಇಷ್ಟವಾಗುತಿದ್ದ ಆಟದಲ್ಲಿ ಅಟಗುಣಿಮನೆ ಒಂದು. ಈ ಆಟವನ್ನು ನಾನು ನನ್ನ ಮುತ್ತಜ್ಜಿಯ ಒಡನೆ ಆಡುತ್ತಿದ್ದೆ, ಈ ಆಟವನ್ನು ಅವರೆ ನನಗೆ ಹೇಳಿ ಕೊಟ್ಟದ್ದು. ಭಾನುವಾರಗಳೊಂದು ನಾನು ನನ್ನ ಅಣ್ಣ ಕೂಡಿ ಕಂಪ್ಯುಟರಿನಲ್ಲಿ ಆಟವಾಡುತ್ತಿದ್ದೆವು. ಹೀಗೆ ನಾನು ನನ್ನ ಹೆಚ್ಚಿನ ಬಾಲ್ಯವನ್ನು ಆಟ ಮತ್ತು ಕ್ರೀಡೆಯಲ್ಲಿಯೆ ಕಳಿದಿದ್ದೇನೆ. ಅಂತಹ ಬಾಲ್ಯವು ನನ್ನ ಪುಟ್ಟ ಜೀವನದ ಅತಿ ಸುಂದರ ಕ್ಷಣಗಳು.