From Wikipedia, the free encyclopedia
ಚನ್ನತಿಮ್ಮಯ್ಯ ಹೊನ್ನಪ್ಪ ಗೌಡ ಕಬಡ್ಡಿ ಆಟಗಾರ. ಇವರು ಕರ್ನಾಟಕದಿಂದ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಪಡೆದ ಮೊದಲ ಕಬಡ್ಡಿ ಆಟಗಾರ.
ಸಿ. ಹೊನ್ನಪ್ಪ ಗೌಡ | |
---|---|
ಜನನ | 15 ಮೇ 1973 |
ವೃತ್ತಿ | ಕಬಡ್ಡಿ ಕೋಚ್ |
ಪ್ರಮುಖ ಪ್ರಶಸ್ತಿ(ಗಳು) | ಏಕಲವ್ಯ ಪ್ರಶಸ್ತಿ, ಅರ್ಜುನ ಪ್ರಶಸ್ತಿ |
ಬಾಳ ಸಂಗಾತಿ | ದೀಪ್ತಿ |
ಮಕ್ಕಳು | 2 |
೧೩ನೇ ವರ್ಷದಲ್ಲಿ ಇವರಿಗೆ ಕಬಡ್ಡಿ ಆಟದ ಮೇಲೆ ಆಸಕ್ತಿ ಬೆಳೆಯಿತು. ಇವರ ಅಣ್ಣ ಸಿ.ಗೋವಿಂದರಾಜ್ರವರು ಕಬ್ಬಡಿ ಆಟಗಾರರಾಗಿದ್ದರು. ಕ್ರೀಡಾ ಕೋಟಾ ಉಪಯೋಗಿಸಿ ಉದ್ಯೋಗವನ್ನು ಪಡೆದ ಅಣ್ಣನ ಜೀವನ, ಹುಡುಗ ಹೊನ್ನಪ್ಪರವರಿಗೆ ಸ್ಫೂರ್ತಿ ನೀಡಿತು. ಅಣ್ಣನಿಂದ ಪ್ರೇರಣೆಗೊ೦ಡ ಹೊನ್ನಪ್ಪ, ಸಣ್ಣ ವಯಸಿನಲ್ಲಿಯೇ ಕಬ್ಬಡಿಯ ಆಟ ಕಲಿಯಲು ಪ್ರಾರಂಭಿಸಿದರು.[1] ಅವರು ಬೆಂಗಳೂರು ಮಾರುತಿ ಕಬಡ್ಡಿ ಕ್ಲಬ್ಗೆ ಸೇರಿದರು. ಹೊನ್ನಪ್ಪರವರು ವೇಗವಾಗಿ ಚಲಿಸುವ ಸಾಮರ್ಥ್ಯವನ್ನು ಮಾಜಿ ಬಿ.ಇ.ಎಲ್ ಉದ್ಯೋಗಿ, ಎಸ್.ಎಲ್. ಭಟ್ ಗಮನಿಸಿದರು. ೧೯೯೦ರಲ್ಲಿ ತನ್ನ ೧೭ ವರ್ಷದಲ್ಲಿ ವಿಜಯವಾಡಾ, ಆಂಧ್ರ ಪ್ರದೇಶದಲ್ಲಿ ನಡೆದ ೩೯ನೇಯ ಹಿರಿಯ ರಾಷ್ಟ್ರೀಯ ಚಾಂಪಿಯನ್ಷಿಪ್ನಲ್ಲಿ, ರಾಜ್ಯವನ್ನು ಪ್ರತಿನಿಧಿಸುವ ಅವಕಾಶ ಪಡೆದು, ಕರ್ನಾಟಕ ರಾಜ್ಯ ತಂಡದಲ್ಲಿ ಸ್ಥಾನ ಪಡೆದರು. ೧೯೯೧ರಲ್ಲಿ ಇಂಡಿಯನ್ ಟೆಲಿಫೋನ್ ಇಂಡಸ್ಟ್ರಿಯಲ್ಲಿ ಉದ್ಯೋಗಿಯಾಗಿ, ಇಲಾಖೆಯಿಂದ ಒದಗಿಸಲಾದ ಬೂಟುಗಳನ್ನು ಉಪಯೋಗಿಸಿ ಆಡಲಾರಂಭಿಸಿದರು.
ಮೂರು ರಾಷ್ಟ್ರೀಯ ಆಟಗಳು ಮತ್ತು ಎರಡು ಫ಼ೆಡರೇಶನ್ ಕಪ್ಗಳ ನಂತರ, ಹೊನ್ನಾಪ್ಪರವರಿಗೆ ವಿಜಯ ಬ್ಯಾಂಕ್ನಿಂದ ಉದ್ಯೋಗದ ವಿಚಾರವಾಗಿ ಕರೆ ಬಂದಿತು. ೧೯೯೫ರಲ್ಲಿ ಚೆನ್ನೈನಲ್ಲಿ ಸೆವೆಂತ್ ಸೌತ್ ಏಷ್ಯನ್ ಫ಼ೆಡರೇಶನ್ (ಎಸ್.ಎ.ಎಫ಼್.) ಕ್ರೀಡಾಕೂಟಕ್ಕಾಗಿ ಹೊನ್ನಪ್ಪ ಭಾರತೀಯ ತಂಡದಲ್ಲಿ ಸ್ಥಾನ ಪಡೆದುಕೊಂಡರು ಮತ್ತು ಭಾರತಕ್ಕೆ ಚಿನ್ನದ ಪದಕ ಗೆದ್ದು, ತಂಡದ ಉಪ-ನಾಯಕರಾಗಿ ಯಶಸ್ಸು ಪಡೆದರು ಮತ್ತು ಪ್ರಚಾರವು ಮುಂದುವರೆಯಿತು. ಒಂದು ಕ್ಲೆರಿಕಲ್ ಗ್ರೇಡ್ನಿಂದ ಹೊನ್ನಪ್ಪರವರು ೧೯೯೬ರಲ್ಲಿ ಸಹಾಯಕ ವ್ಯವಸ್ಥಾಪಕರಾದರು ಮತ್ತು ಬ್ಯಾಂಕ್ ಒದಗಿಸುವ ಸೌಕರ್ಯಗಳ ಅತ್ಯುತ್ತಮ ಅನುಭವವನ್ನು ಪಡೆದುಕೊಂಡರು. ಇತ್ತೀಚೆಗೆ ಮುಕ್ತಾಯಗೊಂಡ ಉದ್ಘಾಟನಾ ಬ್ಯಾಂಕುಗಳ ಒಲಿಂಪಿಯಾಡ್ನ ಕಬಡ್ಡಿ ಸಮಾರಂಭದಲ್ಲಿ ವಿಜಯ ಬ್ಯಾಂಕ್ನೊಂದಿಗೆ "ಅತ್ಯುತ್ತಮ ಕ್ಯಾಚರ್" ಗೌರವವನ್ನು ಪಡೆದುಕೊಂಡಿದಾರೆ . ಮಾಜಿ ಭಾರತೀಯ ಕಬಡ್ಡಿ ನಾಯಕ ೧೮ ಜೂಲೈ ೨೦೧೫ರಂದು ಪ್ರೊ-ಕಬಡ್ಡಿ ಲೀಗ್ನ ಎರಡನೇ ಋತುವಿನಲ್ಲಿ ದೆಹಲಿ ದಬಾಂಗ್ ತಂಡದ ತರಬೇತುದಾರರಾಗಿದ್ದರು.[2]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.