ಸುರಹೊನ್ನೆ ಎಣ್ಣೆ
ಇದು ನಿತ್ಯಹರಿದ್ವರ್ಣದ ಮರ / From Wikipedia, the free encyclopedia
ಪುನ್ನಾಗ/ಹೊನ್ನೆ ಮರ ಬೀಜದಿಂದ ಎಣ್ಣೆಯನ್ನು ತೆಗೆಯುವುದಕ್ಕೆ ಆಗುತ್ತದೆ. ಪುನ್ನಾಗ ಮರ ಗಟ್ಟಿಫೆರೆ ಸಸ್ಯ ಕುಟುಂಬಕ್ಕೆ ಸೇರಿದ ಮರ. ಈ ಮರದ ಸಸ್ಯಶಾಸ್ತ್ರದ ಹೆಸರು ಕ್ಯಾಲೋಫೈಲಮ್ ಇನೊಫೈಲಮ್ (Calophyllum inophyllum Linn). ಆಂಗ್ಲ ಭಾಷೆಯಲ್ಲಿ ಇದರ ಸಾಧಾರಣ ಹೆಸರು ಅಲೆಕ್ಸಾಡ್ರಿಯನ್ ಲಾರಾ (Alexandrian laura). ಇದರ ಹುಟ್ಟು ಸ್ಥಾನ ಉಷ್ಣವಲಯ ಏಷ್ಯಾ ಮತ್ತು ಪೆಸಿಫಿಕ್ ತೀರ ಪ್ರಾಂತ್ಯ[1]. ಮಲೇಷಿಯಾ (malaysia), ಪೊಲಿನೆಷಿಯ (polynesia) ಪ್ರಾಂತ್ಯ ದಲ್ಲಿಯು ಕಂಡು ಹಿಡಿಯಲಾಗಿದೆ. ಪುನ್ನಾಗ ಮರ ಆಫ್ರಿಕ,ಭಾರತ ದೇಶಗಳಲ್ಲಿ ಇದು ಹೆಚ್ಚಾಗಿ, ಸ್ವಾಭಾವಿಕವಾಗಿ ಬೆಳೆಯುತ್ತದೆ. ಆಗ್ನೇಯ ಏಷೀಯಾ ದೇಶಗಳಿಂದ ಇತರ ಪ್ರಾಂತ್ಯಗಳಿಗೆ ವ್ಯಾಪಕವಾಗಿ ಹರಡಿದೆ.[2] ಸಮುದ್ರ ತೀರ ಪ್ರಾಂತ್ಯಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ.