![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/e/ef/Selena_Gomez_2009.jpg/640px-Selena_Gomez_2009.jpg&w=640&q=50)
ಸೆಲೆನಾ ಗೊಮೆಜ್
From Wikipedia, the free encyclopedia
ಸೆಲೆನಾ ಮಾರೀ ಗೊಮೆಜ್ (ಜನನ ಜುಲೈ 22, 1992)[2] ಒಬ್ಬ ಅಮೇರಿಕನ್ ನಟಿ ಮತ್ತು ಗಾಯಕಿ. ಈಕೆ ಎಮ್ಮಿ ಪ್ರಶಸ್ತಿ ವಿಜೇತ ಡಿಸ್ನಿ ವಾಹಿನಿಯ ಮೂಲ ಸರಣಿ, ವಿಸರ್ಡ್ಸ್ ಆಫ್ ವೆವರ್ಲಿ ಪ್ಲೇಸ್ ನಲ್ಲಿನ ಅಲೆಕ್ಸ್ ರುಸ್ಸೋ ಪಾತ್ರದಿಂದ ಚಿರಪರಿಚಿತ. ಈಕೆ ಕಿರುತೆರೆಯ ಅನದರ್ ಸಿಂಡ್ರೆಲ್ಲಾ ಸ್ಟೋರಿ ಮತ್ತು ಪ್ರಿನ್ಸೆಸ್ಸ್ ಪ್ರೊಟೆಕ್ಷನ್ ಪ್ರೊಗ್ರಾಮ್ ಎಂಬ ಕಿರುಚಿತ್ರಗಳಲ್ಲಿ ನಟಿಸಿದ್ದಾಳೆ.
Quick Facts ಸೆಲೆನಾ ಗೊಮೆಜ್, ಹಿನ್ನೆಲೆ ಮಾಹಿತಿ ...
ಸೆಲೆನಾ ಗೊಮೆಜ್ | |
---|---|
![]() Selena Gomez attending "The 6th Annual Hollywood Style Awards" in Beverly Hills, California on October 10, 2009. | |
ಹಿನ್ನೆಲೆ ಮಾಹಿತಿ | |
ಜನ್ಮನಾಮ | Selena Marie Gomez |
ಸಂಗೀತ ಶೈಲಿ | Pop, dance, rock, alternative |
ವೃತ್ತಿ | Actress, singer, songwriter |
ಸಕ್ರಿಯ ವರ್ಷಗಳು | 2002–present |
Labels | Hollywood Records (2008-present) |
Associated acts | Selena Gomez & the Scene, Demi Lovato |
ಅಧೀಕೃತ ಜಾಲತಾಣ | Offical Website[1] |
Close
ಡಿಸ್ನಿಗೆ ಮುಂಚೆ, ಬರ್ನೆಯ್ & ಫ್ರೆಂಡ್ಸ್ ನಲ್ಲಿ ಬಾಲ ನಟಿಯಾಗಿ ಪಾತ್ರ ಮಾಡಿದ್ದಾಳೆ.' ಅವಳು 2008ರಲ್ಲಿ, ಹಾಲಿವುಡ್ ರೆಕಾರ್ಡ್ಸ್ ಜೊತೆ ಒಂದು ಧ್ವನಿಮುದ್ರಿಕೆ ಒಪ್ಪಂದಕ್ಕೆ ಸಹಿ ಹಾಕಿದಳು ಮತ್ತು ಟಿಂಕರ್ ಬೆಲ್ , ಅನದರ್ ಸಿಂಡ್ರೆಲ್ಲಾ ಸ್ಟೋರಿ ಮತ್ತು ವಿಸರ್ಡ್ಸ್ ಆಫ್ ವೇವೆರ್ಲಿ ಪ್ಲೇಸ್ ನ ಧ್ವನಿ ಮುದ್ರಣಗಳಿಗೆ ತನ್ನ ಧ್ವನಿಯನ್ನು ನೀಡಿದ್ದಾಳೆ. ಅವಳ ತಂಡ, ಸೆಲೆನಾ ಗೊಮೆಜ್ & ದಿ ಸೀನ್, ತಮ್ಮ ಮೊದಲ ಸ್ಟುಡಿಯೋ ಆಲ್ಬಮ್ ಕಿಸ್ & ಟೆಲ್ ಅನ್ನು ಸೆಪ್ಟೆಂಬರ್ 29, 2009ರಲ್ಲಿ ಬಿಡುಗಡೆ ಮಾಡಿತು.[3]