ಸೌರ ಶಕ್ತಿ
ಸೂರ್ಯನಿಂದ ಬರುವ ಶಕ್ತಿ / From Wikipedia, the free encyclopedia
ಸೂರ್ಯನ ಕಿರಣಗಳ ಶಾಖ ಮತ್ತು ಬೆಳಕಿನಿಂದ ಸಿಗುವ ಚೈತನ್ಯವನ್ನು (energy) ವಿವಿಧ ತಂತ್ರಜ್ಞಾನಗಳನ್ನು ಬಳಸಿ ಮಾನವನ ಉಪಯೋಗಕ್ಕೆ ಅನುಕೂಲವಾಗುವಂತೆ ಮಾರ್ಪಡಿಸಿ ಪಡೆಯುವುದೇ ಸೌರಶಕ್ತಿ.[1] ಸೌರಶಕ್ತಿಯು ನವೀಕರಿಸಬಹುದಾದ ಸಂಪನ್ಮೂಲವಾಗಿದೆ, ಏಕೆಂದರೆ ಅದು ಬಳಕೆಯಾಗುವ ದರದಲ್ಲಿಯೇ ಪುನಃ ಭರ್ತಿಯಾಗುತ್ತದೆ. ಸೌರ ದ್ಯುತಿವಿದ್ಯುಜ್ಜನಕ ಕೋಶಗಳು (ಎಸ್.ಪಿ.ವಿ - ಸೋಲಾರ್ ಪೋಟೋ ವೋಲ್ಟಾಯಿಕ್ ಕೋಶ) ನೇರವಾಗಿ ಸೂರ್ಯನ ಬೆಳಕಿನಿಂದ ವಿದ್ಯುತ್ ಆಗಿ ಪರಿವರ್ತಿಸುತ್ತದೆ. ಕೇಂದ್ರೀಕೃತ ಸೌರ ಶಕ್ತಿ (ಸಿ.ಎಸ್.ಪಿ) ವ್ಯವಸ್ಥೆಗಳು ಪರಿವರ್ತನೆ ಪ್ರಕ್ರಿಯೆಗೆ ಪರೋಕ್ಷ ವಿಧಾನವನ್ನು ಬಳಸುತ್ತವೆ. ಎಸ್.ಪಿ.ವಿ ಮತ್ತು ಸಿ.ಎಸ್.ಪಿಗಳನ್ನು ಹೊರತುಪಡಿಸಿ, ಡೈ-ಸೆನ್ಸಿಟೈಜ್ಡ್ ಸೌರ ಕೋಶಗಳು, ದೀಪಕ ಸೌರ ಸಾಂದ್ರತೆಗಳು, ಜೈವಿಕ-ಹೈಬ್ರಿಡ್ ಸೌರ ಕೋಶಗಳು, ಫೋಟಾನ್ ವರ್ಧಿತ ಥರ್ಮೋನಿಕ್ ಹೊರಸೂಸುವಿಕೆ ವ್ಯವಸ್ಥೆಗಳು ಇನ್ನೂ ಮುಂತಾದ ಇತರ ಹೊಸ ತಂತ್ರಗಳು ಕೂಡ ಇವೆ.