ಸ್ಯಾನ್ ಹೋಸೆ, ಕ್ಯಾಲಿಫೋರ್ನಿಯಾ
From Wikipedia, the free encyclopedia
ಸ್ಯಾನ್ ಹೋಸೆ (pronounced /ˌsænhoʊˈzeɪ/) (ಸ್ಪ್ಯಾನಿಷ್ ಭಾಷೆಯಲ್ಲಿ St. ಜೋಸೆಫ್ ಎಂದರ್ಥ) ಕ್ಯಾಲಿಫೋರ್ನಿಯಾದಲ್ಲಿ ಮೂರನೇ-ಬೃಹತ್ ಮಹಾನಗರವಾಗಿ, ಯುನೈಟೆಡ್ ಸ್ಟೇಟ್ಸ್ನಲ್ಲಿ ಹತ್ತನೇ-ಬೃಹತ್ ನಗರವಾಗಿದೆಯಲ್ಲದೇ, ಸಾಂಟಾ/ತಾ ಕ್ಲಾರಾ ಕೌಂಟಿಯ ಕೌಂಟಿ ಜಿಲ್ಲೆಯಾಗಿದೆ. ರಾಷ್ಟ್ರದಲ್ಲಿಯೇ 31ನೇ-ಅತಿದೊಡ್ಡ ಮಹಾನಗರವಲಯಕ್ಕೆ ಆಸರೆಯಾಗಿರುವ ನಗರವು, ಕೊಲ್ಲಿ/ಬೇ ಪ್ರದೇಶದ ದಕ್ಷಿಣತುದಿಯಲ್ಲಿರುವ, 7.4 ದಶಲಕ್ಷ ಜನರಿರುವ ಪ್ರದೇಶವಾಗಿದೆ.[4] ಒಂದು ಕಾಲದಲ್ಲಿ ಸಣ್ಣ ಕೃಷಿಆಧಾರಿತ ನಗರವಾಗಿದ್ದ ಸ್ಯಾನ್ ಹೋಸೆ, 1950ರ ದಶಕದಿಂದ ಪ್ರಸ್ತುತದವರೆಗೆ ಉಪನಗರಗಳಲ್ಲಿನ ಹೊಸ ವಸತಿಪ್ರದೇಶಗಳೆಡೆ ಧಾವಿಸುವ ನವವಾಸಿಗಳನ್ನು ಆಕರ್ಷಿಸುವ ಚುಂಬಕಶಕ್ತಿಯಾಗಿ ಪರಿಣಮಿಸಿದೆ. ಜನಸಂಖ್ಯೆ, ಭೂವಿಸ್ತೀರ್ಣ ಹಾಗೂ ಕೈಗಾರಿಕಾ ಅಭಿವೃದ್ಧಿಗಳಲ್ಲಿ ಸ್ಯಾನ್ ಹೋಸೆ ಕೊಲ್ಲಿ/ಬೇ ಪ್ರದೇಶದ ಅತಿದೊಡ್ಡ ಮಹಾನಗರವಾಗಿದೆ. ಜನವರಿ 1, 2010ರ ವೇಳೆಗೆ ಇಲ್ಲಿನ ಅಂದಾಜು ಜನಸಂಖ್ಯೆ 1,023,083 ಇದ್ದು ಸ್ಯಾನ್ ಹೋಸೆ ಅನ್ನು 10ನೇ ಅತಿದೊಡ್ಡ U.S. ಮಹಾನಗರವಾಗಿಸಿದೆ.[3]
City of San Jose | |
---|---|
City | |
Nickname: S.J. | |
Motto: Capital of Silicon Valley | |
Country | United States |
State | ಕ್ಯಾಲಿಫೊರ್ನಿಯ |
County | Santa Clara County |
Pueblo founded | November 29, 1777 |
Incorporated | March 27, 1850 |
Government | |
• Type | Charter city, Mayor-council |
• Mayor | Chuck Reed |
• Vice Mayor | Judy Chirco |
• City Manager | Debra Figone |
• Senate | List of Senators
|
• Assembly | Assembly List
|
Area | |
• City | ೧೭೮.೨ sq mi (೪೬೧.೫ km2) |
• Land | ೧೭೪.೯ sq mi (೪೫೨.೯ km2) |
• Water | ೩.೩ sq mi (೮.೬ km2) |
• Urban | ೪೪೭.೮೩ sq mi (೭೧೬.೫೩ km2) |
• Metro | ೨,೬೯೪.೭ sq mi (೬,೯೭೯.೪ km2) |
Elevation | ೮೫ ft (೨೬ m) |
Population (2010)[3] | |
• City | ೧೦,೨೩,೦೮೩(೧೦th) |
• Density | ೫೭೫೮.೧/sq mi (೨,೨೨೩.೨೧/km2) |
• Metro | ೧೮,೩೯,೭೦೦ (MSA ೭/೧/೦೯) |
• Demonym | San Josean |
Time zone | UTC−8 (PST) |
• Summer (DST) | UTC−7 (PDT) |
ZIP code | 95101–95103, 95106, 95108–95139, 95141, 95142, 95148, 95150–95161, 95164, 95170–95173, 95190–95194, 95196 |
Area code | 408 |
FIPS code | 06-68000 |
GNIS feature ID | 1654952 |
Website | www.sanjoseca.gov |
ನವೆಂಬರ್ 29, 1777ರಂದು ಎಲ್ ಪ್ಯುಯೆಬ್ಲೋ ಡೆ ಸ್ಯಾನ್ ಹೋಸೆ ಡೆ ಗ್ವಾಡಾಲುಪೆ/El Pueblo de San José de Guadalupe ಎಂಬ ಹೆಸರಿನಿಂದ ನಂತರ ಅಲ್ಟಾ ಕ್ಯಾಲಿಫೋರ್ನಿಯಾವಾಗಿ ಹೆಸರಿಸಲ್ಪಟ್ಟ ನ್ಯುಯೆವಾ ಕ್ಯಾಲಿಫೋರ್ನಿಯಾದ ಸ್ಪ್ಯಾನಿಷ್ ವಸಾಹತುಗಳಲ್ಲಿನ ಪ್ರಥಮ ಪಟ್ಟಣವಾಗಿ ಸ್ಯಾನ್ ಹೋಸೆ ಅನ್ನು ಸ್ಥಾಪಿಸ/ಕಂಡುಹಿಡಿಯಲಾಯಿತು.[5] ಈ ಮಹಾನಗರವು ಸ್ಯಾನ್ ಫ್ರಾನ್ಸಿಸ್ಕೋ ಹಾಗೂ ಮಾಂಟೆರೆಗಳಲ್ಲಿನ ಸ್ಪ್ಯಾನಿಷ್ ಸೇನಾನೆಲೆಗಳನ್ನು ಬೆಂಬಲಿಸುವ ಕೃಷಿ ಸಮುದಾಯವಾಗಿ ನೆರವಾಗುತ್ತಿತ್ತು. ಕ್ಯಾಲಿಫೋರ್ನಿಯಾವು 1850ರಲ್ಲಿ ರಾಜ್ಯದ ಸ್ಥಾನಮಾನ ಪಡೆದಾಗ, ಸ್ಯಾನ್ ಹೋಸೆ ಅದರ ಪ್ರಥಮ ರಾಜಧಾನಿಯಾಗಿ ಕಾರ್ಯನಿರ್ವಹಿಸಿತ್ತು.[6] 150 ವರ್ಷಗಳ ಕಾಲ ಕೃಷಿಕೇಂದ್ರವಾಗಿದ್ದ ಸ್ಯಾನ್ ಹೋಸೆಯಲ್ಲಿ ವಿಶ್ವ ಸಮರ IIರಿಂದ ಮರಳಿದ ಸೈನಿಕರು ಹಾಗೂ ಇತರ ಪರಿಣತರುಗಳಿಂದ ವಸತಿಗೆ ವಿಪರೀತ ಬೇಡಿಕೆ ಬಂದಿತು ಹಾಗೂ 1950 ಹಾಗೂ 1960ರ ದಶಕಗಳಲ್ಲಿ ನಡೆದ ಭೂಪ್ರದೇಶ ವಶಪಡಿಕೆಗಳ ಮೂಲಕ ತೀವ್ರ ವಿಸ್ತರಣೆಯಾಯಿತು. 1990ರ ದಶಕದ ಹೊತ್ತಿಗೆ, ಸ್ಯಾನ್ ಹೋಸೆ ಪ್ರದೇಶದಲ್ಲಿ ಸ್ಥಳೀಯ ತಂತ್ರಜ್ಞಾನ ಉದ್ಯಮವು ಹೊಂದಿದ ಅಭಿವೃದ್ಧಿಯಿಂದಾಗಿ ಮಹಾನಗರವು ಸಿಲಿಕಾನ್ ವ್ಯಾಲಿ/ಕಣಿವೆಯ ರಾಜಧಾನಿ ಎಂಬ ಉಪನಾಮವನ್ನು ಪಡೆಯಿತು.