ಹಚ್ಚೆಯು ದೇಹದ ಮಾರ್ಪಾಡಿನ ಒಂದು ರೂಪವಾಗಿದೆ. ಇದರಲ್ಲಿ ಚರ್ಮದ ವರ್ಣದ್ರವ್ಯವನ್ನು ಬದಲಾಯಿಸಲು, ಅಳಿಸಲಾಗದ ಅಥವಾ ತಾತ್ಕಾಲಿಕ ಶಾಯಿ, ರಂಗುಗಳು ಹಾಗೂ ವರ್ಣದ್ರವ್ಯಗಳನ್ನು ಚರ್ಮದ ಒಳಪದರದಲ್ಲಿ ಹಾಕಿ ವಿನ್ಯಾಸವನ್ನು ಮಾಡಲಾಗುತ್ತದೆ.

Thumb
ಹಚ್ಚೆ
Thumb

ಹಚ್ಚೆಗಳನ್ನು ಮೂರು ವಿಶಾಲ ವರ್ಗಗಳಾಗಿ ವರ್ಗೀಕರಿಸಬಹುದು: ಸಂಪೂರ್ಣವಾಗಿ ಅಲಂಕಾರಿಕ (ಯಾವುದೇ ನಿರ್ದಿಷ್ಟ ಅರ್ಥವಿಲ್ಲದೇ); ಸಾಂಕೇತಿಕ (ಹಾಕಿಸಿಕೊಳ್ಳುವವನಿಗೆ ಸಮಂಜಸವಾದ ನಿರ್ದಿಷ್ಟ ಅರ್ಥದೊಂದಿಗೆ); ಚಿತ್ರಾತ್ಮಕ (ನಿರ್ದಿಷ್ಟ ವ್ಯಕ್ತಿ ಅಥವಾ ವಸ್ತುವಿನ ಚಿತ್ರಣ). ಜೊತೆಗೆ, ಹಚ್ಚೆಗಳನ್ನು ಗುರುತಿಗಾಗಿ ಬಳಸಬಹುದು, ಉದಾಹರಣೆಗೆ, ಜಾನುವಾರುಗಳ ಕಿವಿಗಳ ಮೇಲೆ ಹಚ್ಚೆಗಳು ಒಡೆತನವನ್ನು ಸೂಚಿಸುತ್ತವೆ.[1]

ಅನೇಕ ಹಚ್ಚೆಗಳು ಜೀವನಘಟ್ಟಗಳ ಸಂಕ್ರಮಣದ ಆಚರಣೆಗಳು, ಸ್ಥಾನಮಾನ ಹಾಗೂ ದರ್ಜೆಯ ಗುರುತುಗಳು, ಧಾರ್ಮಿಕ ಹಾಗೂ ಆಧ್ಯಾತ್ಮಿಕ ಭಕ್ತಿಯ ಸಂಕೇತಗಳು, ಶೌರ್ಯಕ್ಕಾಗಿ ಅಲಂಕಾರಗಳು, ಲೈಂಗಿಕ ಪ್ರಲೋಭನಗಳು ಹಾಗೂ ಫಲವಂತಿಕೆಯ ಗುರುತುಗಳು, ಪ್ರೀತಿಯ ಆಣೆಗಳು, ತಾಯಿತಗಳು ಹಾಗೂ ರಕ್ಷಾಯಂತ್ರಗಳು, ರಕ್ಷಣೆ, ಮತ್ತು ಶಿಕ್ಷೆಯಾಗಿ (ಬಹಿಷ್ಕೃತರು, ಗುಲಾಮರು ಹಾಗೂ ಅಪರಾಧಿಗಳ ಗುರುತುಗಳಂತೆ) ಕಾರ್ಯನಿರ್ವಹಿಸುತ್ತವೆ.

ಉಲ್ಲೇಖಗಳು

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.