![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/8/81/View_of_staggered_square_layout_of_mantapa_of_Harihareshwara_Temple_at_Harihar.jpg/640px-View_of_staggered_square_layout_of_mantapa_of_Harihareshwara_Temple_at_Harihar.jpg&w=640&q=50)
ಹರಿಹರ (ಊರು)
From Wikipedia, the free encyclopedia
ಹರಿಹರ ದಾವಣಗೆರೆ ಜಿಲ್ಲೆ ಒಂದು ತಾಲ್ಲೂಕು ಕೇಂದ್ರ. ಕರ್ನಾಟಕ ರಾಜ್ಯದ ಮಧ್ಯದಲ್ಲಿದೆ. ಈ ಕಾರಣದಿಂದಾಗಿ ಇದನ್ನು ರಾಜ್ಯದ ರಾಜಧಾನಿಯನ್ನಾಗಿ ಮಾಡುವ ವಿಚಾರವಿತ್ತಂತೆ.ಇದು ಉತ್ತರ ಕರ್ನಾಟಕ ದಕ್ಷಿಣ ಕರ್ನಾಟಕದ ಹೆಬ್ಬಾಗಿಲಾಗಿದೆ. ತುಂಗಭದ್ರಾ ನದಿಯ ದಡದಲ್ಲಿದೆ. ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಸರಿಯಾಗಿ ಸುಮಾರು ೨೭೫ ಕಿ.ಮಿ.ದೂರದಲ್ಲಿದೆ.ಹುಬ್ಬಳ್ಳಿಯಿಂದ ಸರಿಯಾಗಿ ಸುಮಾರು ೧೩೦ ಕಿ.ಮಿ.ದೂರದಲ್ಲಿದೆ ಇದು ರಾಷ್ಟ್ರೀಯ ಹೆದ್ದಾರಿ ೪ (ಪೂನಾ-ಬೆಂಗಳೂರು ಮಾರ್ಗದಲ್ಲಿದೆ.)[1]
![Thumb image](http://upload.wikimedia.org/wikipedia/commons/thumb/8/81/View_of_staggered_square_layout_of_mantapa_of_Harihareshwara_Temple_at_Harihar.jpg/640px-View_of_staggered_square_layout_of_mantapa_of_Harihareshwara_Temple_at_Harihar.jpg)
'ಹರಿಹರವನ್ನು ದೇವಸ್ಥಾನಗಳ ಊರೆಂದು ಕರೆಯಬಹುದು.ಇದನ್ನು ದಕ್ಷಿಣ ಕಾಶಿ ಎನ್ನುವರು. ಕೆಲವು ಪ್ರಮುಖ ಕೈಗಾರಿಕಾ ಸಂಸ್ಥೆಗಳಿಂದಾಗಿ ಈ ಊರು ಸಾಕಷ್ಟು ಜನರಿಗೆ ಜೀವನಾಧಾರವಾಗಿದೆ. ಇಲ್ಲಿನ ಪ್ರಮುಖ ಕೈಗಾರಿಕಾ ಸಂಸ್ಥೆಗಳಲ್ಲಿ ಉಲ್ಲೇಖನೀಯವಾದವುಗಳೆಂದರೆ, 'ಮೈಸೂರ್ ಕಿರ್ಲೋಸ್ಕರ್ ಲಿಮಿಟೆಡ್ (ಮೆಷಿನ್ ಟೂಲ್) ಕಾರ್ಖಾನೆ,' (ಈಗ ಮುಚ್ಚಲಾಗಿದೆ) ಹಾಗು 'ಹರಿಹರ್ ಪಾಲಿಫೈಬರ್ಸ್ (ಗ್ರಾಸಿಂ ಇಂಡಸ್ಟ್ರೀಸ್ ಲಿಮಿಟೆಡ್').