ಹರ್ಪೀಸ್ ಸಿಂಪ್ಲೆಕ್ಸ್ ವೈರಸ್ (ಸರ್ಪಸುತ್ತು ವೈರಸ್)
ಮನುಷ್ಯರಿಗೆ ಸೋಂಕು ಉಂಟುಮಾಡುವ ಹರ್ಪೀಸ್ ವೈರಸ್ ಕುಟುಂಬದ ಒಂದು ಅಂಗ / From Wikipedia, the free encyclopedia
Lua error in package.lua at line 80: module 'Module:Pagetype/setindex' not found.
ಹರ್ಪೀಸ್ ಸಿಂಪ್ಲೆಕ್ಸ್ ವೈರಸ್ (Herpes simplex virus) 1 ಹಾಗೂ 2 (HSV-1 ಮತ್ತು HSV-2 ) ಇದನ್ನು ಹರ್ಪೀಸ್ ವೈರಸ್ 1 ಹಾಗೂ 2 (HHV-1 ಮತ್ತು -2 ) ಎನ್ನಲಾಗಿದೆ. ಇವು ಮನುಷ್ಯರಿಗೆ ಸೋಂಕು ಉಂಟುಮಾಡುವ ಹರ್ಪೀಸ್ ವೈರಸ್ ಕುಟುಂಬ ಹರ್ಪೀಸ್ವೈರಿಡೇ (Herpesviridae)ನ ಎರಡು ಅಂಗಗಳಾಗಿವೆ.[1] HSV-1 ಹಾಗೂ -2 ಎರಡೂ ಸಹ ಎಲ್ಲೆಡೆಯೂ ಇರುತ್ತವೆ ಹಾಗೂ ಸಾಂಕ್ರಾಮಿಕವಾಗಿರುತ್ತವೆ.
ಸೋಂಕಿತ ವ್ಯಕ್ತಿಯು ವೈರಸ್ ಉತ್ಪಾದಿಸಿ ಪ್ರಸರಿಸಿದಾಗ ಈ ವೈರಸ್ಗಳು ಹರಡುತ್ತವೆ.
ಚರ್ಮದಲ್ಲಿ ಅಥವಾ ಬಾಯಿ, ತುಟಿಗಳು ಅಥವಾ ಜನನಾಂಗಗಳ ಲೋಳೆಪೊರೆಗಳಲ್ಲಿ ನೀರುಗುಳ್ಳೆಗಳುಂಟಾಗುವುದು ಹರ್ಪೀಸ್ ಸಿಂಪ್ಲೆಕ್ಸ್ ವೈರಸ್ ಸೋಂಕಿನ ರೋಗ-ಲಕ್ಷಣಗಳಲ್ಲಿ ಕೆಲವು.[1]
ಹರ್ಪೀಸ್ ರೋಗದ ಹಕ್ಕಳೆ ಲಕ್ಷಣದೊಂದಿಗೆ ಈ ಗುಳ್ಳೆಗಳು ಗುಣವಾಗುತ್ತವೆ. ಆದರೂ, ನರಗಳಿಗೆ ಸೋಂಕುಂಟುಮಾಡುವ ಹಾಗೂ ನರಗಳನ್ನು ಆಕ್ರಮಿಸುವ ವೈರಸ್ಗಳಾಗಿ, HSV-1 ಹಾಗೂ -2 ವೈರಸ್ಗಳು, ಸುಪ್ತ ವಾಗಿ ನರಗಳ ಜೀವಕೋಶ ಕಾಯಗಳಲ್ಲಿರುವ ಪ್ರತಿರಕ್ಷಣಾ ವ್ಯವಸ್ಥೆಯಿಂದ ಅಡಗಿಕೊಳ್ಳುವುದರ ಮೂಲಕ, ವಾಹಕ ವ್ಯಕ್ತಿಯ ಜೀವಿತಾವಧಿ ಶರೀರದಲ್ಲಿ ಉಳಿದುಕೊಳ್ಳಬಹುದು. ಆರಂಭಿಕ ಅಥವಾ ಪ್ರಾಥಮಿಕ ಸೋಂಕಿನ ನಂತರ, ಕೆಲವು ಸೋಂಕಿತ ಜನರಿಗೆ ವೈರಸ್ನ ಪುನಃ ಸಕ್ರಿಯಾಕರಣ , ಅಥವಾ ಏಕಾಏಕಿ ಆರಂಭ ಗಳು ಆಗೊಮ್ಮೆ ಈಗೊಮ್ಮೆ ಉಂಟಾಗಬಹುದು. ಏಕಾಏಕಿ-ಆರಂಭದಲ್ಲಿ, ನರಜೀವಕೋಶದಲ್ಲಿನ ವೈರಸ್ ಸಕ್ರಿಯಗೊಂಡು, ನರತಂತುವಿನ ಮೂಲಕ ಚರ್ಮದೆಡೆ ರವಾನೆಯಾಗಬಹುದು. ಇಲ್ಲಿ ವೈರಸ್ ಪ್ರತಿರೂಪಣ(ನಕಲಾಗುವಿಕೆ) ಹಾಗೂ ಪ್ರಸರಣ(ಶೆಡ್ಡಿಂಗ್)ಸಂಭವಿಸಿ ಹೊಸ ಹುಣ್ಣುಗಳಾಗಬಹುದು.[2]
HSV ಸೋಂಕಿಗೆ ಯಾವುದೇ ಗೊತ್ತಿರುವ ಚಿಕಿತ್ಸೆಯಿಲ್ಲ. ಆದರೆ ಚಿಕಿತ್ಸೆಗಳ ಮೂಲಕ ವೈರಸ್ ಪ್ರಸರಣ ಮತ್ತು ಹರಡುವಿಕೆಯ ಸಾಧ್ಯತೆಯನ್ನು ಕಡಿಮೆಗೊಳಿಸಬಹುದು.