ಹೀರೋ (ಕ್ರಿ.ಶ. 1ನೆಯ ಶತಮಾನ) ಅಲೆಕ್ಸಾಂಡ್ರಿಯದ ಯಂತ್ರಶಿಲ್ಪಿ ಮತ್ತು ಗಣಿತವಿದ. ಈತನ ಯಂತ್ರ ನಿರ್ಮಿತಿಗಳು ಇಂದಿಗೂ ಬೆರಗು ತರಿಸುವಂತಿವೆ. ನ್ಯೂಮ್ಯಾಟಿಕ್ಸ್ ಎಂಬ ಗ್ರಂಥದಲ್ಲಿ ಇಂದಿನ ಆವಿ ತಿರುಬಾನಿಯ ಪೂರ್ವಜ ಎನ್ನಬಹುದಾದ ಒಂದು ಯಂತ್ರವನ್ನು ವಿವರಿಸಿದ್ದಾನೆ.[1] ಮೆಕ್ಯಾನಿಕ್ಸ್ ಎಂಬ ಇನ್ನೊಂದು ಗ್ರಂಥದಲ್ಲಿ ಸನ್ನೆ, ಬೆಣೆ, ತಿರುಪು, ರಾಟೆ, ಕಪ್ಪಿ- ಈ ಸರಳ ಯಂತ್ರಗಳ ಉಪಯೋಗವನ್ನು ತಿಳಿಸಿದ್ದಾನೆ. ಜ್ಯಾಮಿತಿ ಕುರಿತು ಈತ ರಚಿಸಿದ ನಾಲ್ಕು ಗ್ರಂಥಗಳು ಉಳಿದಿವೆ. 1896ರಲ್ಲಿ ಕಾನ್‌ಸ್ಟಾಂಟಿನೋಪಲ್‌ನಲ್ಲಿ ಪತ್ತೆಯಾದ ಮೆಟ್ರಿಸಿಯ ಎಂಬ ಗ್ರಂಥದಲ್ಲಿ ತ್ರಿಕೋಣ, ವೃತ್ತ ಮತ್ತು ವೃತ್ತಖಂಡ, ಅಂಡಾಕೃತಿ, ಪರವಲಯ, ಸಿಲಿಂಡರ್, ಶಂಕು, ಗೋಪುರ-ಈ ಆಕೃತಿಗಳ ಲಕ್ಷಣಗಳನ್ನು ವಿವರಿಸಿದ್ದಾನೆ. ಯಾವುದೇ ತ್ರಿಭುಜದ ಸುತ್ತಳತೆ ಕೊಟ್ಟರೆ ಅದರ ವಿಸ್ತೀರ್ಣ ತಿಳಿಸುವ ಸೂತ್ರಕ್ಕೆ ಜ್ಯಾಮಿತೀಯ ಪ್ರಮಾಣ ಒದಗಿಸಿದ್ದಾನೆ.[2] ದೃಗ್ವಿಜ್ಞಾನದಲ್ಲಿ ಪ್ರತಿಫಲಿಸುವ ಮೇಲ್ಮೈಗಳ ವಿಚಾರವಾಗಿಯೂ ಬರೆದಿದ್ದಾನೆ.

Thumb
ಹೀರೋನ ೧೭ನೇ ಶತಮಾನದ ಜರ್ಮನ್ ಚಿತ್ರಣ

ಉಲ್ಲೇಖಗಳು

ಹೊರಗಿನ ಕೊಂಡಿಗಳು

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.