ಹುಚ್ಚೆಳ್ಳು ಎಣ್ಣೆ
From Wikipedia, the free encyclopedia
ಹುಚ್ಚೆಳ್ಳು ಸಸ್ಯ ಆಸ್ಟರೇಸಿ(Astereaceae)ಸಸ್ಯ ಕುಟುಂಬಕ್ಕೆ ಸೇರಿದ ಗಿಡ . ಇದರ ಪ್ರಜಾತಿ ಗುಜೊಟಿಯ. ಈ ಸಸ್ಯದ ವೃಕ್ಷಶಾಸ್ತ್ರದ ಹೆಸರು ಗುಜೊಟಿಯ ಅಬೈಸ್ಸಿನಿಕ (guizotia abyssinica). ಹುಚ್ಚೆಳ್ಳು ಬೀಜದಿಂದ ತೆಗೆಯಲಾಗುವ ಎಣ್ಣೆ ತಿನ್ನುವುದಕ್ಕೆ/ಅಡುಗೆ ಮಾಡುವುದಕ್ಕೆ ಯೋಗ್ಯವಾದದ್ದು. ಈ ಗಿಡದ ಮೂಲ ಸ್ಥಾನ ಆಫ್ರಿಕಾದ ಇಥಿಯೋಪಿಯ.[1] ಅಲ್ಲಿಂದ ಇದನ್ನು ಪಾಕಿಸ್ತಾನ್, ಭಾರತ ದೇಶಗಳಿಗೆ ತರಲಾಗಿದೆ .ಇಥೀಯೋಪಿಯದಲ್ಲಿ ಉತ್ಪತ್ತಿಯಾಗುತ್ತಿರುವ ಒಟ್ಟೂ ಎಣ್ಣೆಯಲ್ಲಿ ಹುಚ್ಚೆಳ್ಳು ಎಣ್ಣೆ ೫೦% ಇರುತ್ತದೆ. ಭಾರತದಲ್ಲಿ ಇದರ ಉತ್ಪತ್ತಿ ೨೦%ವರೆಗೆ ಇರುತ್ತದೆ. ಕನ್ನಡದಲ್ಲಿ ಕೆಲವು ಪ್ರಾಂತ್ಯದಲ್ಲಿ ಹುಚ್ಚೆಳ್ಳುಗೆ ಗುರೆಳ್ಳು. ಕರೆಳ್ಳು ಎಂದು ಕರೆಯಲಾಗುತ್ತದೆ.
Quick Facts ಹುಚ್ಚೆಳ್ಳು, Scientific classification ...
Close