ಕುಪ್ನಳ್ಳಿ ಎಂ. ಬೈರಪ್ಪ
ಕನ್ನಡ ಭಾಷೆಯಲ್ಲಿ ಬರೆಯುತ್ತಿರುವ ಕವಿ, ಸಂಶೋಧಕ ಮತ್ತು ವಿಮರ್ಶಕ From Wikipedia, the free encyclopedia
Remove ads
ಕುಪ್ನಳ್ಳಿ ಎಂ. ಬೈರಪ್ಪ (ಆಂಗ್ಲ:Kupnalli M. Byrappa), ಕನ್ನಡ ಭಾಷೆಯಲ್ಲಿ ಬರೆಯುತ್ತಿರುವ ಕವಿ, ಸಂಶೋಧಕ ಮತ್ತು ವಿಮರ್ಶಕ.[೧] ಗದ್ಯ, ಪದ್ಯ, ವಿಮರ್ಶೆ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಕೃಷಿ ಮಾಡಿರುವ ಇವರು, ಕೇಂದ್ರ ಸರ್ಕಾರವು 'ರಾಷ್ಟ್ರಪತಿ ಪುರಸ್ಕಾರ'ದ ಭಾಗವಾಗಿ ಯುವ ವಿದ್ವಾಂಸರಿಗೆ ನೀಡುವ, ರಾಷ್ಟ್ರೀಯ ಪುರಸ್ಕಾರವಾದ ‛ಮಹರ್ಷಿ ಬಾದರಾಯಣ ವ್ಯಾಸ ಸಮ್ಮಾನ’ಕ್ಕೆ ಭಾಜನರಾದ ಅತಿ ಕಿರಿಯ ವಿದ್ವಾಂಸರಾಗಿದ್ದಾರೆ.[೨][೩]
Remove ads
ಕೃತಿಗಳು
ಭೈರಪ್ಪ ಅವರ ಸಾಹಿತ್ಯ ಕೃಷಿ ಹಲವಾರು ಕ್ಷೇತ್ರಗಳಲ್ಲಿ ನಡೆದಿದೆ. ಈವರೆಗೆ ಇಪ್ಪತ್ತಕ್ಕೂ ಹೆಚ್ಚಿನ ಕೃತಿಗಳನ್ನು ಬರೆದಿರುವ ಅವರು ಹಲವಾರು ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ.[೪] ಅವರ ಮೊದಲ ಕವನ ಸಂಕಲನ ಬೇಲಿ ಗಿಡಗಳು ಮಾತಾಡುತಾವೆ ಕೃತಿಯು ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ ಬಹುಮಾನ ಪಡೆದಿತ್ತು.
- ಬೇಲಿಗಿಡಗಳು ಮಾತಾಡುತಾವೆ [೫]
- ಕರ್ಣರಸಾಯನ
- ಅಂತರಗಂಗವ್ವ
- ಹರಿಹರನ ರಗಳೆಗಳಲ್ಲಿ ದಲಿತ ಸಂವೇದನೆ
- ಬಸವ ಸಿನಿಮಾ ಬುದ್ಧ ಪ್ರತಿಮಾ
- ಬೌದ್ಧಯಾನಿ ಚಾಮುಂಡಿ
- ಜನಮುಖಿ: ಪ್ರೊ. ಎಲ್. ಬಸವರಾಜು ಅವರ ಕೃತಿಶೋಧ
- ಕತ್ತಲನಾಡಿನ ಬೆಳಕಿನ ಹಾಡು
- ಮೈಸೂರು-ಚಾಮರಾಜನಗರ ತತ್ತ್ವಪದಗಳು
- ಬುದ್ಧನಗೆಯ ತಾಯಿನದಿ
- ಹರಿಶ್ಚಂದ್ರ ಕಾವ್ಯ: ಸಾಂಸ್ಕೃತಿಕ ವಿವೇಚನೆ
- ಸಮತಾ ಪಂಜು: ಸಾವಿತ್ರಿಬಾಯಿ ಫುಲೆ ಅವರ ಜೀವನಕ್ರಾಂತಿ ದರ್ಶನದ ಲೇಖನಗಳು (ಸಂಪಾದನೆ, ಪಿ. ಎನ್. ಹೇಮಲತಾ ಅವರೊಡನೆ)[೬]
ಮುಂತಾದವು.
Remove ads
ಪುರಸ್ಕಾರಗಳು
ಉಲ್ಲೇಖಗಳು
Wikiwand - on
Seamless Wikipedia browsing. On steroids.
Remove ads