ಕೃಷ್ಣ
ಶ್ರೀ ವಿಷ್ಣುವಿನ ಅವತಾರ From Wikipedia, the free encyclopedia
Remove ads
ಶ್ರೀ ಕೃಷ್ಣಪರಮಾತ್ಮರು ಸಾಂಪ್ರದಾಯಿಕ ಹಿಂದೂ ಧರ್ಮೀಯರ ನಂಬಿಕೆಯಂತೆ ವಿಷ್ಣುವಿನ ಹತ್ತು ಅವತಾರಗಳಲ್ಲಿ ಒಬ್ಬರಾಗಿದ್ದಾರೆ.






Remove ads
ಭಾಗವತ
ಭಾಗವತದಲ್ಲಿ ಶ್ರೀಕೃಷ್ಣನ ಕತೆಗಳಿವೆ.
- ಕಂಸ ಮತ್ತು ಚಾಣೂರರ ಸಂಹಾರಕ್ಕಾಗಿ ವಿಷ್ಣು ಶ್ರೀಕೃಷ್ಣನ ಅವತಾರವನ್ನೆತ್ತಿದ. ಮಥುರಾ ನಗರದಲ್ಲಿ ರಾಜನಾಗಿದ್ದ ಉಗ್ರಸೇನನ ಮಗ ಕಂಸ ತನ್ನ ತಂದೆಯನ್ನೇ ಬಂಧನದಲ್ಲಿಟ್ಟು ತಾನು ರಾಜನಾಗುತ್ತಾನೆ. ತನ್ನ ತಂಗಿ ದೇವಕಿಯ ಗರ್ಭದಲ್ಲಿ ಹುಟ್ಟಿದ ಶಿಶುವಿನಿಂದ ತನಗೆ ಮೃತ್ಯು ಎಂದು ನಂಬಿದ ಕಂಸ ದೇವಕಿ ಮತ್ತು ಅವಳ ಪತಿ ವಸುದೇವ ಇಬ್ಬರನ್ನೂ ಕಾರಾಗೃಹದಲ್ಲಿ ಬಂಧಿಸುತ್ತಾನೆ. ಇವರಿಗೆ ಹುಟ್ಟಿದ ಮಕ್ಕಳನ್ನು ಕಂಸ ನಿರ್ದಯೆಯಿಂದ ಕೊಲ್ಲುತ್ತಾನೆ. ಎಂಟನೇ ಮಗುವಾಗಿ ಹುಟ್ಟಿದ ಶ್ರೀಕೃಷ್ಣನನ್ನು ಬುಟ್ಟಿಯಲ್ಲಿ ಹೊತ್ತು ತಂದೆ ವಸುದೇವ ಗುಟ್ಟಾಗಿ ರಾತ್ರೋರಾತ್ರಿ ಕಾರಾಗೃಹದಿಂದ ತಪ್ಪಿಸಿಕೊಂಡು ನೆರೆಯ ಗೋಕುಲಕ್ಕೆ ಬರುತ್ತಾನೆ. ಅಲ್ಲಿ ಯಶೋದೆ ಮತ್ತು ನಂದಗೋಪರ ಹೆಣ್ಣು ಶಿಶುವಿನ ಸ್ಥಾನದಲ್ಲಿ ಕೃಷ್ಣನನ್ನು ಮಲಗಿಸಿ ಆ ಶಿಶುವನ್ನು ತಾನು ಎತ್ತಿಕೊoಡು ಕಾರಾಗೃಹಕ್ಕೆ ಮರಳುತ್ತಾನೆ. ಕಂಸ ಯಥಾಪ್ರಕಾರ ದೇವಕಿಗೆ ಹುಟ್ಟಿದ ಶಿಶು ಎಂದು ಭ್ರಮಿಸಿ ಆ ಮಗುವನ್ನು ಕೊಲ್ಲಲು ಪ್ರಯತ್ನಿಸುತ್ತಾನೆ. ಆಗ ಒಂದು ಪವಾಡ ನಡೆಯುತ್ತದೆ. ಆ ಶಿಶು ಆಕಾಶಕ್ಕೆ ನೆಗೆದು "ನಿನ್ನನ್ನು ಸಂಹಾರ ಮಾಡುವವನು ಈಗಾಗಲೇ ಭೂಮಿಯ ಮೇಲೆ ಜನ್ಮ ತಳೆದಾಗಿದೆ" ಎಂದು ಹೇಳಿ ಅಂತರ್ಧಾನವಾಗುತ್ತದೆ. ಕಂಸ ಅಕ್ಕಪಕ್ಕದ ಹಳ್ಳಿಗಳಲ್ಲಿ ಹುಟ್ಟಿದ ನವಜಾತ ಶಿಶುಗಳನ್ನು ಕೊಲ್ಲಲು ಅನೇಕ ರಾಕ್ಷಸರನ್ನು ಕಳಿಸುತ್ತಾನೆ. ಇವರಾರಿಗೂ ಶ್ರೀಕೃಷ್ಣನನ್ನು ಕೊಲ್ಲಲು ಸಾಧ್ಯವಾಗುವುದಿಲ್ಲ. ಮುಂದೆ ಕೃಷ್ಣನು ತನ್ನ (ಖಾಸಾ) ಅಣ್ಣ ಬಲರಾಮನೊಂದಿಗೆ ಮಥುರಾ ನಗರಕ್ಕೆ ಬಂದು ಕಂಸ ಮತ್ತು ಚಾಣೂರರನ್ನು ಮಲ್ಲಯುದ್ಧದಲ್ಲಿ ಸಂಹಾರ ಮಾಡುತ್ತಾನೆ. ಉಗ್ರಸೇನ ಮಹಾರಾಜನನ್ನು ಸೆರೆಯಿಂದ ಮುಕ್ತಗೊಳಿಸಿ ಅವನಿಗೆ ಫಟ್ಟಾಭಿಷೇಕ ಮಾಡುತ್ತಾನೆ.
- ಶ್ರೀಕೃಷ್ಣನ ಬಾಲ್ಯದ ಅನೇಕ ರೋಚಕ ಕಥೆಗಳು ಭಾಗವತದಲ್ಲಿವೆ. ಶಕಟಾಸುರನ ವಧೆ, ಪೂತನಿಯ ವಧೆ, ಗೋಪಿಕಾ ಸ್ತ್ರೀಯರ ವಸ್ತ್ರಾಪಹರಣ, ಕಾಳಿಂಗಮರ್ದನ, ಗೋವರ್ಧನ ಗಿರಿಯ ರಕ್ಷಣೆ ಮೊದಲಾದ ಅನೇಕ ಕಥೆಗಳಿವೆ. ಭಕ್ತಿಯುಗದ ಕವಿಗಳು ಈ ಕತೆಗಳನ್ನು ಆಧರಿಸಿ ಅನೇಕ ಭಜನೆಗಳನ್ನು ರಚಿಸಿದ್ದಾರೆ. ಸೂರದಾಸರು, ಪುರಂದರದಾಸರು, ಕನಕದಾಸರು, ಮೀರಾಬಾಯಿ, ಇವರೆಲ್ಲರೂ ಶ್ರೀಕೃಷ್ಣನ ಭಕ್ತರಾಗಿದ್ದ ಕವಿಗಳು.
- ಶ್ರೀಕೃಷ್ಣನಿಗೆ ಬಾಲ್ಯದಲ್ಲಿ ರಾಧೆ ಎಂಬ ಪ್ರೇಯಸಿ ಇದ್ದಳು. ಶ್ರೀಕೃಷ್ಣ ಕೊಲ್ಲಕುಲವನ್ನು ತೊರೆದು ಮಥುರಾ ನಗರಕ್ಕೆ ಹೊರಟಾಗ ರಾಧೆಯನ್ನೂ ತೊರೆಯಬೇಕಾಗುತ್ತದೆ. ಆದರೆ ಭಾರತದಲ್ಲಿ, ವಿಶೇಷವಾಗಿ ಉತ್ತರಭಾರತದಲ್ಲಿ, ಇಂದಿಗೂ ಶ್ರೀಕೃಷ್ಣನ ಜೊತೆ ರಾಧೆಗೇ ಪೂಜೆ ಸಲ್ಲುತ್ತದೆ.
- ರುಕ್ಮ ಎಂಬ ರಾಜನ ತಂಗಿ ರುಕ್ಮಿಣಿಯನ್ನು ಮದುವೆಯಾಗಲು ಶ್ರೀಕೃಷ್ಣ ಬಯಸುತ್ತಾನೆ. ರುಕ್ಮನಿಗೆ ಶ್ರೀಕೃಷ್ಣನನ್ನು ಕಂಡರೆ ದ್ವೇಷ. ಹೀಗಾಗಿ ರುಕ್ಮಿಣಿಯನ್ನು ಅಪಹರಿಸಿಕೊಂಡು ಬಂದು ಕೃಷ್ಣ ಮದುವೆಯಾಗುತ್ತಾನೆ. ಮುಂದೆ ಜಾಂಬವತಿ ಮತ್ತು ಸತ್ಯಭಾಮೆ ಎಂಬ ಕನ್ಯೆಯರನ್ನೂ ಕೃಷ್ಣ ವಿವಾಹವಾಗುತ್ತಾನೆ.
- ಜರಾಸಂಧ ಎಂಬ ರಾಕ್ಷಸನೊಂದಿಗೆ ಕೃಷ್ಣನಿಗೆ ಅನೇಕ ಸಲ ಯುದ್ಧವಾಗುತ್ತದೆ. ಜರಾಸಂಧನನ್ನು ಸೋಲಿಸುವ ಬದಲು, ಕೃಷ್ಣ ತನ್ನ ಬಂಧು-ಬಾಂಧವರನ್ನೆಲ್ಲ ಗಂಗಾತೀರದ ಮಥುರೆಯಿಂದ, ಸಾಗರತೀರದ ದ್ವಾರಕೆಗೆ ಬಂದು, ನಗರವನ್ನು ನಿರ್ಮಿಸಿ ಮಥುರೆಯ ದೊರೆ ಉಗ್ರಸೇನನನ್ನೇ ರಾಜನಾಗಿ ನಿಲ್ಲಿಸುತ್ತಾನೆ.
Remove ads
ಮಹಾಭಾರತದಲ್ಲಿ ಶ್ರೀ ಕೃಷ್ಣ
- ಮಹಾಭಾರತದಲ್ಲಿ ಶ್ರೀ ಕೃಷ್ಣನಿಗೆ ಪ್ರಮುಖ ಪಾತ್ರವಿದೆ. ಪಾಂಡವರ ತಾಯಿ ಕುಂತಿ ಶ್ರೀಕೃಷ್ಣನ ತಂದೆಯಾದ ವಸುದೇವನ ತಂಗಿ. ಮಹಾಭಾರತದ ಕಥೆಯಲ್ಲಿ ಶ್ರೀಕೃಷ್ಣನ ಪ್ರವೇಶವಾಗುವುದು ದ್ರೌಪದಿಯ ಸ್ವಯಂವರದ ಸಂದರ್ಭದಲ್ಲಿ ಅವನು ಅರ್ಜುನನ ಮತ್ತು ಪಾಂಡವರ ಗುರುತು ಹಿಡಿದು ಬಲರಾಮನಿಗೆ ತೋರಿಸುತ್ತಾನೆ. ನಂತರ ಅವನು ಯಾದವರೊಡನೆ ದ್ರೌಪದಿ ಮತ್ತು ಪಾಂಡವರ ವಿವಾಹದಲ್ಲಿ ಭಾಗವಹಿಸುವನು. [೨] ಜೂಜಿನಲ್ಲಿ ಪಾಂಡವರು ಸೋತಾಗ ಕೌರವರು ದ್ರೌಪದಿಯ ವಸ್ತ್ರಾಪಹರಣಕ್ಕೆ ಪ್ರಯತ್ನಿಸುತ್ತಾರೆ. ಆಗ ದ್ರೌಪದಿಗೆ ಅಕ್ಷಯವಸ್ತ್ರವನ್ನು ಕೊಡುವ ಮೂಲಕ ಅವಳ ಮಾನರಕ್ಷಣೆ ಮಾಡುತ್ತಾನೆ.
- ಕುರುಕ್ಷೇತ್ರದ ಯುದ್ಧದಲ್ಲಿ ಅರ್ಜುನನ ಸಾರಥಿಯಾಗಿ ಪಾಲ್ಗೊಳ್ಳುತ್ತಾನೆ ಶ್ರೀ ಕೃಷ್ಣ
- ಯುದ್ಧರಂಗದಲ್ಲಿ ತನ್ನ ಗುರು-ಬಂಧು-ಮಿತ್ರರೊಂದಿಗೆ ಯುದ್ಧ ಮಾಡಲು ನಿರಾಕರಿಸುವ ಅರ್ಜುನನಿಗೆ ಶ್ರೀಕೃಷ್ಣ ಮಾಡುವ ಉಪದೇಶವೇ ಹಿಂದೂಗಳ ಪವಿತ್ರ ಗ್ರಂಥವಾದ ಭಗವದ್ಗೀತೆ ಎಂದು ಪ್ರಸಿದ್ಧವಾಗಿದೆ.
- ಕೃಷ್ಣ ಏಕಾಂಗಿಯಾಗಿ, ಆಯುಧಗಳು ಇಲ್ಲದೆಯೇ ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರಿಗೆ ಜಯ ತಂದುಕೊಡುತ್ತಾನೆ.
- ಮಾದಿಗ ಸಮುದಾಯದ ಹಿರಿಯ ಜಾಂಬವಂತನ ಮಗಳಾದ ಜಾಂಬವತಿಯನ್ನು ಮದುವೆ ಮಾಡಿಕೊಂಡು ಅಂತರ್ ಜಾತಿ ವಿವಾಹಕ್ಕೆ ಅಡಿಪಾಯ ಹಾಕಿದ ಮೊದಲ ದೈವಸ್ವರೂಪಿ ಶ್ರೀ ಕೃಷ್ಣ.
- ರಾಮಾಯಣದಲ್ಲಿ ರಾಮನಾಗಿ ವಾಲಿಯನ್ನು ಕೊಂದಾಗ, ವಾಲಿಗೆ ಮುಂದಿನ ಅವತಾರದಲ್ಲಿ ನೀನು ನನ್ನನ್ನು ಕೊಲ್ಲುವೆಯಂತೆ ಎಂದು ಮಾತು ನೀಡಿರುತ್ತಾನೆ. ಅದರಂತೆಯೇ ಜರಾ ಎಂಬ ಬೇಡನಾಗಿ ಜನ್ಮ ತಾಳಿದ ವಾಲಿಯು, ಕೃಷ್ಣನ ಕಾಲಿನ ಹೆಬ್ಬೆರಳನ್ನು ಜಿಂಕೆ ಎಂದು ಭಾವಿಸಿ ಬಾಣ ಹೊಡೆಯುತ್ತಾನೆ. ಆ ಬಾಣದಿಂದ ಜಗನ್ನಿಯಾಮಕ ಶ್ರೀ ಕೃಷ್ಣ ಅಸು ನೀಗಿ ತನ್ನ ಅವತಾರವನ್ನು ಮುಗಿಸುತ್ತಾನೆ.[೩]
- ಯಾವುದೇ ಸಮುದಾಯಗಳಿಗೆ ಅಥವಾ ವ್ಯಕ್ತಿಗಳಿಗೆ ಜಾತಿ ಭೇದ ಅಸ್ಪೃಷ್ಯತೆ ಮೇಲು ಕೀಳು ಆಚರಣೆ ಮಾಡಿದ ವ್ಯಕ್ತಿಯ ಮುಂದಿನ ಜನ್ಮದಲ್ಲಿ ಹೇಸಿಗೆ ತಿನ್ನುವ ನಾಯಿಯಾಗಿ ಹುಟ್ಟುತ್ತಾನೆ ಎಂದು ಹೇಳುತ್ತಾನೆ.
Remove ads
ಕೃಷ್ಣನ ಇತರ ಹೆಸರುಗಳು
- ಅಚ್ಯುತ: ಚ್ಯುತಿಯಿಲ್ಲದವ, ಯಾವುದೇ ದೋಷ ಇಲ್ಲದವನು.
- ಅಸುರಾರಿ : ರಾಕ್ಷಸರಿಗೆ ಸದಾಕಾಲ ಶತ್ರುವಾಗಿದ್ದವನು.
- ವಾಸುದೇವ : ವಸುದೇವನ ಮಗ
- ನಂದಗೋಪಾಲ: ನಂದ ಗೋಪನ ಮಗನಾಗಿದ್ದವನು
- ಕಾಲದೇವ: ಯಮನನ್ನು ಮೀರಿಸಿದವ.
- ಗಿರಿಧರ: ಗೋವರ್ಧನ ಗಿರಿಯನ್ನು ತನ್ನ ಕಿರುಬೆರಳಲ್ಲೇ ಎತ್ತಿದವ
- ಕೊಲ್ಲ: ದನಕರುಗಳನ್ನು ಪಾಲಿಸಿ, ಕಾಪಾಡುವವನು.
- ವೇಣುಗೋಪಾಲ : ಕೊಳಲನ್ನು ನುಡಿಸುವವನು.
- ಗೊಲ್ಲ:ದನಕರುಗಳನ್ನು ರಕ್ಷಿಸುವವನು
- ಚಕ್ರಧಾರಿ: ಚಕ್ರಾಯುಧವನ್ನು ಧರಿಸಿದವನು
- ದ್ವಾರಕಾಧೀಶ/ದ್ವಾರಕಾನಾಥ: ದ್ವಾರಕಾನಗರಕ್ಕೆ ಒಡೆಯನಾದವನು
- ಜಗನ್ನಾಥ: ಜಗತ್ತಿಗೆ ನಾಯಕನಾದವನು
- ಜನಾರ್ದನ: ಎಲ್ಲರಿಗೂ ವರವನ್ನು ಕೊಡುವನು
- ಪತಿತ ಪಾವನ: (?) ಪಾಪಿಗಳನ್ನು ಉದ್ದರಿಸುವವನು
- ಪರಬ್ರಹ್ಮ: ಬ್ರಹ್ಮನ ತಂದೆ (ವಿಷ್ಣು)
- ಪಾರ್ಥ ಸಾರಥಿ: ಅರ್ಜುನನ ಸಾರಥಿ
- ಮಧುಸೂದನ: ಮಧು ಎಂಬ ರಾಕ್ಷಸನನ್ನು ನಾಶ ಮಾಡಿದವನು.
- ಮಾಧವ: ವಸಂತ ಋತು ತರುವವ, ಮಾ =ಲಕ್ಷ್ಮಿ -ಧವ =ಒಡೆಯ (?)
- ಮುಕುಂದ: ಮುಕ್ತಿಯನ್ನು ಕೊಡುವವನು
- ಯೋಗೇಶ್ವರ: ಯೋಗಿಗಳಿಗೆಲ್ಲಾ ಸ್ವಾಮಿಯಾದವನು
- ಶ್ಯಾಮಸುಂದರ: ಕಪ್ಪು ವರ್ಣದವನು
- ಹೃಷೀಕೇಶ: ಹೃಷಿಕಗಳನ್ನು(ಇಂದ್ರಿಯ) ಹಿಡಿದಿಟ್ಟವನು
- ಪುರುಷೋತ್ತಮ : ಪುರುಷರಲ್ಲೇ ಅತ್ಯುತ್ತಮನಾದವನು
- ನವನೀತ : ತಾಜಾ ಬೆಣ್ಣೆಯನ್ನು ತಿಂದವನು
- ಸುದರ್ಶನ : ಸುದರ್ಶನ ಚಕ್ರ ಹೊಂದಿದವ
- ಮುರಳಿ : ಕೊಳಲನ್ನು ಹೊಂದಿದವ
- ಜನಾರ್ಧನ :
- ಮುರಾರಿ :
- ಘನಶ್ಯಾಮ: ಕೃಷ್ಣನ ಮೈಬಣ್ಣ ಮೋಡದಂತೆ ಕಪ್ಪು
- ದಾಮೋದರ:
- ಪಾಂಡುರಂಗ:
- ಕೇಶವ:
- ವಿಠಲ:
- ಶ್ರೀರಂಗನಾಥ:
ಉಲ್ಲೇಖಗಳು
ಬಾಹ್ಯ ಸಂಪರ್ಕಗಳು
Wikiwand - on
Seamless Wikipedia browsing. On steroids.
Remove ads