ತಮಿಳು
ಭಾರತದ ಭಾಷೆ From Wikipedia, the free encyclopedia
Remove ads
ದ್ರಾವಿಡ ಭಾಷೆಗಳಲ್ಲಿ ಬಹಳ ಪ್ರಾಚೀನ ಮತ್ತು ಶ್ರೀಮಂತ ಭಾಷೆ ತಮಿಳು.[೧] ತಮಿಳು[೨] ಭಾಷೆಯಲ್ಲಿ ದೊರೆತಿರುವ ಕೃತಿಗಳಲ್ಲಿ ಮೊತ್ತಮೊದಲನೆಯದು ತೊಲ್ಕಾಪ್ಪಿಯಂ. ಇದು ಒಂದು ಪ್ರಾಚೀನ ಲಕ್ಷಣ ಗ್ರಂಥ. ಇದರ ಕಾಲ ಕ್ರಿ.ಪೂ. ೩ನೇ ಶತಮಾನ. ಪಂಚದ್ರಾವಿಡ ಭಾಷೆಗಳಾದ ತಮಿಳು, , ಮಲಯಾಳಂ ಮತ್ತು ತುಳುಗಳಲ್ಲಿ, ಕನ್ನಡ ಭಾಷೆಯು ತೀರ ಹಳೆಯದಾದರೆ ನಂತರ ಉಳಿದ ನಾಲ್ಕು ಭಾಷೆಗಳು ಬರುತ್ತವೆ. ಈ ಎಲ್ಲ ಭಾಷೆಗಳಲ್ಲೂ ಬರವಣಿಗೆ ಎಡದಿಂದ ಬಲಕ್ಕೆ ಸಾಗುತ್ತದೆ. ತಮಿಳಿಗೆ ತನ್ನದೇ ಆದ ಲಿಪಿ ಬಳಕೆಯಲ್ಲಿದೆ. ತಮಿಳು ಪ್ರಮುಖವಾಗಿ ಭಾರತ ಹಾಗು ಶ್ರೀಲಂಕಾದಲ್ಲಿ ಮಾತನಾಡಲ್ಪಡುವ, ದ್ರಾವಿಡ ಭಾಷಾಕುಟುಂಬಕ್ಕೆ ಸೇರಿದ ಒಂದು ಭಾಷೆ.
Remove ads
ಇತಿವೃತ್ತ
ತಮಿಳು ಸಿಂಗಾಪುರ, ಶ್ರೀಲಂಕಾ, ಮಲೇಶಿಯ ದೇಶಗಳಲ್ಲಿ ಹಾಗೂ ಭಾರತದ ತಮಿಳುನಾಡು ರಾಜ್ಯದಲ್ಲಿ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿ ಅಧಿಕೃತ ಭಾಷೆಯ ಸ್ಥಾನಮಾನವನ್ನು ಪಡೆದಿದೆ. ಈ ಭಾಷೆಯು ಭಾರತದ ಕೇಂದ್ರ ಸರ್ಕಾರದಿಂದ ಶಾಸ್ತ್ರೀಯ ಭಾಷೆ ಎಂದು ಮಾನ್ಯತೆ ಪಡೆದಿದೆ. ಪಂಚದ್ರಾವಿಡ ಭಾಷೆಗಳಲ್ಲಿ ತುಳು – ತಮಿಳು ಭಾಷೆಗಳ ನಡುವೆ ನಿಕಟ ಸಂಬಂಧವಿದೆ. ಶತಶತಮಾನಗಳಿಂದ ಬೆಳೆದು ಬಂದ ಸಂಬಂಧವಿದು ಎಂದು ಹೇಳಬಹುದು. ತುಳು – ತಮಿಳು ಭಾಷೆಗಳಲ್ಲಿ ಅನೇಕ ಸಮಾನ ಪದಗಳು (ಪಾಂಬು, ಕಲ್ಲ್, ಮಣ್ಣ್, ಎಲಿ, ನಾಯಿ, ಕೈ, ಜಲ್ಲಿ ಇತ್ಯಾದಿ) ಬಳಕೆಯಲ್ಲಿದ್ದು ಈ ಎರಡು ಭಾಷೆಗಳ ನಡುವೆ ಉತ್ತಮ ಸಂಬಂಧ ಬೆಳೆದುಬರುವಲ್ಲಿ ಸಹಕಾರಿಯಾಗಿವೆ.
Remove ads
ಉಲ್ಲೇಖಗಳು
Wikiwand - on
Seamless Wikipedia browsing. On steroids.
Remove ads