ಭಾರತದ ಉಪ ರಾಷ್ಟ್ರಪತಿ
From Wikipedia, the free encyclopedia
Remove ads
ಭಾರತದ ಉಪ ರಾಷ್ಟ್ರಪತಿಗಳು ಭಾರತ ಸರ್ಕಾರದ ಕಾರ್ಯಾಂಗದಲ್ಲಿ ರಾಷ್ಟ್ರಪತಿಯ ನಂತರ ಎರಡನೇ ಉನ್ನತ ಪದವಿಯ ಸರ್ಕಾರಿ ಅಧಿಕಾರಿಯಾಗಿದ್ದಾರೆ. ಉಪ ರಾಷ್ಟ್ರಪತಿಗಳು ರಾಜ್ಯಸಭೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಶಾಸಕಾಂಗದ ಕರ್ತವ್ಯವನ್ನು ಕೂಡ ಹೊಂದಿದ್ದಾರೆ.
Remove ads
ಉಪ ರಾಷ್ಟ್ರಪತಿ ಚುನಾವಣೆ ೨೦೨೨
- ಹಾಲಿ ಉಪರಾಷ್ಟ್ರಪತಿ ಜಗದೀಪ್ ಧಂಖಾರ್.
- ೨೦೨೨ ಆಗಸ್ಟ್ 5 ರಂದು ಮತ ಎಣಿಕೆ ನಡೆದು ಉಪರಾಷ್ಟ್ರಪತಿಯಾಗಿ ಜಗದೀಪ್ ಧಂಖಾರ್ ಅವರು ಆಯ್ಕೆಯಾದರು.[೧]
ಆಯ್ಕೆ ವಿಧಿ ವಿಧಾನ
- ಭಾರತೀಯ ಸಂವಿಧಾನದ 66 ನೇ ವಿಧಿಯು ಉಪಾಧ್ಯಕ್ಷರ ಚುನಾವಣೆಯ ವಿಧಾನವನ್ನು ಹೇಳುತ್ತದೆ. ಸಂಸತ್ತಿನ ಎರಡೂ ಸದನಗಳ ಸದಸ್ಯರನ್ನು ಒಳಗೊಂಡಿರುವ ಚುನಾವಣಾ ಕಾಲೇಜಿನ ಸದಸ್ಯರು ಪರೋಕ್ಷವಾಗಿ ಚುನಾಯಿತರಾಗುತ್ತಾರೆ, ಏಕೈಕ ವರ್ಗಾವಣೆ ಮಾಡಬಹುದಾದ ಮತಗಳ ಮೂಲಕ ಪ್ರಮಾಣಾನುಗುಣ ಪ್ರತಿನಿಧಿಗಳ ವ್ಯವಸ್ಥೆಯ ಪ್ರಕಾರ ಮತ್ತು ಮತದಾನವು ಚುನಾವಣಾ ಆಯೋಗದಿಂದ ನಡೆಸಲ್ಪಟ್ಟ ರಹಸ್ಯ ಮತದಾನದ ಮೂಲಕ ನಡೆಯುವುದು.[೨]
- ಚುನಾವಣೆ ವೇಳೆ ವಿಶೇಷ ಪೆನ್ ನಲ್ಲೇ ತಮ್ಮ ಆಯ್ಕೆ ಅಭ್ಯರ್ಥಿಯ ಹೆಸರಿನ ಮುಂದೆ ಗುರುತು ಮಾಡಬೇಕು. ಬೇರೆ ಪೆನ್ ಗಳನ್ನು ಬಳಕೆ ಮಾಡಿದ್ದೇ ಆದರೆ ಆ ಮತ ಅಸಿಂಧುವಾಗುತ್ತದೆ. ೨೦೧೭ರ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ರಹಸ್ಯ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಯಾವುದೇ ಪಕ್ಷಗಳು ತಮ್ಮ ಸಂಸದರಿಗೆ ಇಂಥಹದ್ದೇ ಅಭ್ಯರ್ಥಿಗಳಿಗೆ ಮತ ಹಾಕಬೇಕೆಂದು ವಿಪ್ ಜಾರಿ ಮಾಡುವಂತಿಲ್ಲ.[೩]
ಈವರೆಗಿನ ಉಪರಾಷ್ಟ್ರಪತಿಗಳು
- ವಿವರ
- † ಅಧಿಕಾರದಲ್ಲಿದ್ದಾಗ ನಿಧನ
Remove ads
ನೋಡಿ
ಉಲ್ಲೇಖಗಳು
ಬಾಹ್ಯ ಸಂಪರ್ಕಗಳು
Wikiwand - on
Seamless Wikipedia browsing. On steroids.
Remove ads