ಮದುವೆ
From Wikipedia, the free encyclopedia
Remove ads
ಪರಿಣಯ ಅಥವಾ ದಾಂಪತ್ಯ ಎಂದೂ ಕರೆಯಲ್ಪಡುವ ಮದುವೆಯು ಸಾಮಾಜಿಕವಾಗಿ ಅಥವಾ ಶಾಸ್ತ್ರೋಕ್ತವಾಗಿ ಗುರುತಿಸಲ್ಪಟ್ಟ ಸಂಗಾತಿಗಳ ನಡುವಿನ ಒಕ್ಕೂಟ ಅಥವಾ ಕಾನೂನಾತ್ಮಕ ಒಪ್ಪಂದ. ಇದು ಅವರಿಬ್ಬರ ನಡುವಿನ, ಅವರ ಹಾಗೂ ಅವರ ಮಕ್ಕಳಿನ ನಡುವಿನ, ಮತ್ತು ಅವರ ಹಾಗೂ ಅವರ ಸಂಬಂಧಿಕರ ನಡುವಿನ ಹಕ್ಕುಗಳು ಹಾಗೂ ಕರ್ತವ್ಯಗಳನ್ನು ಸ್ಥಾಪಿಸುತ್ತದೆ.
ಭಿನ್ನ ಸಂಸ್ಕೃತಿಗಳ ಪ್ರಕಾರ ಮದುವೆಯ ವ್ಯಾಖ್ಯಾನವು ಬದಲಾಗುತ್ತದೆ, ಆದರೆ ಪ್ರಧಾನವಾಗಿ ಅದು ಅಂತರವ್ಯಕ್ತೀಯ ಸಂಬಂಧಗಳು, ಸಾಮಾನ್ಯವಾಗಿ ಲೈಂಗಿಕ ಸಂಬಂಧಗಳನ್ನು ಅಂಗೀಕರಿಸುವ ಸಂಪ್ರದಾಯವಾಗಿದೆ. ಕೆಲವು ಸಂಸ್ಕೃತಿಗಳಲ್ಲಿ, ಯಾವುದೇ ಲೈಂಗಿಕ ಚಟುವಟಿಕೆಯಲ್ಲಿ ತೊಡಗುವ ಮುನ್ನ ಮದುವೆಯನ್ನು ಶಿಫಾರಸು ಮಾಡಲಾಗುತ್ತದೆ ಅಥವಾ ಕಡ್ಡಾಯವೆಂದು ಪರಿಗಣಿಸಲಾಗುತ್ತದೆ. ವಿಶಾಲವಾಗಿ ವಿವರಿಸಿದಾಗ, ಮದುವೆಯನ್ನು ಸಾಂಸ್ಕೃತಿಕ ಸಾರ್ವತ್ರಿಕ ಎಂದು ಪರಿಗಣಿಸಲಾಗುತ್ತದೆ.
ಸಾಮಾಜಿಕ, ಕಾನೂನಾತ್ಮಕ, ಕಾಮಾಸಕ್ತಿಯ, ಭಾವನಾತ್ಮಕ, ಆರ್ಥಿಕ, ಆಧ್ಯಾತ್ಮಿಕ ಮತ್ತು ಧಾರ್ಮಿಕ ಉದ್ಧೇಶಗಳು ಸೇರಿದಂತೆ ವ್ಯಕ್ತಿಗಳು ಹಲವಾರು ಕಾರಣಗಳಿಗಾಗಿ ಮದುವೆಯಾಗಬಹುದು. ಅವರು ಯಾರನ್ನು ಮದುವೆಯಾಗುತ್ತಾರೆ ಎಂಬುದು ನಿಷಿದ್ಧ ಸಂಭೋಗದ ಸಾಮಾಜಿಕವಾಗಿ ನಿರ್ಧಾರಿತವಾದ ನಿಯಮಗಳು, ವಿಧಿಸಲ್ಪಟ್ಟ ಮದುವೆಯ ನಿಯಮಗಳು, ಪೋಷಕರ ಆಯ್ಕೆ ಮತ್ತು ವೈಯಕ್ತಿಕ ಬಯಕೆಯಿಂದ ಪ್ರಭಾವಿತವಾಗಿರಬಹುದು.
ವಿಶ್ವದ ಕೆಲವು ಪ್ರದೇಶಗಳಲ್ಲಿ ಸಾಂಸ್ಕೃತಿಕ ಸಂಪ್ರದಾಯವಾಗಿ ನಿಶ್ಚಯಿಸಲಾದ ಮದುವೆ, ಬಾಲ್ಯವಿವಾಹ, ಬಹುಪತ್ನಿತ್ವ, ಮತ್ತು ಕೆಲವೊಮ್ಮೆ ಬಲವಂತದ ಮದುವೆಯನ್ನು ಅಭ್ಯಾಸ ಮಾಡಬಹುದು. ಇದಕ್ಕೆ ಪ್ರತಿಯಾಗಿ, ವಿಶ್ವದ ಕೆಲವು ಭಾಗಗಳಲ್ಲಿ ಮಹಿಳಾ ಹಕ್ಕುಗಳ ಕಾಳಜಿಯಿಂದ ಮತ್ತು ಅಂತಾರಾಷ್ಟ್ರೀಯ ಕಾನೂನಿನ ಕಾರಣ, ಅಂತಹ ಆಚರಣೆಗಳನ್ನು ನಿಷೇಧಿಸಿಲಾಗಿರಬಹುದು ಮತ್ತು ಅವು ದಂಡನಾರ್ಹವಾಗಿರಬಹುದು. ವಿಶ್ವದ ಅಭಿವೃದ್ಧಿಹೊಂದಿದ ಭಾಗಗಳಲ್ಲಿ, ಮದುವೆಯಲ್ಲಿ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಖಚಿತಪಡಿಸುವ ಮತ್ತು ಅಂತರಕುಲ, ಅಂತರಧರ್ಮದ, ಹಾಗೂ ಸಮಾನ-ಲಿಂಗ ಜೋಡಿಗಳ ಮದುವೆಗಳನ್ನು ಕಾನೂನುಬದ್ಧವಾಗಿ ಗುರುತಿಸುವ ಕಡೆಗೆ ಸಾಮಾನ್ಯ ಪ್ರವೃತ್ತಿ ಕಂಡುಬಂದಿದೆ. ಅನೇಕ ವೇಳೆ, ಸಮಾನತೆಯನ್ನು ಸ್ಥಾಪಿಸುವ ಮತ್ತು ಮಾನವ ಹಕ್ಕುಗಳನ್ನು ಎತ್ತಿಹಿಡಿಯುವ ಬಯಕೆಯಿಂದ ಈ ಪ್ರವೃತ್ತಿಗಳು ಪ್ರೇರಿತವಾಗಿವೆ.
ಮದುವೆಯು ರಾಜ್ಯ, ಸಂಸ್ಥೆ, ಧಾರ್ಮಿಕ ಪ್ರಾಧಿಕಾರ, ಬುಡಕಟ್ಟು ಗುಂಪು, ಸ್ಥಳೀಯ ಸಮುದಾಯ ಅಥವಾ ಸಮಾನಸ್ಕಂಧರಿಂದ ಗುರುತಿಸಲ್ಪಡಬಹುದು. ಇದನ್ನು ಸಾಮಾನ್ಯವಾಗಿ ಒಂದು ಒಪ್ಪಂದವಾಗಿ ನೋಡಲಾಗುತ್ತದೆ. ಕೆಲವು ದೇಶಗಳಲ್ಲಿ ಅಸ್ತಿತ್ವದಲ್ಲಿರದ ಸಿವಿಲ್ ಮದುವೆಯು ಮದುವೆಗೆ ಸ್ವಾಭಾವಿಕವಾದ ಹಕ್ಕುಗಳು ಹಾಗೂ ಕರ್ತವ್ಯಗಳನ್ನು ಸೃಷ್ಟಿಸುತ್ತದೆ ಎಂದು ಗುರುತಿಸಲಾದ, ನ್ಯಾಯವ್ಯಾಪ್ತಿಯ ಮದುವೆಯ ಕಾನೂನುಗಳಿಗೆ ಅನುಗುಣವಾಗಿ, ಒಂದು ಸರ್ಕಾರಿ ಸಂಸ್ಥೆಯು ನಡೆಸಿಕೊಡುವ ಧಾರ್ಮಿಕ ಒಳವಸ್ತುವಿಲ್ಲದ ಮದುವೆಯಾಗಿದೆ.
ಮದುವೆಗಳನ್ನು ಜಾತ್ಯತೀತ ನಾಗರಿಕ ಸಮಾರಂಭದಲ್ಲಿ ಅಥವಾ ಒಂದು ಧಾರ್ಮಿಕ ಹಿನ್ನೆಲೆಯಲ್ಲಿ ವಿವಾಹ ಸಮಾರಂಭದ ಮೂಲಕ ನಡೆಸಬಹುದು. ಸಾಮಾನ್ಯವಾಗಿ ಮದುವೆಯ ಕ್ರಿಯೆಯು ಒಳಗೊಂಡ ವ್ಯಕ್ತಿಗಳ ನಡುವೆ ಮತ್ತು ಅವರು ಉತ್ಪತ್ತಿ ಮಾಡಬಹುದಾದ ಯಾವುದೇ ಸಂತತಿಯ ನಡುವೆ ಪ್ರಮಾಣಕ ಅಥವಾ ಕಾನೂನಾತ್ಮಕ ಬಾಧ್ಯತೆಗಳನ್ನು ಸೃಷ್ಟಿಸುತ್ತದೆ.
ಕಾನೂನಾತ್ಮಕ ಮನ್ನಣೆಗೆ ಸಂಬಂಧಿಸಿದಂತೆ, ಬಹುತೇಕ ಗಣರಾಜ್ಯಗಳು ಮತ್ತು ಇತರ ನ್ಯಾಯವ್ಯಾಪ್ತಿಗಳು ಮದುವೆಯನ್ನು ವಿರುದ್ಧ ಲಿಂಗಿ ದಂಪತಿಗಳಿಗೆ ಸೀಮಿತಗೊಳಿಸುತ್ತವೆ ಮತ್ತು ಇಳಿಕೆಯಾಗುತ್ತಿರುವ ಸಂಖ್ಯೆಯ ನ್ಯಾಯವ್ಯಾಪ್ತಿಗಳು ಬಹುಪತ್ನಿತ್ವ, ಬಾಲ್ಯವಿವಾಹಗಳು, ಮತ್ತು ಬಲವಂತದ ಮದುವೆಗಳನ್ನು ಅನುಮತಿಸುತ್ತವೆ. ಇಪ್ಪತ್ತನೇ ಶತಮಾನದಿಂದೀಚೆಗೆ, ಹೆಚ್ಚುತ್ತಿರುವ ಸಂಖ್ಯೆಯ ದೇಶಗಳು ಮತ್ತು ಇತರ ನ್ಯಾಯವ್ಯಾಪ್ತಿಗಳು ಅಂತರಜನಾಂಗೀಯ ಮದುವೆ, ಅಂತರಧರ್ಮೀಯ ಮದುವೆ ಮತ್ತು ತೀರ ಇತ್ತೀಚೆಗೆ ಸಲಿಂಗ ಮದುವೆ ಮೇಲಿನ ನಿಷೇಧವನ್ನು ತೆಗೆದಿವೆ ಮತ್ತು ಇವಕ್ಕೆ ಕಾನೂನು ಮನ್ನಣೆಯನ್ನು ಸ್ಥಾಪಿಸಿವೆ.
ಕೆಲವು ಸಂಸ್ಕೃತಿಗಳು ವಿಚ್ಛೇದನ ಅಥವಾ ಅನೂರ್ಜಿತಗೊಳಿಸುವಿಕೆ ಮೂಲಕ ಮದುವೆಯು ಮುಕ್ತಾಯವನ್ನು ಅನುಮತಿಸುತ್ತವೆ. ಕೆಲವು ಪ್ರದೇಶಗಳಲ್ಲಿ, ಅಭ್ಯಾಸದ ವಿರುದ್ಧ ರಾಷ್ಟ್ರೀಯ ಕಾನೂನುಗಳ ಹೊರತಾಗಿಯೂ ಬಾಲ್ಯವಿವಾಹಗಳು ಮತ್ತು ಬಹುಪತ್ನಿತ್ವವು ಆಗಬಹುದು.
Remove ads
ಮದುವೆಯಾಗುವಂತೆ ಪೋಷಕರು ಮಕ್ಕಳನ್ನು ಒತ್ತಾಯಿಸುವುದು ಭಾರತದಂತಹಾ ದೇಶಗಳಲ್ಲಿ ಇಂದಿಗೂ ಸಾಮಾನ್ಯ ಸಂಗತಿ ಇದಕ್ಕೆ ಹಲವಾರು ಕಾರಣಗಳೂ ಇವೆ. ಕೆಲವನ್ನು ಇಲ್ಲಿ ಪಟ್ಟಿಮಾಡಲಾಗಿದೆ.
- ಅಧಿಕಾರದ ಪ್ರಾಬಲ್ಯ.
- ಪೋಷಕರು ಬೆಳೆದು ಬಂದ ರೀತಿ.
- ಸರಿಯಾದ ಶಿಕ್ಷಣದ ಕೊರತೆ.
- ಜವಾಬ್ದಾರಿಯನ್ನು ಪೂರೈಸುವ ತವಕ.
- ಇತರರನ್ನು ಎದುರಿಸುವ ತಲೆನೋವನ್ನು ತಪ್ಪಿಸಲು.
- ಕೆಟ್ಟ ಆರೋಗ್ಯ ಪರಿಸ್ಥಿತಿಗಳಿಂದಾಗಿ.
- ತಮ್ಮ ಮಕ್ಕಳನ್ನು ಹೆಚ್ಚು ಜವಾಬ್ಧಾರರನ್ನಾಗಿ ಮಾಡಲು.
- ಆರ್ಥಿಕ ಸಮಸ್ಯೆ ಅಥವಾ ಪ್ರಯೋಜನಗಳಿಂದಾಗಿ.
- ಇದೇ ವಯಸ್ಸಿನ ಮಕ್ಕಳು ಈಗಾಗಲೇ ಮದುವೆಯಾಗಿದ್ದಾರೆ.
- ಪೋಷಕರು ನಿಜವಾದ ಕಾಳಜಿಯಿಂದ ಮದುವೆಯಾಗಲು ಒತ್ತಾಯಿಸುತ್ತಾರೆ.
Remove ads
- ಜೀವನದಲ್ಲಿ ಸಂಬಂಧಗಳು ಮತ್ತು ಮದುವೆಯ ಪಾತ್ರವನ್ನು ತಿಳಿದುಕೊಳ್ಳುವುದು.
- ತಮ್ಮನ್ನು ತಾವು ಪ್ರಶ್ನಿಸಿಕೊಳ್ಳುವುದು.
- ಒಮ್ಮತಕ್ಕಾಗಿ ವಿಚಾರವಿನಿಮಯದ ಕಲೆಯನ್ನು (Negotiation) ಕಲಿಯುವುದು.[೧]
ಉಲ್ಲೇಖಗಳು
Wikiwand - on
Seamless Wikipedia browsing. On steroids.
Remove ads